ಚಾಮರಾಜನಗರ

ಬಸವ ಜಯಂತಿ 100ನೇ ವರ್ಷಾಚರಣೆ ಅಗತ್ಯ: ಜತ್ತಿ

ಕ.ಪ್ರ.ವಾರ್ತೆ ್ಣ ಚಾಮರಾಜನಗರ ್ಣ ಮಾ.30
ಬಸವ ಜಯಂತಿ ಶತಮಾನೋತ್ಸವದ ಅಂಗವಾಗಿ ಜಿಲ್ಲೆಯಿಂದ ಜಿಲ್ಲೆಗೆ ಪಾದಾರ್ಪಣೆ ಮಾಡುತ್ತಿರುವ ಶರಣ ಸಂಸ್ಕೃತಿ ಯಾತ್ರೆ ಕೊಳ್ಳೇಗಾಲದಿಂದ ಯಳಂದೂರು ಮಾರ್ಗವಾಗಿ ಚಾ.ನಗರಕ್ಕೆ ಶನಿವಾರ ಆಗಮಿಸಿತು. ಈ ಸಂದರ್ಭದಲ್ಲಿ ಯಾತ್ರೆಗೆ ನಗರದ ಮುಖ್ಯಅಂಚೆ ಕಚೇರಿ ಬಳಿ ವೀರಶೈವ ಸಮಾಜ ಹಾಗೂ ಸಾರ್ವಜನಿಕರ ವತಿಯಿಂದ  ಭವ್ಯಸ್ವಾಗತ ಕೋರಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ್ ಜತ್ತಿ ಮಾತನಾಡಿ, ಶರಣ ಸಂಸ್ಕೃತಿ ಮಹಾಯಾತ್ರೆಗೆ ಜಿಲ್ಲೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಮೇ.13ರಂದು ಬಸವ ಜಯಂತಿ ಆಚರಣೆ ನಡೆಯುತ್ತಿದೆ. ದಾವಣಗೆರೆಯಲ್ಲಿ 10 ಜನರಿಂದ ಆರಂಭವಾದ ಬಸವ ಜಯಂತಿ ಇಂದು ರಾಜ್ಯಾದ್ಯಂತ ವಿಸ್ತರಣೆ ಆಗಿದೆ ಎಂದರು.
ವಿವೇಕಾನಂದರ 150ನೇ ಜಯಂತಿ ಆಚರಣೆ ಮಾಡಿದ ಮಾದರಿಯಲ್ಲಿ ಬಸವ ಜಯಂತಿ 100ನೇ ವರ್ಷ  ಆಚರಣೆ ಆಗಬೇಕಿದೆ. ಪ್ರತಿಯೊಬ್ಬರೂ ಬಸವ ತತ್ವ ಅಳವಡಿಸಿಕೊಂಡು ರಾಜ್ಯವನ್ನು ಕಲ್ಯಾಣ ರಾಜ್ಯವನ್ನಾಗಿ ಮಾಡಲು ಶ್ರಮಿಸಬೇಕಿದೆ ಎಂದರು.
ಮೆರವಣಿಗೆಯಲ್ಲಿ ನಗರದ ವಿರಕ್ತ ಮಠದ ಚೆನ್ನಬಸವಸ್ವಾಮೀಜಿ, ಹರವೆ ಮಠದ ಸರ್ಪಭೂಷಣ ಸ್ವಾಮೀಜಿ, ಮಾಜಿ ಶಾಸಕ ಸಿ.ಗುರುಸ್ವಾಮಿ, ಜಿಪಂ ಅಧ್ಯಕ್ಷೆ ನಾಗಶ್ರೀ ಪ್ರತಾಪ್, ಸದಸ್ಯ ಬಿ.ಪಿ.ಪುಟ್ಟಬುದ್ದಿ, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಕೋಡೆಸೋಗೆ ಶಿವಬಸಪ್ಪ, ತಾಲೂಕು ಅಧ್ಯಕ್ಷ ಮೂಡ್ಲಪುರ ನಂದೀಶ್, ಕಸಾಪ ಜಿಲ್ಲಾಧ್ಯಕ್ಷ ಸೋಮಶೇಖರ ಬಿಸಲ್ವಾಡಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಪುಟ್ಟಮಲ್ಲಪ್ಪ, ಯಳಂದೂರು ಪಿಎಸಿಸಿ ಬ್ಯಾಂಕ್ ಉಪಾಧ್ಯಕ್ಷ ಪಟೇಲ್ ಬಸವಣ್ಣ, ಗಾಯಕ ನಟರಾಜು, ಮೈಮುಲ್ ನಿರ್ದೇಶಕ ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ.ರವಿಕುಮಾರ್, ಆಲೂರು ಮಲ್ಲು, ನಟೇಶ್, ದೊಡ್ಡರಾಯಪೇಟೆ ಗಿರೀಶ್, ಡಾ. ಎ.ಆರ್.ಬಾಬು, ರಾಜಶೇಖರ್, ಆಲೂರು ಬಾಬು, ರಾಜೇಂದ್ರ, ಆರ್.ವಿ.ಮಹದೇವಸ್ವಾಮಿ, ಪದ್ಮಪುರುಷೋತ್ತಮ್, ರೇವಮ್ಮ ಇದ್ದರು.
ಕೊಳ್ಳೇಗಾಲದಲ್ಲೂ ಭವ್ಯ ಸ್ವಾಗತ:
ಕೊಳ್ಳೇಗಾಲದ ಗಡಿ ತಗರಪುರದಲ್ಲಿ ಚಿಲಕವಾಡಿ ನಿಜಗುಣ ಮಠಾಧೀಶ ಶ್ರೀಕುಮಾರ ನಿಜಗುಣಸ್ವಾಮಿ ಸೇರಿದಂತೆ ಹಲವು ಗಣ್ಯರು ಸ್ವಾಗತಿಸಿ ಅದ್ಧೂರಿಯಾಗಿ ಬರಮಾಡಿಕೊಂಡರು.
ನಂತರ ಯಾತ್ರೆ ಚಿಲಕವಾಡಿ, ಕುಂತೂರು ಮಾರ್ಗವಾಗಿ ಕೊಳ್ಳೇಗಾಲಕ್ಕೆ ಆಗಮಿಸಿತು. ಕೊಳ್ಳೇಗಾಲ ನಗರಕ್ಕೆ ಯಾತ್ರೆ ಆಗಮಿಸುತ್ತಿದ್ದಂತೆ ವೀರಶೈವ ಮಹಾಸಭೆ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಯಾತ್ರೆಗೆ  ಸಂಪ್ರದಾಯಬದ್ಧವಾಗಿ ಅದ್ಧೂರಿ ಸ್ವಾಗತ ಕೋರಿದರು.
ಯಾತ್ರೆ ನೇತೃತ್ವ ವಹಿಸಿದ್ದ ಶರಣ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷರಾದ ಬಿ.ಡಿ. ಅರವಿಂದ ಜತ್ತಿ ಮಾತನಾಡಿ, ಶರಣ ಸಂಸ್ಕೃತಿ ತತ್ವ ಉತ್ತಮ ಬದುಕು ರೂಪಿಸುಕೊಳ್ಳುವಲ್ಲಿ ಸಹಕಾರಿಯಾಗಿದೆ. ಅಂತರಂಗ ಶುದ್ಧಿಯಿಂದ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು ಶರಣರು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಬಾಲರಾಜು, ವೀರಶೈವ ಮಹಾಸಭೆಯ ಅಧ್ಯಕ್ಷ ಬಸವರಾಜು,  ಹಿರಿಯ ವೈದ್ಯಾಧಿಕಾರಿ ಡಾ. ಶಿವರುದ್ರಸ್ವಾಮಿ, ಪಾನಿಪುರಿ ವರ್ತಕರ ಸಂಘದ ಅಧ್ಯಕ್ಷ ವೀರಣ್ಣ, ರಾಷ್ಟ್ರೀಯ  ಬಸವದಳದ ಕಾರ್ಯಾಧ್ಯಕ್ಷ ಸು.ಮಲ್ಲಿಕಾರ್ಜುನಪ್ಪ, ಯಡಿಯೂರಪ್ಪ ಅಭಿಮಾನಿ ಸಂಘದ ಅಧ್ಯಕ್ಷ ಪ್ರಭುಸ್ವಾಮಿ, ಹಿರಿಯ ವಕೀಲರಾದ ಶಶಿಬಿಂಬ, ಪಂಪ ಷಣ್ಮುಖಸ್ವಾಮಿ, ಪ್ರಭು ಪ್ರಸಾದ್, ಗುರುಮಲ್ಲಯ್ಯ, ಸುಂದ್ರಪ್ಪ, ವೀರಭದ್ರಸ್ವಾಮಿ, ಸಿದ್ದಪ್ಪಸ್ವಾಮಿ, ಆಲಹಳ್ಳಿ ತೋಟೇಶ, ಉಷಾರಾಣಿ, ಪಿಜಿಪಾಳ್ಯ ಬಸವರಾಜು, ಶಾಗ್ಯ ಪ್ರಸಾದ್, ಬಸವರಾಜು, ಲಿಂಗರಾಜಪ್ಪ ಸೇರಿದಂತೆ ಹಲವರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ