ಹನೂರಲ್ಲಿ 3ನೇ ಶಕ್ತಿ ಉದಯ
ಕೊಳ್ಳೇಗಾಲ: ಹನೂರು ಕ್ಷೇತ್ರ ಕುಟುಂಬ ರಾಜಕಾರಣಕ್ಕೆ ಮೀಸಲಾಗಿದ್ದು, ಈ ಬಾರಿ ಚುನಾವಣೆಯಲ್ಲಿ 3ನೇ ಶಕ್ತಿ ಉದಯವಾಗಲಿದೆ. ಆ 3ನೇ ಶಕ್ತಿಗೆ ಮತದಾರರು ಒಲಿಯಲಿದ್ದಾರೆ ಎಂದು ಬಿಜೆಪಿ ಹನೂರು ಕ್ಷೇತ್ರಾಧ್ಯಕ್ಷ ಬಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತನಾಗಿ 14 ವರ್ಷದಿಂದ ದುಡಿದಿದ್ದೇನೆ. ಈ ಬಾರಿ ನನಗೆ ಬಿಜೆಪಿ ಟಿಕೆಟ್ ನೀಡುವುದಾಗಿ ವರಿಷ್ಠರು ಆಶೀರ್ವಾದ ಮಾಡಿದ್ದಾರೆ. ಹನೂರು ಕ್ಷೇತ್ರದ ಜನರ ಹಾರೈಕೆಯಿಂದ ನಾನು 3ನೇ ಶಕ್ತಿಯಾಗಿ ರೂಪುಗೊಳ್ಳುತ್ತೇನೆ ಎಂದರು.
ಶಾಸಕರ ನಿರ್ಲಕ್ಷ್ಯ: ಹನೂರು ಕ್ಷೇತ್ರದಲ್ಲಿ ನೂರಾರು ಸಮಸ್ಯೆಗಳು ತಾಂಡವವಾಡುತ್ತಿವೆ. ಸ್ಥಳೀಯ ಶಾಸಕರು ನಾಗರಿಕರ ಬವಣೆ ನೀಗಿಸಲು ಮುಂದಾಗಿಲ್ಲ. ಹಾಗಾಗಿ ಹನೂರು ಜನತೆ ಇವರನ್ನು ಚುನಾವಣೆಯಲ್ಲಿ ದೂರವಿಟ್ಟು ತಕ್ಕ ಪಾಠ ಕಲಿಸುತ್ತಾರೆ ಎಂದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.