ವಿಜೃಂಭಣೆಯ ದೊಡ್ಡಮ್ಮತಾಯಿ ಕೊಂಡೋತ್ಸವ
ಕಪ್ರವಾರ್ತೆ ಯಳಂದೂರು ಮಾ.26
ತಾಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ದೊಡ್ಡಮ್ಮತಾಯಿ ಕೊಂಡೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಗ್ರಾಮದಲ್ಲಿ ಕೊಂಡೋತ್ಸವ ನಡೆಸಲು ಉರುವಲಿಗೆ ಪೂಜೆ ಪುರಸ್ಕಾರ ನೆರವೇರಿಸಿದ ಬಳಿಕ ಅಗ್ನಿ ಸ್ಪರ್ಶ ಮಾಡಿದ ನಂತರ ಸೋಮವಾರ ಮುಂಜಾನೆಯಿಂದಲೇ ದೇವರಿಗೆ ಕುಂಕುಮ ಅರ್ಚನೆ, ಹಾಲಿನ ಅಭೀಷೇಕ, ಗಂಧದ ನೈವೇದ್ಯ, ತುಪ್ಪ ನೈವೇದ್ಯ, ಸೇರಿದಂತೆ ಹಲವಾರು ಅಭಿಷೇಕ ಮಾಡಿದ ಬಳಿಕ ವಿವಿಧ ಜಾತಿಯ ಹೂವುಗಳಿಂದ ಅಲಂಕಾರ ಮಾಡಿ, ಯಜ್ಞ, ಹೋಮ, ಹವನಗಳನ್ನು ಮಾಡಿದ ನಂತರ ಮಹಾ ಮಂಗಳಾರತಿ ಮಾಡಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಲಾಯಿತು.
ಸಂಜೆ 4 ಗಂಟೆಗೆ ಸತ್ತಿಗೆಸ ಸೂರಿ ಪಾನಿ, ಛತ್ರಿ ಚಾಮರಗಳೊಂದಿಗೆ ಊರಿನ ಹೊರ ವಲಯದಲ್ಲಿರುವ ಕೆರೆಯಲ್ಲಿ ದೊಡ್ಡಮ್ಮ ತಾಯಿಯ ವಿಗ್ರಹವನ್ನು ನೀರಿನಿಂದ ಶುದ್ಧೀಕರಿಸಿ, ಕೆರೆಯಲ್ಲಿ ಪೂಜೆ ಮಾಡಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆ ನಂತರ ಕೊಂಡೋತ್ಸವ ನಡೆಯಿತು. ಜಾತ್ರೆಯಲ್ಲಿ ತಾಲೂಕಿನ ನಾನಾ ಊರುಗಳಿಂದ ಭಕ್ತರು ಆಗಮಿಸಿದ್ದರು.ಹಬ್ಬದ ವಿಶೇಷವಾಗಿ ಗ್ರಾಮದಲ್ಲಿ ದೀಪಾಲಂಕಾರ, ಹಸಿರು ತೋರಣ ಸೇರಿದಂತೆ ವಿವಿಧ ಹೂಗಳನ್ನು ಕಟ್ಟಲಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.