ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಾಮರಾಜನಗರ

ದಾಸನಹುಂಡಿಯಲ್ಲಿ ನಿಲ್ಲದ ನೀರಿನ ದಾಹ: ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ

Parashurama
Updated On : 26 Mar 2013, 10:12 am

ಯಳಂದೂರು: ಇಲ್ಲಿನ ದಾಸನಹುಂಡಿ ಗ್ರಾಮದಲ್ಲಿ ಅಂತರ್ಜಲ ಇದ್ದರೂ, ಸ್ಥಳೀಯ ಪಂಚಾಯಿತಿ ಆಡಳಿತ ವರ್ಗದ ಬೇಜವಾಬ್ದಾರಿಯಿಂದ ಕೆಟ್ಟು ಹೋಗಿರುವ ಕೈ ಪಂಪ್ ಹಾಗೂ ಸುಟ್ಟು ಹೋದ ಮೋಟಾರು ದುರಸ್ತಿಗೆ ಮುಂದಾಗದೆ ಇರುವುದರಿಂದ ಕೊಡ ನೀರಿಗಾಗಿ ನೀರೆಯರು ಅಕ್ಕ ಪಕ್ಕದ ಕೃಷಿ ಜಮೀನುಗಳಿಗೆ ಮೈಲಿ ದೂರ ಅಲೆಯಬೇಕಾದ ಸ್ಥಿತಿ ಉಂಟಾಗಿದೆ. ನೀರಿಗಾಗಿ ಕೃಷಿ ಪಂಪ್ ಸೆಟ್‌ಗಳಲ್ಲಿ ಕೃಷಿ ಚಟುವಟಿಕೆಗೆ ಬಳಸುವ ನೀರನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು 6 ಕೈ ಪಂಪ್ ಇದ್ದು, ಅದರಲ್ಲಿ 4 ಕೈಪಂಪ್ ದುರಸ್ತಿ ್ಥಯಲ್ಲಿದ್ದು, 2 ಕೈಪಂಪ್ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಆದರೆ, ಕೆಟ್ಟು ಹೋಗಿರುವ ಕೈ ಪಂಪ್‌ಗಳನ್ನು ದುರಸ್ತಿಪಡಿಸಲು ಮುಂದಾಗಿಲ್ಲ.  2 ಕೊಳವೆ ಬಾವಿಗಳ ಮೋಟಾರುಗಳು ಕೆಟ್ಟು  ಹೋಗಿವೆ. ಈ ನಿಟ್ಟಿನಲ್ಲಿ ನೀರಿನ ಸಮಸ್ಯೆ ಉಂಟಾಗಿದೆ.   ನಿರ್ಲಕ್ಷ್ಯ: ಸಮಸ್ಯೆ ನೀಗಿಸಲು ಜಿಪಂನಲ್ಲಿ ತುರ್ತು ಅನುದಾನ ಇದ್ದರೂ, ಕೂಡಾ ಜನಪ್ರತಿನಿಧಿಗಳು ಒಡಾಡಿಕೊಂಡು ನೀರಿನ ಸಮಸ್ಯೆ ಬಗೆಹರಿಸುವ ಬದಲು ಊರಿನ ಜನರಿಗೆ ಸಬೂಬು ಹೇಳಿಕೊಂಡು ಜಿಪಂ ಮತ್ತು ತಾಪಂ ಸದಸ್ಯರು ತಿರುಗಾಡುತ್ತಿದ್ದಾರೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.    ಉಡಾಫೆ ಉತ್ತರ: ನಾನೇನು  ಮಾಡಲಿ ರಿಪೇರಿ ಅಧಿಕಾರಿಗಳು ಕೆಲಸದವರನ್ನು ಕರೆತಂದು ರಿಪೇರಿ ಮಾಡಿಸಬೇಕು. ಸಮಸ್ಯೆ ಬಗ್ಗೆ ಗೊತ್ತಿಲ್ಲಾ ಎಂದು ಗ್ರಾಪಂ ಅಧ್ಯಕ್ಷ ಮಹೇಶ್ ಉಡಾಫೆ ಮಾತನಾಡುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments