ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿತ್ರದುರ್ಗ

ಕೋ. ಚನ್ನಬಸಪ್ಪಗೆ ಗೌರವ

Parashurama
Updated On : 8 Feb 2013, 9:59 am

ಚಳ್ಳಕೆರೆ: ನನಗೆ ಇಂದು ಸಲ್ಲುತ್ತಿರುವ ಗೌರವ ಸಾಹಿತ್ಯಕ್ಕೆ ಸಲ್ಲಿಸಿದಂತೆ. ಒಂದು ಪಕ್ಷ ಸಾಹಿತ್ಯ ನನ್ನಲ್ಲಿರದದಿದ್ದರೆ ನಾನು ಇಂತಹ ಸನ್ಮಾನಕ್ಕೆ ಅರ್ಹನಾಗುತ್ತಿರಲಿಲ್ಲವೇನೋ ಎಂದು 76ನೇ ಕನ್ನಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಕೋ. ಚನ್ನಬಸಪ್ಪ ತಿಳಿಸಿದರು.
ಇಲ್ಲಿನ ವೀರಶೈವ ಸೇವಾ ಸಮಾಜ ಹಾಗೂ ಇನ್ನಿತರ ಸಂಘಟನೆಗಳು ವಿಶೇಷವಾಗಿ ಕನ್ನಡ ಸಾಹಿತ್ಯ ಪರಿಷತ್ತಿನವರು ನನ್ನನ್ನು ಅತ್ಯಂತ ಗೌರವಪೂರ್ಣವಾಗಿ ಸತ್ಕರಿಸಿದ್ದಾರೆ. ನೂರಾರು ಸಂಖ್ಯೆಯ ಶಾಲಾ ಮಕ್ಕಳು ಪುಷ್ಪಗಳನ್ನು ಸಲ್ಲಿಸುವ ಮೂಲಕ ತಮ್ಮ ಸಂತೋಷವನ್ನು ತೋರಿದ್ದಾರೆ. ಇವರ ಮುಂದೆ ನಾನು ಸಣ್ಣವನಾದೆ ಎಂಬ ಭಾವನೆ ನನ್ನಲ್ಲಿದೆ. ನಿಮ್ಮ ಅಭಿಮಾನಕ್ಕೆ ನಾನು ಚಿರಋಣಿ ಎಂದರು.
ಅವರು ಬಿಜಾಪುರಕೆ ತೆರಳುವ ಮಾರ್ಗದಲ್ಲಿ ಅವರ ಸಹೋದರ ಡಾ.ಕೆ.ಟಿ. ಸ್ವಾಮಿ ಅವರ ನಿವಾಸಕೆ ಭೇಟಿ ನೀಡಿದ ಸಂದರ್ಭ ಶ್ರೀಯುತರಿಗೆ ಇಲ್ಲಿನ ವೀರಶೈವ ಸಮಾಜದಿಂದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.  
ಸಮಾನ ಅವಕಾಶ: ವೀರಶೈವ ಸಮಾಜದವರು ಕಳೆದ ಹಲವಾರು ದಶಕಗಳಿಂದ ಹಾಸ್ಟೆಲ್ ನಡೆಸುತ್ತಿದ್ದಾರೆ. ಅಲ್ಲಿ ಎಲ್ಲಾ ಜಾತಿ, ವರ್ಗದ ವಿದ್ಯಾರ್ಥಿಗಳಿಗೆ ಸಮಾನವಾಗಿ ಅವಕಾಶ ನೀಡಲಾಗಿದೆ. ಬಸವಣ್ಣನವರು ಸಹ ವೀರಶೈವ ಧರ್ಮವನ್ನು ಎಲ್ಲೆಡೆ ಪ್ರಚಾರ ಮಾಡಲು ಎಲ್ಲಾ ಜಾತಿಯವರನ್ನು ಒಗ್ಗೂಡಿಸಿದರು. ಅದೇ ರೀತಿ ಇಲ್ಲಿನ ಸಮಾಜದವರು ಸಹ ಕೆಲಸ ಮಾಡುತ್ತಿರುವುದು ನನಗೆ ತೃಪ್ತಿಯಾಗಿದೆ ಎಂದರು.
ಕೆ.ಎಂ. ಜಯಕುಮಾರ್ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜು ವಹಿಸಿದ್ದರು.
ಎಸ್. ಶರಣಪ್ಪ, ಬಿ.ಎಸ್. ಶಿವಪುತ್ರಪ್ಪ, ಬಿ.ಕೆ. ರಾಜಶೇಖರಪ್ಪ, ಎಸ್. ರಾಜಶೇಖರಪ್ಪ, ಸತೀಶ್, ಕೆ.ಟಿ. ಸ್ವಾಮಿ ವಾಸುದೇವ್,  ಪ್ರಸನ್ನಕುಮಾರ್, ಜಗದೀಶ್, ಕನ್ನಡ ಸಾಹಿತ್ಯ  ಪರಿಷತ್ ಅಧ್ಯಕ್ಷ ಪಿ. ಜಗದೀಶ್, ಗೌರವಾಧ್ಯಕ್ಷ ಪಿ. ತಿಪ್ಪೇಸ್ವಾಮಿ  ಭಾಗವಹಿಸಿದ್ದರು. ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿತ್ತು. ಶಿಕ್ಷಕ ಗುರುಸಿದ್ದಮೂರ್ತಿ ಸ್ವಾಗತಿಸಿ, ಮಂಜುನಾಥ್ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments