ಯುವಕರಿಗೆ ಎಲ್ಲಾ ಕ್ಷೇತ್ರದಲ್ಲಿ ಯಶಸ್ಸು ಅಸಾಧ್ಯ
ಚಳ್ಳಕೆರೆ: ಆಧುನಿಕ ಜಗತ್ತಿನಲ್ಲಿ ಯುವಕರು ಎಲ್ಲಾ ಕ್ಷೇತ್ರದಲ್ಲಿ ಯಶಸ್ವಿ ಹೊಂದಲು ಸಾಧ್ಯವಿಲ್ಲ. ಇಂದು ಕೌಶಲ್ಯ ಆಧಾರಿತ ತರಬೇತಿಗಳನ್ನು ಆಯೋಜಿಸುವುದರ ಮುಖಾಂತರ ವಿದ್ಯಾವಂತ, ನಿರುದ್ಯೋಗ ಯುವಕರಿಗೆ ಸ್ವ- ಉದ್ಯೋಗ ಕಲ್ಪಿಸಲು ಸಹಕಾರಿಯಾಗುವುದರ ಜೊತೆಗೆ ತಮ್ಮ ಜೀವನ ರೂಪಿಸಿಕೊಳ್ಳಲು ದಾರಿಯಾಗುತ್ತದೆ ಎಂದು ತಿಳಿಸಿದರು.
ಅವರು ಪಟ್ಟಣದ ಸಮುದಾಯ ನಿರ್ವಹಿತ ಸಂಪನ್ಮೂಲ ಕೇಂದ್ರ, ಚಳ್ಳಕೆರೆಯಲ್ಲಿ ಮೈರಾಡಾ ಸಂಸ್ಥೆ ಹಾಗೂ ಮೈ,ಜೆ, ಸಿಡಾರ್‌ಸಹಯೋಗದೊಂದಿಗೆ ಗೋದ್ರೇಜ್, ಪ್ಲಂಬಿಂಗ್ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಾಖಲಾತಿ ಅಧಿಕಾರಿಗಳಾದ ಎನ್.ಟಿ. ಸ್ವಾಮಿ ಮಾತನಾಡಿ, ನಿಮ್ಮಂತಹ ಯುವಕರು ಈ ತರಬೇತಿ ಪಡೆದು ಯಶಸ್ವಿಯಾದರೆ ಈ ತರಬೇತಿ ಪಡೆದ ವಿಧ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಲು ಶಿಬಿರಾರ್ಥಿಗಳಿಗೆ ತಿಳಿಸಿದರು.
ಟಿ.ಡಿ. ನರಸಿಂಹಮೂರ್ತಿ ಮೈರಾಡಾ ಚಿತ್ರದುರ್ಗ ಮಾತನಾಡಿ, ಇಂದಿನ ಯುವಪೀಳಿಗೆ ಪೋಷಕರಿಗೆ ಹೊರೆಯಾಗದೆ ಈ ತರಬೇತಿಯ ಕೌಶಲ್ಯತೆಯನ್ನು ಪಡೆದು ಸ್ವ- ಉದ್ಯೋಗ ಕೈಗೊಳ್ಳುವುದರ ಮುಖಾಂತರ ತಮ್ಮ ಜೀವನಮಟ್ಟ ಸುಧಾರಿಸಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಡಿ. ನರಸಿಂಹಮೂರ್ತಿ ತಂಡದ ನಾಯಕರು ಮೈರಾಡಾ ಚಿತ್ರದುರ್ಗ ು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎನ್.ಟಿ. ಸ್ವಾಮಿ, ದಾಖಲಾತಿ ಅಧಿಕಾರಿಗಳು, ಮೈರಾಡಾ ಚಿತ್ರದುರ್ಗ, ಪ್ಲಂಬಿಂಗ್ ತರಬೇತಿ ಮಾರ್ಗದರ್ಶಕರಾದ ನಯಾಜ್ ಉರ್ ರಹಮಾನ್ ಭಾಗವಹಿಸಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.