ರಾಜ್ಯ ಬಜೆಟ್ 2013
ಸಿಎಂ ಶೆಟ್ಟರ್ ಅವರ ಚೊಚ್ಚಲ ಬಜೆಟ್ ಆಕಾಶ ಅಂಗೈಯಲ್ಲಿ ತೋರಿಸಿದಂತಿದೆ. ಸರ್ಕಾರಕ್ಕೆ 2-3 ತಿಂಗಳ ಅವಧಿ ಇದೆ. ಗೊತ್ತಿದ್ದೂ ರು. 1.17 ಲಕ್ಷ ಬೃಹತ್ ಬಜೆಟ್ ಮಂಡಿಸಿರುವುದು ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡೆಂಬುದು ಅರಿವಾಗುತ್ತದೆ.
-ಅನೂಪ್, ವಕೀಲ
ಶಿಕ್ಷಣ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಉತ್ತಮ ಮೊತ್ತ ನೀಡಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಭವಿಷ್ಯದ ಭಾರತ ನಿರ್ಮಾಣಕ್ಕೆ ಸರಳ ಮಾರ್ಗ ಅನುಸರಿಸಿದಂತೆ ಎಂಬುದನ್ನು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕು.
- ಶಿಲ್ಪಾ, ಶಿಕ್ಷಕಿ
ಶಿಕ್ಷಣ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಉತ್ತಮ ಮೊತ್ತ ನೀಡಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಭವಿಷ್ಯದ ಭಾರತ ನಿರ್ಮಾಣಕ್ಕೆ ಸರಳ ಮಾರ್ಗ ಅನುಸರಿಸಿದಂತೆ ಎಂಬುದನ್ನು ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕು.
- ಶಿಲ್ಪಾ, ಶಿಕ್ಷಕಿ
ನೀರಾವರಿ ವಿಸ್ತರಣೆ, ವಿದ್ಯುತ್, ಆರೋಗ್ಯ ಮತ್ತಿತರೆ ಮೂಲಸೌಕರ್ಯಗಳನ್ನು ದೂರಗಾಮಿ ದೃಷ್ಟಿಕೋನ ಇಟ್ಟುಕೊಂಡು ಸಿದ್ಧಪಡಿಸಿದ ಬಜೆಟ್ ಇದಲ್ಲ. ವಿತ್ತೀಯ ಶಿಸ್ತು, ಸ್ಪಷ್ಟತೆ ಇಲ್ಲದಿರುವ ಕಾರಣ ಇದು ದೂರದೃಷ್ಟಿ ಇಲ್ಲದ ಬಜೆಟ್ ಆಗಿದೆ..
-ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ.
ವ್ಯಾಪಾರಸ್ಥರಿಗೆ ಯಾವುದೇ ನೆರವು ಈ ಬಜೆಟ್ನಿಂದ ದೊರಕುವ ನಿರೀಕ್ಷೆಯಿಲ್ಲ. ಬಜೆಟ್ನಿಂದ ರಾಜ್ಯಕ್ಕೆ ನೆರವಾಗುತ್ತದೆ ಎಂದರೆ ಈ ಬೃಹತ್ ಮೊತ್ತದ ಬಜೆಟ್ ಮಂಡಿಸಬೇಕಿತ್ತು.
-ಪ್ರವೀಣ, ವ್ಯಾಪಾರಿ
ರಾಜ್ಯ ಸರ್ಕಾರ ಇನ್ನು 2-3 ತಿಂಗಳ ಅವಧಿ ಹೊಂದಿದೆ ಎಂಬುದು ಗೊತ್ತಿದ್ದರೂ ಮುಖ್ಯಮಂತ್ರಿ ಶೆಟ್ಟರ್ ಬೃಹತ್ ಪ್ರಮಾಣದ ಬಜೆಟ್ ಜೊತೆಗೆ ಸುದೀರ್ಘ ಬಜೆಟ್ ಭಾಷಣ ಮಾಡಿದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- ಗೋವಿಂದ್, ಉದ್ಯೋಗಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.