ಸೋಮಣ್ಣ ಪರ ಜೆಡಿಎಸ್ ಕಾರ್ಯಕರ್ತ ಬ್ಯಾಟಿಂಗ್!
ಕೊಳ್ಳೇಗಾಲ: ಸೋಮಣ್ಣ ಹನೂರಿಗೆ ಕೆಜೆಪಿ ಅಭ್ಯರ್ಥಿಯಾಗಿ ಆಗಮಿಸುತ್ತಿದ್ದಾರೆ ಎಂಬ ವಿಚಾರ ಹರಿದಾಡುತ್ತಿದ್ದಂತೆ ಕಾರ್ಯಕರ್ತರೊಬ್ಬರು ಸೋಮಣ್ಣ ಪರ ಮತಯಾಚನೆ ಮಾಡುತ್ತಿದ್ದಾರೆ.
ಮತಯಾಚನೆ ಮಾಡುತ್ತಿರುವವರು ಕೆಜೆಪಿ ಪಕ್ಷದವರಲ್ಲ, ಅವರು ಜೆಡಿಎಸ್ ಕಾರ್ಯಕರ್ತ ಎಂಬುದೇ ಇಲ್ಲಿ ಅಚ್ಚರಿಗೆ ಕಾರಣವಾಗಿದೆ.ಸೋಮಣ್ಣ ಪರ ಮತಯಾಚಿಸುತ್ತಿರವವರು ಬೇರಾರು ಅಲ್ಲ ಜೆಡಿಎಸ್ ಕಾರ್ಯಕರ್ತ ಪೆದ್ದನಪಾಳ್ಯ ಮಣಿ. ಜಿಲ್ಲಾ ಪಂಚಾಯ್ತಿಯಲ್ಲಿ ಮಾರ್ಟಳ್ಳಿ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ನೀಡದ ಹಿನ್ನೆಲೆ ಪಕ್ಷೇತರವಾಗಿ ಸ್ಪರ್ಧಿಸಿ ಒಂದೂವರೆ ಸಾವಿರ ಮತಪಡೆದಿದ್ದ ಮಣಿ. ನಂತರ ಜೆಡಿಎಸ್ನಲ್ಲೆ ಉಳಿದಿದ್ದರು. ಆದರೆ, ಈಗ ಸೋಮಣ್ಣ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಮೂಲ ಸೌಲಭ್ಯ ಕಲ್ಪಿಸಿದ್ದಾರೆ: ನನ್ನ ಮೇಲೆ ಹಾಗೂ ನಮ್ಮ ಗ್ರಾಮದ ಹಲವರ ಮೇಲೆ ಹಾಕಲಾಗಿದ್ದ ಪ್ರಕರಣವನ್ನು ಸಚಿವ ಸೋಮಣ್ಣ ವಜಾಗೊಳಿಸುವಂತೆ ಮಾಡಿದ್ದಾರೆ. ಮಾರ್ಟಳ್ಳಿ ಸೇರಿದಂತೆ ಹಲವು ಗ್ರಾಮದ ರಸ್ತೆ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಿದ್ದಾರೆ. ಹಾಗಾಗಿ, ಸೋಮಣ್ಣ ನಾಮಪತ್ರ ಸಲ್ಲಿಸುತ್ತಿದ್ದಂತೆ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಪೆದ್ದನಪಾಳ್ಯ ಮಣಿ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.