ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿತ್ರದುರ್ಗ

ಗುಣಮಟ್ಟದ ಹಾಲು ಖರೀದಿಗೆ ಆದ್ಯತೆ ನೀಡಿ

Parashurama
Updated On : 8 Feb 2013, 10:00 am

ಚಳ್ಳಕೆರೆ: ಗ್ರಾಮೀಣ ಪ್ರದೇಶದ ಹಾಲು ಉತ್ಪಾದಕರಿಂದ ಖರೀದಿಸಲ್ಪಟ್ಟ ಹಾಲಿನ ಸಂಗ್ರಹಣೆ ಸರಬರಾಜು ಮತ್ತು ದೈನಂದಿನ ನಿರ್ವಹಣೆ ಸಂಬಂಧ ಹಾಲು ಉತ್ಪಾದಕ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ತರಬೇತಿ ಕಾರ್ಯಕ್ರಮವನ್ನು ನಿಯಮಿತವಾಗಿ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷ ಜಿ.ಪಿ. ರೇವಣಸಿದ್ದಪ್ಪ ಹೇಳಿದರು.
ಅವರು ಪಟ್ಟಣದ ಸರಕಾರಿ ನಿವೃತ್ತ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟ ಚಿತ್ರದುರ್ಗ ಸಂಯುಕ್ತ ಆಶ್ರಯದಲ್ಲಿ ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು ಹಾಲು ಉತ್ಪಾದಕ ಸಹಕಾರ ಸಂಘಗಳ ಕಾರ್ಯದರ್ಶಿಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂಘಗಳ ಹೆಚ್ಚಳ: ಪ್ರಸ್ತುತ ಹಾಲು ಉತ್ಪಾದಕ ಸಹಕಾರ ಸಂಘಗಳು ಹೆಚ್ಚುತ್ತಿವೆ. ಇವುಗಳ ಮೂಲಕ ಗುಣಮಟ್ಟದ ಹಾಲು ಖರೀದಿಗೆ ಆದ್ಯತೆ ನೀಡಬೇಕಿದೆ. ಗುಣಮಟ್ಟದ ಬಗ್ಗೆ ಉತ್ಪಾದಕರಿಗೆ ಸೂಕ್ತಮಾಹಿತಿ ಹಾಗೂ ಜಾಗೃತಿ ಉಂಟುಮಾಡುವ ರೀತಿಯಲ್ಲಿ ಸಂಘಗಳ ಸಿಬ್ಬಂದಿ ಕೆಲಸ ಮಾಡಬೇಕಿದೆ ಎಂದರು.
ಬರಗಾಲದ ಹಿನ್ನೆಲೆಯಲ್ಲಿ ಈ ಭಾಗದ ಜನರಿಗೆ ಹಾಲು ಉತ್ಪಾದನೆ ಉತ್ತಮ ಉಪಕಸಲುಬಾಗಿದ್ದು, ಇದಕ್ಕೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲಾಗುವುದು ಎಂದ ಅವರು ತಿಂಗಳ ಅಂತರದಲ್ಲಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಹಾಲು ಶಿಥಲೀಕರಣ ಘಟಕ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದರು.
ಪಾರದರ್ಶಕತೆ ಅಗತ್ಯ: ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜೆ.ಬಿ. ತೀರ್ಥಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘಗಳ ಏಳಿಗೆಯಾಗಬೇಕಾದರೆ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಅಗತ್ಯವಿದೆ. ಇವುಗಳ ಕೊರತೆ ಕಂಡುಬಂದಲ್ಲಿ ಅಂತಹ ಸಹಕಾರಿ ಸಂಸ್ಥೆ ಬೆಳವಣಿಗೆಯಾಗುವುದಿಲ್ಲ ಎಂದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಆರ್. ಮಲ್ಲೇಶಪ್ಪ ಮಾತನಾಡಿ, ಸ್ಥಳೀಯವಾಗಿ ಹಾಲು ಉತ್ಪಾದಕರು ಹಲವಾರು ಸಮಸ್ಯೆ ಸುಳಿಯಲ್ಲಿ ಸಿಲುಕಿದ್ದು, ಕೆಎಂಎಫ್ ಇಂತಹ ಸಮಸ್ಯೆ ಪರಿಹಾರಕ್ಕಾಗಿ ಉತ್ಪಾದಕರ ನೆರವಿಗೆ ಬರಬೇಕಾಗಿದೆ ಸ್ಥಳೀಯವಾಗಿ ಹಸುಗಳಿಗೆ ಪೌಷ್ಟಿಕ ಆಹಾರದ ಕೊರತೆ, ಚಿಕಿತ್ಸಾ ಸೌಲಭ್ಯದ ಕೊರತೆ  ಕಾರಣ ಸ್ವಲ್ಪ ಹಿನ್ನೆಡೆ ಉಂಟಾಗಿದ್ದು, ಈ ಬಗ್ಗೆ ಗಮನಹರಿಸಿದರೆ ಸ್ಥಳೀಯವಾಗಿ ಉತ್ಪಾದನೆ ಹೆಚ್ಚಳ  ಸಾಧ್ಯ ಎಂದರು.
ಜಿಲ್ಲಾ ಯೂನಿಯನ್ ಜಿಂಕಲ್ ಬಸವರಾಜ್, ಕೆಎಂಎಫ್ ಮಾಜಿ ಅಧ್ಯಕ್ಷ ಎಂ.ಆರ್. ಮಹೇಶ್ವರಪ್ಪ, ಎಚ್. ಸಿದ್ದಪ್ಪ, ವಿ. ಮಂಜುನಾಥ್, ಉಪಸ್ಥಿತರಿದ್ದರು. ಹಾಲು ಉತ್ಪಾತಕ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಮಾಧ್ಯಮ ಅಕಾಡಮಿ ಪ್ರಶಸ್ತಿ ಪುರಸ್ಕೃತ ಎಚ್.ಬಿ. ಮಂಜುನಾಥ್ ಮತ್ತು ಶಿಮುಲ್ ವಿಸ್ತರಣ ಅಧಿಕಾರಿ  ಕೆ. ಕೃಷ್ಣಪ್ಪ, ಎ. ರವಿಕುಮಾರ್, ಸಿ.ಎಚ್. ಸ್ವಾಮಿ ವಿಶೇಷ ಉಪನ್ಯಾಸ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments