ರ್ಯಾಲಿಗೆ ತಾಲೂಕಿನಿಂದ ಕಾರ್ಯಕರ್ತರು
ಹೊಳಲ್ಕೆರೆ: ಬಹುಜನ ಸಮಾಜ ಪಕ್ಷದ ದಕ್ಷಿಣ ಭಾರತದ ರ್ಯಾಲಿ 10 ರಂದು ಅರಮನೆ ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಹೊಳಲ್ಕೆರೆ ತಾಲೂಕಿನಿಂದ ಸುಮಾರು 2 ಸಾವಿರ ಕಾರ್ಯಕರ್ತರು ಭಾಗವಹಿಸಲ್ಲಿದ್ದಾರೆ.
ರ್ಯಾಲಿಯಲ್ಲಿ ಬಿಎಸ್ಪಿ ರಾಷ್ಟ್ರ ಅಧ್ಯಕ್ಷೆ ಮಯಾವತಿಯವರು ಮುಂಬಡ್ತಿ ಮೀಸಲಾತಿ ವಿಚಾರದಲ್ಲಿ ಕೈಗೊಂಡಿರುವ ಹೋರಾಟಕ್ಕೆ ತಾಲೂಕಿನ ಎಸ್ಸಿ, ಎಸ್ಟಿ, ಓಬಿಸಿ ನೌಕರರು ಭಾಗವಹಿಸಲಿದ್ದಾರೆ ಎಂದು ತಾಲೂಕು ಬಿಎಸ್ಪಿ ಅಧ್ಯಕ್ಷ ಕೆ.ಎನ್. ದೊಡ್ಡೊಟ್ಟೆಪ್ಪ ತಿಳಿಸಿದ್ದಾರೆ.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಬಿ.ಆರ್.ಪಾಂಡುರಂಗ, ಜಿಲ್ಲಾ ಅಧ್ಯಕ್ಷ ಕೆ. ತಿಮ್ಮಪ್ಪ, ಜಿ.ಎನ್. ಪರಮೇಶ್, ನಾಗರಾಜ್, ಡಿ.ಪ್ರಕಾಶ್, ಮಂಜುಳಾ, ನಜರೀನ್, ಮಾನಸ,
ಎಚ್. ಲಿಂಗಮೂರ್ತಿ, ಮಂಜುನಾಥ್, ರಾಮಚಂದ್ರಪ್ಪ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.