ಮುಷ್ಕರದ ಕಾರಣ ಆಸ್ಪತ್ರೆಗೆ ಬೀಗಮುದ್ರೆ
ಹಿರಿಯೂರು: ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ಅನಿರ್ದಿಷ್ಟ ಕಾಲ ಮುಷ್ಕರದ ಕಾರಣ ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಗೆ ಬೀಗಮುದ್ರೆ ಹಾಕಲಾಗಿತ್ತು.
ವಿಷಯದ ತಿಳಿಯದ ಅನೇಕ ಮಂದಿ ದೂರದ ಹಳ್ಳಿಗಳಿಂದ ಚಿಕಿತ್ಸೆಗೆ ಬಂದು ಆಸ್ಪತ್ರೆ ಬಾಗಿಲು ಹಾಕಿರುವುದನ್ನು ಕಂಡು ನಿರಾಶರಾಗಿ ಮರಳಿದರು.
ಅನೇಕರಿಗೆ ತುರ್ತು ಚಿಕಿತ್ಸೆಯ ಅಗತ್ಯವಿದ್ದುದು ಕಂಡುಬಂದಿತು. ಆದರೂ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ ನಡೆದು ಹೋಗುತ್ತಿದ್ದುದು ಕಂಡು ಬಂತು. ತುರ್ತು ಚಿಕಿತ್ಸೆಯನ್ನು ಒಳಗೊಂಡಂತೆ ಸಂಪೂರ್ಣ ಆಸ್ಪತ್ರೆಯ ಚಿಕಿತ್ಸಾ ಸೌಲಭ್ಯಗಳನ್ನು ಅನಿರ್ದಿಷ್ಟ ಕಾಲದವರೆಗೆ ನಿಲ್ಲಿಸಲಾಗಿದೆಯೆಂಬ ನಾಮ ಫಲಕವನ್ನು ಆಸ್ಪತ್ರೆ ಮುಂದಿನ ಗೇಟ್ಗೆ ನೇತು ಹಾಕಲಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.