ಕ್ರಿಕೆಟ್ ಟೂರ್ನಿ
ಚಳ್ಳಕೆರೆ: ಪಟ್ಟಣದ ಶೈನಿಂಗ್ ಕ್ರಿಕೆಟರ್ಸ್ನಿಂದ ಜಿಲ್ಲಾಮಟ್ಟದ ಕ್ರಿಕೆಟ್ ಟೂರ್ನಿಯನ್ನು 21ರಿಂದ 26 ವರೆಗೆ ಚಳ್ಳಕೆರೆಯ ಬಿಎಂಜಿಎಚ್ಎಸ್ ಕ್ರೀಂಡಾಗಣದಲ್ಲಿ ನಡೆಯಲಿದೆ. ಆಸಕ್ತ ಕ್ರೀಡಾಪಟುಗಳು 9781888658, 9611540699 ಸಂಪರ್ಕಿಸಲು ತಿಳಿಸಿದ್ದಾರೆ.
ನಿರ್ಭಯವಾಗಿ ಪರೀಕ್ಷೆ ಎದುರಿಸಿ
ಶ್ರೀರಾಂಪುರ: ವಿದ್ಯಾರ್ಥಿಗಳು ತಮ್ಮ ಪಠ್ಯ ಚಟುವಟಿಕೆಯ ಬಗ್ಗೆ ಆತ್ಮ ವಿಶ್ವಾಸ ಹೊಂದಿದಾಗ ಪರೀಕ್ಷೆಯನ್ನು ಸುಲಲಿತವಾಗಿ ಎದುರಿಸಬಹುದು ಎಂದು ಕಾಳಿದಾಸ ಪ್ರೌಢಶಾಲೆಯ ಕನ್ನಡ ಶಿಕ್ಷಕ ರೇಣುಕಾರಾದ್ಯ ಹೇಳಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪರೀಕ್ಷೆ ಒಂದು ಹಬ್ಬ ತರಗತಿ ಸಮ್ಮಿಲನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಜ್ಞಾನದ ಬಗ್ಗೆ ಇಚ್ಚಾಶಕ್ತಿ ಹೊಂದಿದ ಆರೋಗ್ಯವಂತ ವಿದ್ಯಾರ್ಥಿ ಪರೀಕ್ಷೆಯನ್ನು ಒಂದು ಹಬ್ಬವಾಗಿ ಸ್ವೀಕರಿಸಿ ಪರೀಕ್ಷೆ ಭಯದಿಂದ ದೂರ ಉಳಿಯುತ್ತಾನೆ ಎಂದರು.
ಟೆಂಡರ್ ಪ್ರಕ್ರಿಯೆ: ಸ್ಧಳ ಪರಿಶೀಲನೆ
ಚಳ್ಳಕೆರೆ: ತಾಲೂಕಿನ ವೇದಾವತಿ ನದಿಯ ಭಾಗದಲ್ಲಿ ಬರುವ ತೊರೆಬೀರನಹಳ್ಳಿ ಕೋನಿಗರಹಳ್ಳಿ ಹಾಗೂ ಇನ್ನಿತರೆ ಕಡೆಗಳಲ್ಲಿ ಆಕ್ರಮ ಮರಳು ಸರಬರಾಜಾಗುತ್ತಿದ್ದನ್ನು ನಿಯಂತ್ರಿಸಲು ಸರ್ಕಾರ ಈಗ ಟೆಂಡರ್ ಪ್ರಕಿಯೆ ಕೈಗೊಂಡಿದೆ. ಕೋನಿಗರಹಳ್ಳಿ ಮತ್ತು ತೊರೆಬೀರನಹಳ್ಳಿ ಮಧ್ಯ ಭಾಗದಲ್ಲಿ ಬರುವ ರಿಸನಂ- 39,40,44,45,46ರಲ್ಲಿ ಮರಳನ್ನು ಹರಾಜಿನ ಮೂಲಕ ಖರೀದಿಗೆ ಅವಕಾಶ ನೀಡಲಾಗಿದೆ. ತಹಸೀಲ್ದಾರ್ ರಾಮಚಂದ್ರಪ್ಪ ಇತರರು ಪರಿಶೀಲನೆ ನಡೆಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.