ನಗರಸಭೆಯಿಂದ ವಿವಿಧ ಸೌಲಭ್ಯ ವಿತರಣೆ
ಚಿತ್ರದುರ್ಗ: ನಗರಸಭೆಯಿಂದ ಎಸ್ಎಫ್ಸಿ ಅನುದಾನದ ಹಾಗೂ ನಗರಸಭೆ ನಿಧಿಯ ಶೇ.22.75 ಹಾಗೂ 7.25ರ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಹಾಗೂ ಇತರೆ ಜನಾಂಗದವರಿಗೆ ಕಿರಿಯ ವಕೀಲರಿಗೆ ಕಾನೂನು ಪುಸ್ತಕ, ಪೌರ ಕಾರ್ಮಿಕರಿಗೆ ಫ್ಯಾನ್, ಚರ್ಮಕಾರರಿಗೆ ಟೂಲ್ ಕಿಟ್, ಸರ್ಕಾರಿ ಹಾಗೂ ಅನುದಾನಿತ ಶಾಲೆ ಹಾಗೂ ಸಂಘ ಸಂಸ್ಥೆಗಳಿಗೆ ವಿವಿಧ ಸಾಮಗ್ರಿಗಳು ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಅಡುಗೆ ಮಾಡುವ ಪಾತ್ರೆಗಳನ್ನು ಇಲ್ಲಿಯ ನಗರಸಭಾ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ ವಿತರಣೆ ಮಾಡಿದರು.
ನಂತರ ನಡೆದ ಸಮಾರಂಭದಲ್ಲಿ ಸುನೀತಾ ಮಾತನಾಡಿ, ನಗರಸಭೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಹಾಗೂ ಇತರೆ ಜನಾಂಗದವರಿಗೆ ಉದ್ಯೋಗಕ್ಕೆ ಬೇಕಾಗುವ ಅನೇಕ ಉಪಕರಣಗಳನ್ನು ನೀಡಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ವೃತ್ತಿಯ ಯಶಸ್ಸಿನಿಂದ ಬದುಕಿನ ಯಶಸ್ಸು ಅಡಗಿದೆ. ವೃತ್ತಿ ಬೆಳೆಸಿಕೊಳ್ಳುವ ಮನೋಭಾವ ಮೂಡಬೇಕು. ಸೇವಾ ಮುನೋಭಾವನೆ, ಸ್ವಾವಲಂಬನೆ ಬದುಕು ನಮ್ಮೆಲ್ಲರ ಗುರಿಯಾಗಬೇಕು. ಸತತ ಪರಿಶ್ರಮದ ಜೊತೆಗೆ ಉತ್ತಮ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ನಗರಸಭೆಯ ಪೌರಾಯುಕ್ತರಾದ ಎಸ್. ಭಾರತಿ ಮಾತನಾಡಿ, ನಗರಸಭೆಯಿಂದ ನೀಡಿರುವ ಸೌಲಭ್ಯಗಳನ್ನು ಬಳಸಿಕೊಂಡು ಜೀವನವನ್ನು ಉತ್ತಮಪಡಿಸಿಕೊಳ್ಳಬೇಕೆಂದು ತಿಳಿಸಿದರು.
ನಗರಸಭೆ ನಾಮನಿರ್ದೇಶನ ಸದಸ್ಯರಾದ ಎನ್.ಇ. ನಾಗರಾಜ್, ಸುನೀತಾ ಮಾತನಾಡಿದರು. ಕಂದಾಯಾಧಿಕಾರಿ ಟಿ. ದುರ್ಗೇಶ್ ಸ್ವಾಗತಿಸಿ, ಆರ್.ವಿ. ಯೋಗೇಂದ್ರ ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.