15ರಂದು ಉಸ್ತುವಾರಿ ಸಮಿತಿ ಸಭೆ
ಚಿತ್ರದುರ್ಗ: ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಫೆ.15ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಸದ ಜನಾರ್ಧನಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ನಾರಾಯಣಸ್ವಾಮಿ ತಿಳಿಸಿದ್ದಾರೆ.
ಜನತೆಯ ಮೇಲೆ ಸಾಲದ ಹೊರೆ
ಚಳ್ಳಕೆರೆ: ರಾಜ್ಯದಲ್ಲಿ ಜನ್ಮತಾಳುವ ಪ್ರತಿಯೊಬ್ಬರ ಮೇಲೆ ಸುಮಾರು 65 ಸಾವಿರ ಸಾಲದ ಹೊರೆಯಾಗುತ್ತಿದೆ ಎಂದು ರಾಜ್ಯ ಜೆಡಿಎಸ್ ಪ್ರಧಾನಕಾರ್ಯದರ್ಶಿ ಕೆಇಬಿ. ನಾಗರಾಜು ಅಭಿಪ್ರಾಯಪಟ್ಟರು. ನಾಯಕನಹಟ್ಟಿ ಹೋಬಳಿ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಹಿಂದೆ ನಮ್ಮ ನಾಯಕರು ಮಾಡಿದ ಸಾಲ ಇಂದು ನಮ್ಮ ಹಾಗೂ ನಮ್ಮ ಮಕ್ಕಳ ಮೇಲೆ ಬೀಳುಯತ್ತಿದೆ ಎಂದರು. ಬೋಗನಹಳ್ಳಿ ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೀರಣ್ಣ, ಡಾ. ಓಬಣ್ಣಪೂಜಾರ್, ಎಚ್.ವಿ. ನಾಗರಾಜ್, ಟಿ.ಡಿ. ದೊಡ್ಡಯ್ಯ, ಮಹ್ಮದ್ ಇರ್ಷಾದ್, ಟಿ.ಎಂ.ಕೆ. ಫಕೀರ್, ಅಹ್ಮದ್ ಮನ್ಸೂರ್, ಜಯಪಾಲ್, ಶ್ರೀನಿವಾಸ್, ಕೆ.ಟಿ. ಪ್ರಕಾಶ್, ನಾರಾಯಣರೆಡ್ಡಿ, ಎಸ್.ಪಾಲಯ್ಯ, ಬಿ.ಕೆ. ಸುರೇಶ್, ಡಾ. ವೆಂಟೇಶ್ ಇದ್ದರು.
ಪ್ರತಿಭಟನೆ
ಚಿತ್ರದುರ್ಗ: ಅಕ್ರಮ ಮದ್ಯ ಮಾರಾಟ ತಡೆಗೆ ಒತ್ತಾಯಿಸಿ ಶುಕ್ರವಾರ ಮಾಳಪ್ಪನಹಟ್ಟಿ ಗ್ರಾಮಸ್ಥರು ಭೀಮಸಮುದ್ರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಕೂಲಿ ಕೆಲಸ ಮಾಡುವವರು ಕೂಲಿ ಹಣದಲ್ಲಿ ಕುಡಿದು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅನೇಕ ಕುಟುಂಬಗಳು ಬೀದಿ ಪಾಲಾಗಿವೆ. ಕೂಡಲೇ ಅಕ್ರಮ ಮದ್ಯ ಮಾರಾಟ ತಡೆಯಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಮಾಡಿದ ಮನವಿಗೆ ಗ್ರಾಮಸ್ಥರು ಕಿವಿಗೊಡಲಿಲ್ಲ. ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪಟ್ಟುಹಿಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರೇಖಾ ಬಸವರಾಜ್, ಸದಸ್ಯರಾದ ಎ. ಈಶ್ವರಪ್ಪ, ರಾಧಾ ಗುರುಸ್ವಾಮಿ ಮುಖಂಡರಾದ ಸಿ.ಬಸಪ್ಪ, ಎಂ.ಜಿ. ಕೋಟಪ್ಪ, ಜೆ.ರಾಜಪ್ಪ, ನಿಂಗಪ್ಪ ಸ್ವಸಹಾಯ ಮಹಿಳಾ ಸಂಘದ ಸದಸ್ಯರು ಭಾಗವಹಿಸಿದ್ದರು.
ಹಿರಿಯೂರಿನಲ್ಲೂ...ಹಿರಿಯೂರು: ಪಟ್ಟಣದಲ್ಲಿ ಅನಧಿಕೃತವಾಗಿ ಶುದ್ಧ ಕುಡಿಯುವ ನೀರನ್ನು ಕ್ಯಾನ್‌ಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದ ಘಟಕದ ಮೇಲೆ ತಹಸೀಲ್ದಾರ್ ಮಲ್ಲಿಕಾರ್ಜುನ್ ದಾಳಿ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅಧಿಕೃತ ಪರವಾನಗಿ ಪಡೆಯದೇ ನಡೆಸಲಾಗುತ್ತಿದ್ದ ಘಟಕಗಳ ಮೇಲೆ ದಾಳಿ ನಡೆಸಿರುವುದಾಗಿ ತಹಸೀಲ್ದಾರ್ ತಿಳಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.