ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಾಮರಾಜನಗರ

ಇಂದು ಪ್ರೊ.ಕೆಆರ್‌ಎಂ ರಾಜಿನಾಮೆ

Parashurama
Updated On : 19 Mar 2013, 10:29 am

ಕ.ಪ್ರ.ವಾರ್ತೆ ್ಣ ಚಾಮರಾಜನಗರ ್ಣ ಮಾ.19
ಬಿಜೆಪಿ ಪ್ರಾಥಮಿಕ ಸದಸ್ಯತ್ವ ಮತ್ತು ಮೈಸೂರು- ಚಾಮರಾಜನಗರ ಜಿಲ್ಲಾ ಸ್ಥಳೀಯ ಸಂಸ್ಧೆಗಳ ವಿಧಾನಪರಿಷತ್ ಸ್ಥಾನಕ್ಕೆ ಮಾ.20ರಂದು ರಾಜಿನಾಮೆ ಸಲ್ಲಿಸುತ್ತೇನೆ ಎಂದು ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ತಿಳಿಸಿದರು.
ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಜನತೆಗೆ ಅಪೇಕ್ಷೆ ಮೇರೆಗೆ ನಾನು ಬಿಜೆಪಿ ತೊರೆದು ಕೆಜೆಪಿಗೆ ಸೇರ್ಪಡೆಯಾಗಿದ್ದೇನೆ. ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವ ಮೂಲಕ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ನಗರ ಸ್ದಳೀಯ ಸಂಸ್ದೆಗಳ ಚುನಾವಣೆಗೆ ಮುನ್ನವೇ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆ. ಇದೇ
ಸಂದರ್ಭದಲ್ಲಿ ಪ್ರಾಥಮಿಕ ಸದಸ್ಯ ಸ್ದಾನಕ್ಕೂ ರಾಜಿನಾಮೆ ನೀಡುಲು ಮುಂದಾಗಿದ್ದೆ. ಪಕ್ಷದ ವರಿಷ್ಠರು ತಕ್ಷಣಕ್ಕೆ ರಾಜಿನಾಮೆ ನೀಡಬೇಡಿ ಎಂದು ಸೂಚನೆ ನೀಡಿದ್ದರು. ಇದೀಗ ಪಕ್ಷ ಮತ್ತು ವಿಧಾನಪರಿಷತ್ ಸ್ಥಾನ ಎರಡಕ್ಕೂ ಒಟ್ಟಿಗೆ ರಾಜಿನಾಮೆ ಸಲ್ಲಿಸುತ್ತಿದ್ದೇನೆ ಎಂದರು.
ಯಡಿಯೂರಪ್ಪ ಅವರು ನನ್ನ ಸಂಘಟನೆಯನ್ನು ಗುರುತಿಸಿ 2009ರಲ್ಲಿ ವಿಧಾನ ಪರಿಷತ್‌ಗೆ ಕಳುಹಿಸಿದ್ದರು. ಆದರೆ, ನಾನು ಬಿಜೆಪಿ ತೊರೆಯುತ್ತಿರುವುದರಿಂದ ಅಧಿಕಾರವಧಿ ಇನ್ನು 2 ವರ್ಷ 10 ತಿಂಗಳು ಬಾಕಿ ಇರುವಾಗಲೇ ರಾಜಿನಾಮೆ ನೀಡುತ್ತಿದ್ದೇನೆ. ಕೆಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದರು.
ನಾನು ಕಳೆದ 2008ರ ಚುನಾವಣೆಯಲ್ಲಿ ಸ್ವಯಂ ನಿವೃತ್ತಿ ಪಡೆದು ಬಿಜೆಪಿಗೆ ಸೇರ್ಪಡೆಯಾದೆ. ಯಡಿಯೂರಪ್ಪ ಅವರು ಪಕ್ಷ ಸಂಘಟನೆಗೆ ಸಾಕಷ್ಟು ಪ್ರೋತ್ಸಾಹ ನೀಡಿದರು. ಜೊತೆಗೆ 6 ತಿಂಗಳಲ್ಲೇ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಅಧ್ಯಕ್ಷ ಸ್ಥಾನ ನೀಡಿದರು. ಇದರ ಬೆನ್ನಲ್ಲೇ ವಿಧಾನಪರಿಷತ್ ಟಿಕೆಟ್ ನೀಡುವ ಮೂಲಕ ಆಯ್ಕೆಯಾಗಲು ಕಾರಣರಾದರು. ಜೊತೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಹೊಣೆ ನೀಡಿದ್ದರು ಎಂದು ಅವರು ತಿಳಿಸಿದರು.
ವಿಧಾನಪರಿಷತ್ ಸದಸ್ಯನಾದ 3 ವರ್ಷದ ಅವಧಿಯಲ್ಲಿ ಬಂದ 3 ಕೋಟಿ ಅನುದಾನದಲ್ಲಿ ಹಳ್ಳಿಗಳಿಗೆ ಬಸ್ ತಂಗುದಾಣ, ರಸ್ತೆ ಅಭಿವೃದ್ಧಿ, ಚರಂಡಿ, ಶಾಲಾ- ಕಾಲೇಜುಗಳ ಮತ್ತು ಕೊಠಡಿಗಳು, ಶಾಲೆಯ ಶೌಚಾಲಯಗಳು, ಡಾ. ಬಿ.ಆರ್. ಅಂಬೇಡ್ಕರ್ ಭವನ, ಬಸವ ಭವನಗಳು ಮತ್ತು ವಿವಿಧ ಜನಾಂಗಗಳ ಸಮುದಾಯ ಭವನಗಳು ಸೇರಿದಂತೆ ಹಲವಾರು ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದರು.
ಜಿಲ್ಲೆಯ ಬರ ಪರಿಹಾರ ಕಾಮಗಾರಿಗೆ ಸರ್ಕಾರದ ಮೇಲೆ ಒತ್ತಡ ತಂದು 12.50 ಕೋಟಿ, ಎಂಜಿನಿಯರಿಂಗ್ ಕಾಲೇಜು ಕಟ್ಟಡಕ್ಕೆ 18 ಕೋಟಿ, ಬಿಡುಗಡೆ ಮಾಡಿಸಲಾಗಿದೆ. 297 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಮತ್ತು ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಪ್ರಮಾಣಿಕ ಪ್ರಯತ್ನ ಮಾಡಲಾಗಿದೆ ಎಂದರು.
ಸರ್ಕಾರದ ವತಿಯಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಪಡಿಸುವ ಜೊತೆಗೆ ಶ್ರೀಮಲೆಮಹದೇಶ್ವರ ದೇವಸ್ಥಾನ, ಬಿಳಿಗಿರಿರಂಗನಬೆಟ್ಟ ಮತ್ತು ಗೋಪಾಲಸ್ವಾಮಿ ಬೆಟ್ಟದ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ, ಜಿಲ್ಲೆಯ ವಾಲ್ಮೀಕಿ ಭವನ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಅರಿಶಿನ ಬೆಳೆಗಾರರ ಮಾರುಕಟ್ಟೆ, ಆಸ್ಪತ್ರೆ ಉನ್ನತೀಕರಣ, ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ, ಜಿಲ್ಲೆಯ ಪಟ್ಟಣ ವ್ಯಾಪ್ತಿಯಲ್ಲಿ ಕೊಳಚೆ ಪ್ರದೇಶ ಅಭಿವೃದ್ಧಿ, ಜಿಲ್ಲೆಯ ಮುಖ್ಯ ರಸ್ತೆಗಳ ಉನ್ನತೀಕರಣ, ಇನ್ನೂ ಹಲವು ಕಾಮಗಾರಿಗಳಿಗೆ ನೂರಾರು ಕೋಟಿ ಹಣ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸುಮಾರು 300ಕ್ಕೂ ಹೆಚ್ಚು ಹೃದಯ ಕಾಯಿಲೆ, ಕಿಡ್ನಿ ಕಾಯಿಲೆ, ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಗರಿಷ್ಠ ಮಟ್ಟದಲ್ಲಿ ಹಣ ಬಿಡುಗಡೆ ಮಾಡಿಸಿದ್ದು, ಸುಮಾರು 200ಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಸಂಘ ಸಂಸ್ದೆಗಳ ಉದ್ಯೋಗ ಕೊಡಿಸಿದ್ದೇನೆ ಎಂದರು.
ಅಕ್ರಮವಾಗಿ ನಿವೇಶನ ಪಡೆದಿಲ್ಲ:  ಬೆಂಗಳೂರಿನ ಬಿಡಿಎ ವತಿಯಿಂದ ಅಕ್ರಮವಾಗಿ ಯಾವುದೇ ನಿವೇಶನ ಪಡೆದಿಲ್ಲ. ಸರ್ಕಾರ ಎಲ್ಲ ಶಾಸಕರಿಗೂ ನೀಡುವಂತೆ ನನಗೂ ನಿವೇಶನ ನೀಡಿದೆ. ಅದಕ್ಕೆ ನಾನು ಹಣ ಕಟ್ಟಿದ್ದೇನೆ. ಇನ್ನು ನನ್ನ ಹೆಸರಿಗೆ ಬಂದಿಲ್ಲ. ನನ್ನ ಹಾಗೂ ನನ್ನ ಕುಟುಂಬದ ಯಾರ ಹೆಸರಿಗೂ ಸರ್ಕಾರದ ವತಿಯಿಂದ ನಿವೇಶನ ಪಡೆದಿಲ್ಲ ಎಂದು ಅವರು ಸ್ವಷ್ಪಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments