ಅಸಮರ್ಪಕ ವಿದ್ಯುತ್: ಆಕ್ರೋಶ
ಕೊಳ್ಳೇಗಾಲ: ತಾಲೂಕಿನ ಮುಳ್ಳೂರು ಗ್ರಾಮದ ರಾಯಪ್ಪ ಟಿಸಿಯನ್ನು ಮಂಗಿಹುಂಡಿ, ಕಲಿಯೂರು ಗ್ರಾಮಕ್ಕೆ ವಿಸ್ತರಿಸಿರುವ ಅಧಿಕಾರಿಗಳ ಕ್ರಮ ಖಂಡಿಸಿ ಗ್ರಾಮಸ್ಥರು ಹಿರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು.
ಗುರುವಾರ ಮುಳ್ಳೂರಿನ ನೂರಾರು ಗ್ರಾಮಸ್ಥರು ಸೆಸ್ಕ್ ಇಲಾಖೆ ಎದುರು ಜಮಾಯಿಸಿ ಅಧಿಕಾರಿಗಳ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡರು. ಟಿಸಿ ವಿಸ್ತಾರ ಮಾಡಿರುವುದರಿಂದ ಸಮರ್ಪಕ ವಿದ್ಯುತ್ ದೊರೆಯುತ್ತಿಲ್ಲ. ಗ್ರಾಮದಲ್ಲಿ ಕಡಿಮೆ ವಿದ್ಯುತ್ ಪೂರೈಕೆಯಾಗುತ್ತಿದೆ. ಪರೀಕ್ಷೆ ವೇಳೆ ವಿದ್ಯುತ್ ಕಡಿತಗೊಳ್ಳುತ್ತಿರುವುದರಿಂದ ಮಕ್ಕಳಿಗೂ ತೊಂದೆರಯಾಗುತ್ತಿದೆ. ಟಿಸಿ ವಿಸ್ತಾರದಿಂದ ಇತರೆ ಕೆಲಸ ಕಾರ್ಯಗಳಿಗೂ ತೀವ್ರ ತೊಂದರೆಯಾಗುತ್ತಿದ್ದು ತಕ್ಷಣ ಸರಿಪಡಿಸಬೇಕು ಎಂದರು. ಚೇತನ್, ರಘು, ವೆಂಕಟೇಶ, ಗ್ರಾಪಂ ಅಧ್ಯಕ್ಷ ನಂಜುಂಡಿ, ರಾಣಿ, ರವಿ, ಮಹದೇವ, ಶಂಕರಪ್ಪ, ಕುಮರಾ, ಜಯಶಂಕರ, ರಾಜೇಶ, ಮಂಗಳಮ್ಮ, ಪುಟ್ಟಸ್ವಾಮಿ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.