ಕಾಲಿಗೆ ಬಿದ್ದು ಮತಯಾಚನೆ
ಕೊಳ್ಳೇಗಾಲ: ನನ್ನನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಬಿಎಸ್ಸಾರ್ನ 13ನೇ ವಾರ್ಡ್ ಅಭ್ಯರ್ಥಿ ಮಧುಚಂದ್ರ ಮತದಾರರ ಕಾಲಿಗೆ ಬಿದ್ದು ಸೋಮವಾರ ಮತ ಯಾಚಿಸಿದರು.
ಬೆಳಗ್ಗಿನಿಂದ ಸಂಜೆವರೆಗೂ ಮನೆ ಮನೆಗೆ ತೆರಳಿ ಮತ ಯಾಚಿಸಿದರಲ್ಲದೆ ಹಿರಿಯರ ಕಾಲಿಗೆ ನಮಸ್ಕರಿಸಿ ನಾನು ಇತರರಂತೆ ಭರವಸೆ ನೀಡಲಾರೆ. ವಾರ್ಡ್ ಅಭಿವೃದ್ಧಿಗೆ ಸ್ಪಂದಿಸುತ್ತೇನೆ ಎಂದು ಕಾಲಿಗೆ ಬಿದ್ದು ಮತ ಯಾಚಿಸಿದರು.
ಅಭ್ಯರ್ಥಿಗಳ ಪರ ಕಿರುತೆರೆ-ಹಿರಿತೆರೆ ನಟರಾದ ಮೈಕೊ ನಾಗರಾಜು, ಮೈಕೊ ಶಿವಕುಮಾರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಣ್ಣ ಮನೆ ಮನೆಗೆ ತೆರಳಿ ಮತ ಯಾಚಿಸಿದರು.
ಯುವ ಮುಖಂಡರಾದ ಶಂಕರ, ರಾಜಣ್ಣ, ಶಿವಕುಮಾರ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.