ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಾಮರಾಜನಗರ

ಪೋಲಿಂಗ್ ಬೂತ್ ಏಜೆಂಟ್ ಆದ ಸರ್ಕಾರಿ ನೌಕರ

Parashurama
Updated On : 21 Mar 2013, 10:41 am

ಕ.ಪ್ರ. ವಾರ್ತೆ ್ಣ ಕೊಳ್ಳೇಗಾಲ ್ಣ ಮಾ.21
ಸರ್ಕಾರಿ ನೌಕರನೊಬ್ಬ ಇತ್ತೀಚೆಗೆ ನಡೆದ ಪಪಂ ಚುನಾವಣೆಯಲ್ಲಿ ನಿಯಮ ಮೀರಿ ಪಕ್ಷವೊಂದರ ಪರ ಪೋಲಿಂಗ್ ಬೂತ್ ಏಜೆಂಟರಾಗಿ ಕೆಲಸ ಮಾಡಿ ಇದೀಗ ಸಿಕ್ಕಿ ಬಿದ್ದು ಪ್ರಜ್ಞಾವಂತ ನಾಗರಿಕರ ಕೆಂಗಣ್ಣಿಗೆ ಗುರಿಯಾಗಿರುವ ಘಟನೆ ಹನೂರಿನಲ್ಲಿ ಜರುಗಿದೆ.  
ಮಾ.7ರಂದು ನಡೆದ ಪಪಂ ಚುನಾವಣೆ ಸಂದರ್ಭದಲ್ಲಿ ಪೋಲಿಂಗ್ ಏಜೆಂಟರಾಗಿ ಕರ್ತವ್ಯ ನಿರ್ವಹಿಸಿದ್ದು ಬೇರಾರೂ ಅಲ್ಲ, ಕೊಳ್ಳೇಗಾಲ ಟಿಎಪಿಸಿಎಂಎಸ್‌ನ ಮಾರುಕಟ್ಟೆಯ ಗುಮಾಸ್ತ ಅರ್ಥಾತ್ ಸರ್ಕಾರಿ ನೌಕರ ಲಿಂಗರಾಜು. ಇವರು ಕಾಂಗ್ರೆಸ್ ಅಭ್ಯರ್ಥಿಯಾಗಿ 11ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಕೆ.ರಾಜೂಗೌಡ ಅವರ ಪರ ಕೆಲಸ ಮಾಡಲು ಹೋಗಿ ಈಗ ಸಿಕ್ಕಿ ಬಿದ್ದಿದ್ದಾರೆ. ಮಾತ್ರವಲ್ಲ, ಪೋಲಿಂಗ್ ಬೂತ್ ಏಜೆಂಟರಾಗಿ ಕೆಲಸ ಮಾಡಿದ್ದಕ್ಕೆ 2ನೇ ಏಜೆಂಟರಾಗಿ ಸಹಿ ಕೂಡ ಹಾಕಿದ್ದಾರೆ.
ಏನಿದು ಪ್ರಕರಣ?: ಲಿಂಗರಾಜು ಸರ್ಕಾರಿ ನೌಕರನಾಗಿದ್ದು ಪೋಲಿಂಗ್ ಬೂತ್ ಏಜೆಂಟರಾಗಿ ಕೆಲಸ ನಿರ್ವಹಿಸುವಂತಿಲ್ಲ. ಆದರೂ ನಿಯಮ ಉಲ್ಲಂಘಿಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ.  ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹನೂರು ಪ್ರಜ್ಞಾವಂತ ನಾಗರಿಕರ ಹೆಸರಿನಲ್ಲಿ ಸುಮಾರು 8 ಮಂದಿ ಸಹಿ ಹಾಕಿ ಚುನಾವಣಾಧಿಕಾರಿ ಸ್ವಾಮಿ ಅವರಿಗೆ ದೂರು ಸಲ್ಲಿಸಿದ್ದಾರೆ.   
ದೂರಿನಲ್ಲಿ ಏನಿದೆ?: ಲಿಂಗರಾಜು ಅವರು ಕೆ.ರಾಜೂಗೌಡ ಅವರ ಪರ ಕಾಂಗ್ರೆಸ್ ಪೋಲಿಂಗ್ ಏಜೆಂಟರಾಗಿ ಕೆಲಸ ಮಾಡಿದ್ದಾರೆ. 11ನೇ ವಾರ್ಡ್‌ನ ಚುನಾವಣೆ ಹನೂರು ಸರ್ಕಾರಿ ಶಾಲೆಯಲ್ಲಿ ನಡೆದ ಸಂದರ್ಭದಲ್ಲಿ ಲಿಂಗರಾಜು ಮತಗಟ್ಟೆಯಲ್ಲಿ ಪೋಲಿಂಗ್ ಬೂತ್ ಏಜೆಂಟರಾಗಿ ಕುಳಿತಿದ್ದ ಸಂದರ್ಭದಲ್ಲಿ ತೆಗೆದ ವೀಡಿಯೊ, ಮತಗಟ್ಟೆಯನ್ನು ಮುಕ್ತಾಯಗೊಳಿಸಿ ಸೀಜ್ ಮಾಡಿದ ಗುಂಪಿನ ಭಾವಚಿತ್ರದಲ್ಲಿ ಇವರ ಫೋಟೋ ಹಾಗೂ ವೀಡಿಯೋ ಚಿತ್ರೀಕರಣವಾಗಿದೆ.
ಇದಲ್ಲದೆ ಚುನಾವಣೆ ಮುನ್ನವೂ ಕಾಂಗ್ರೆಸ್ ಅಭ್ಯರ್ಥಿ ಪರ ಬಹಿರಂಗವಾಗಿಯೇ ಮತ ಯಾಚಿಸಿಸುವ ಮೂಲಕ  ಸರ್ಕಾರಿ ನಿಯಮ ಉಲ್ಲಂಘಿಸಿ ತಮ್ಮ ನೌಕರಿಗೆ ಚ್ಯುತಿ ಬರುವ ರೀತಿ ನಡೆದುಕೊಂಡಿದ್ದಾರೆ. ಅಲ್ಲದೆ ಅಂತಿಮ ಹಂತದ ದಾಖಲಾದ ಮತಗಳ ಲೆಕ್ಕ ಪತ್ರದಲ್ಲೂ ಲಿಂಗರಾಜು ತಾವೇ ಸಹಿ ಮಾಡಿ ಸಿಕ್ಕಿಬಿದ್ದಿದ್ದಾರೆ.
ಈ ಸಂಬಂಧ ಚುನಾವಣಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಮಾ.18ರಂದು ನೀಡಿರುವ ದೂರಿನಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments