ಕೊಳ್ಳೇಗಾಲ: 'ಕೈ' ಟಿಕೆಟ್ಗೆ 16 ಮಂದಿ ಫೈಟ್
ಕ.ಪ್ರ. ವಾರ್ತೆ ್ಣ ಕೊಳ್ಳೇಗಾಲ ್ಣ ಮಾ.21
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಮುಂಬರುವ ಚುನಾವಣೆಗೆ ಕಾಂಗ್ರೆಸ್ನಿಂದ 16 ಮಂದಿ ಟಿಕೆಟ್ಗೆ ಅರ್ಜಿ ಸಲ್ಲಿಸಿದ್ದು, ಇದೀಗ ಆಕಾಂಕ್ಷಿಗಳ ಸಂಖ್ಯೆಯೇ ಪಕ್ಷಕ್ಕೆ ದೊಡ್ಡ ತಲೆನೋವಾಗಿದೆ.
16 ಮಂದಿ ಪೈಕಿ ಇಡಿ ಕ್ಷೇತ್ರದ ಜನತೆಯೊಂದಿಗೆ ಒಡನಾಟ ಮತ್ತು ವೈಯಕ್ತಿಕ ವರ್ಚಸ್ಸುಳ್ಳ ಅಭ್ಯರ್ಥಿಗಳು ಇಲ್ಲದಿರುವುದರಿಂದ ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬ ಚರ್ಚೆ ನಡೆಯುತ್ತಿದೆ.
2008ರ ಚುನಾವಣೆಯಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಎಸ್.ಜಯಣ್ಣ ಅವರ ಮನವೊಲಿಸಿ ಧ್ರುವನಾರಾಯಣ ಅವರಿಗೆ ಟಿಕೆಟ್ ನೀಡಲಾಗಿತ್ತು. 2009ರಲ್ಲಿ ಅವರು ಸಂಸತ್ಗೆ ಆಯ್ಕೆಯಾಗಿದ್ದರಿಂದ ಉಪ ಚುನಾವಣೆಯಲ್ಲಿ ಜಯಣ್ಣ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಅವರು ಸೋಲು ಅನುಭವಿಸಿದ್ದರು. ಇದೀಗ ಜಯಣ್ಣ ಮತ್ತೆ ಟಿಕೆಟ್ ಪಡೆಯಲು ವಿಧಾನಸಭಾ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೊರೆ ಹೋಗಿದ್ದಾರೆ.
ಜಿಪಂ ಸದಸ್ಯ ಬಿ.ಪಿ.ಪುಟ್ಟಬುದ್ಧಿ ಮತ್ತು ಮಾಂಬಳ್ಳಿ ನಂಜುಂಡಸ್ವಾಮಿ ಸಹ ಟಿಕೆಟ್ಗಾಗಿ ಪೈಪೋಟಿ ನಡೆಸುತ್ತಿದ್ದು, ಸಿದ್ದರಾಮಯ್ಯ, ಧ್ರುವನಾರಾಯಣ, ವಿ.ಶ್ರೀನಿವಾಸ ಪ್ರಸಾದ್ ಅವರ ಕೃಪಾಕಟಾಕ್ಷ ಯಾರಿಗೆ ಒಲಿಯುತ್ತದೋ ಅವರಿಗೆ ಟಿಕೆಟ್ ದಕ್ಕಲಿದೆ. ಮಾಜಿ ಸಂಸದ ಎ.ಸಿದ್ದರಾಜು ಸಹ ಇದೇ ಕ್ಷೇತ್ರದಿಂದ ಟಿಕೆಟ್ ಬಯಸಿದ್ದು, ಮುಡಿಗುಂಡ ಗಣೇಶ ಕುಮಾರ್, ಕಿನಕಹಳ್ಳಿ ರಾಚಯ್ಯ, ಜಚನಿ ಡಿಇಡಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಎನ್.ನಟರಾಜು, ಮೈಸೂರು ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಸುಶೀಲಾ ಕೇಶವಮೂರ್ತಿ, ಶಶಿರೇಖಾ, ಲಿಂಗರಾಜು, ತಗರಪುರ ಪುಟ್ಟಮಾದಯ್ಯ, ವಡ್ಡಗೆರೆ ದಾಸು ಸೇರಿದಂತೆ 16 ಮಂದಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಶಾಸಕ ನಂಜುಂಡಸ್ವಾಮಿ ಸಹ ಕಾಂಗ್ರೆಸ್ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಮಾಜಿ ಶಾಸಕ ಜಯಣ್ಣ ಸುದ್ದಿಗೋಷ್ಠಿಯೊಂದರಲ್ಲಿ ನಂಜುಂಡಸ್ವಾಮಿ ಕಾಂಗ್ರೆಸ್ ಟಿಕೆಟ್ ತಂದರೂ ಅಚ್ಚರಿ ಇಲ್ಲ. ಚಾಣಾಕ್ಷತನದಿಂದ ಶಾಸಕರಾಗಿದ್ದಾರೆ. ಬಿಜೆಪಿಯಲ್ಲಿದ್ದರೂ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆ ನೀಡಿದ್ದರು.
ಜಯಣ್ಣ ಇಲ್ಲವೇ ಪುಟ್ಟಬುದ್ದಿ ಅಭ್ಯರ್ಥಿ ಸಾಧ್ಯತೆ: ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಜಯಣ್ಣ ಇಲ್ಲವೇ ಜಿಪಂ ಸದಸ್ಯ ಬಾಗಳಿ ಪುಟ್ಟಬುದ್ದಿ ಅವರಿಗೆ ಟಿಕೆಟ್ ನೀಡಲು ವರಿಷ್ಠರು ಮುಂದಾಗಿದ್ದಾರೆ.
ಸಿದ್ದರಾಯಮಯ್ಯ ಜಯಣ್ಣ ಪರ, ಸಂಸದ ಆರ್. ಧ್ರುವನಾರಾಯಣ ಪುಟ್ಟಬುದ್ದಿ ಪರ, ಶ್ರೀನಿವಾಸ ಪ್ರಸಾದ್ ಮಾಂಬಳ್ಳಿ ನಂಜುಂಡಸ್ವಾಮಿ ಪರ ಒಲವು ತೋರಿದ್ದಾರೆ. ಆದರೂ, ಜಯಣ್ಣ ಇಲ್ಲವೇ ಪುಟ್ಟಬುದ್ಧಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.