ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿತ್ರದುರ್ಗ

ಮನೆ ನಿರ್ಮಾಣಕ್ಕೆ ಪೇದೆ ಬಳಕೆ: ಖಂಡನೆ

Parashurama
Updated On : 8 Feb 2013, 10:00 am

ಚಳ್ಳಕೆರೆ: ಪೊಲೀಸ್ ಅಧಿಕಾರಿಯೊಬ್ಬರು ತನ್ನ ಅಧೀನ ನೌಕರರನ್ನು ತಮ್ಮ ಖಾಸಗಿ ನಿವಾಸದ ನಿರ್ಮಾಣ ಕಾರ್ಯಕ್ಕೆ ಕೂಲಿ ಆಳುಗಳಂತೆ ದುಡಿಸಿಕೊಳ್ಳುತ್ತಿರುವ ವರದಿಗೆ ಸಾರ್ವಜನಿಕರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತಾಲೂಕಿನ ನೇರಲಗುಂಟೆ ಗ್ರಾಮದ ಚಂದ್ರಪ್ಪ ಎಂಬವರು ಮುನಿರಾಬಾದಿನ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಪೇದೆಗಳನ್ನು  ಇಲ್ಲಿಗೆ  ಕರೆತಂದು ಅವರಿಂದ ಕಟ್ಟಡ ಕಾಮಗಾರಿಗೆ ಉಪಯೋಗಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಫೆ.6ರ  ಪತ್ರಿಕೆಯಲ್ಲಿ ವಿಸ್ತಾರ ವರದಿ ನೀಡಲಾಗಿದೆ.
ವರದಿಯನ್ನು ಗ್ರಹಿಸಿದ ಅನೇಕರು ಈ ಬಗ್ಗೆ ತಮ್ಮ ಖಾರ ಪ್ರತಿಕ್ರಿಯೆ ನೀಡಿ, ಇಂತಹ ಅಚಾತುರ್ಯ ನಡೆಯುತ್ತಿದ್ದರೂ ಉನ್ನತ ಮಟ್ಟದ ಅಧಿಕಾರಿಗಳು ಗಮನಹರಿಸದೇ ಇರುವುದನ್ನು ಖಂಡಿಸಿದ್ದಾರೆ. ಸರ್ಕಾರದ ಕರ್ತವ್ಯದಲ್ಲಿ ಭಾಗವಹಿಸಬೇಕಾದ ಪೊಲೀಸ್ ಪೇದೆಗಳು ಉನ್ನತ ಅಧಿಕಾರಿಯ ಬೆದರಿಕೆಯಿಂದ ಇಲ್ಲಿ ಕೂಲಿ  ಆಳುಗಳಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರ ನೋವಿಗೆ ಸ್ಪಂದಿಸಬೇಕಾದ ಪೊಲೀಸ್ ಪೇದೆಗಳು ಈ ಅಧಿಕಾರಿಯ ದರ್ಪಕ್ಕೆ ಬೆದರಿ ಹೆಂಡತಿ ಮಕ್ಕಳನ್ನು ಬಿಟ್ಟು ಇಲ್ಲಿ ಹಗಲು ರಾತ್ರಿ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವುದು ಸರಿಯಲ್ಲವೆಂದು ಅಭಿಪ್ರಾಯಪಟ್ಟಿದ್ದು, ಇಂತಹ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಪಡಿಸಿದ್ದಾರೆ.
ಬಿಜೆಪಿ ನಗರ ಘಟಕದ ಅಧ್ಯಕ್ಷ ಎನ್. ಶಿವಕುಮಾರ್, ಹೊಟೇಲ್ ಉದ್ಯಮಿ ವಿಘ್ನೇಶ್ವರ ಅಡಿಗ, ನಾಗರಿಕ  ಹೋರಾಟ ಸಮಿತಿ ಅಧ್ಯಕ್ಷ ಟಿ.ಜೆ. ತಿಪ್ಪೇಸ್ವಾಮಿ, ಪುರಸಭಾ ನಾಮಿನಿ ಸದಸ್ಯರಾದ ಡಿ.ಎಂ. ತಿಪ್ಪೇಸ್ವಾಮಿ,  ಅಲ್ಲಾಭಕ್ಷ್ ಮುಂತಾದವರು ಘಟನೆಯ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments