ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿತ್ರದುರ್ಗ

ಸಂಘಟನೆ ದೀನ ದಲಿತರ, ನಿರ್ಗತಿಕರ ಪರವಾಗಿರಲಿ

Parashurama
Updated On : 11 Feb 2013, 10:59 am

ಧರ್ಮಪುರ: ಸಂಘಟನೆ ದೀನ ದಲಿತರ ಹಾಗೂ ನಿರ್ಗತಿಕರ ಪರವಾಗಿ ಇರಬೇಕು. ಸೇವೆಯೇ ಅದರ ಮುಖ್ಯ ಧ್ಯೇಯವಾಗಿರಬೇಕು ಎಂದು ವಂದೇ ಮಾತರಂ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಸಿ. ಮಹೇಶ್ ಹೇಳಿದರು.
ಧರ್ಮಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಂದೇ ಮಾತರಂ ಜಾಗೃತಿ ವೇದಿಕೆ ಹಾಗೂ ಬೆಂಗಳೂರಿನ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶೇಷ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಿವಿಧ ಬೇಡಿಕೆಗಳ ಸಂಬಂಧ ಕಳೆದ ಮೂರು ದಿನಗಳಿಂದ ವೈದ್ಯರು ಮುಷ್ಕರ ನಡೆಸುತಿದ್ದು, ಇದರಿಂದ ಎಲ್ಲಾ ಕಡೆ ರೋಗಿಗಳು ಪರದಾಡುವಂತಾಗಿದೆ. ಇನ್ನು ಹೆಚ್ಚಿನ ಅನಾಹುತಗಳಾಗದ ರೀತಿಯಲ್ಲಿ ಸರ್ಕಾರ ವೈದ್ಯರ ಮನವೊಲಿಸಿ ಮುಷ್ಕರ ಹಿಂಪಡೆಯುವಂತೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಶಿಬಿರದಲ್ಲಿ 10 ಜನ ನುರಿತ ತಜ್ಞವೈದ್ಯರ ತಂಡ ಭಾಗವಹಿಸಿತ್ತು. ಈ ಸಮಯದಲ್ಲಿ ಸುಮಾರು 800 ರಿಂದ 1000 ರೋಗಿಗಳ ತಪಾಸಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಧರ್ಮಪುರ ಗ್ರಾಪಂ ಅಧ್ಯಕ್ಷ ಜಿ. ವೆಂಕಟರಾಮು, ಸಂಘಟನೆಯ ರಾಜ್ಯ ಉಪಾಧ್ಯಕ್ಷ ಪಿ. ಕೃಷ್ಣಮೂರ್ತಿ, ರಾಜ್ಯ ಕಾರ್ಯದರ್ಶಿ ಅರುಣ್ ಕುಮಾರ್, ರಾಜ್ಯ ಖಜಾಂಚಿ ಮಹಂತೇಶ್, ತಾಲೂಕು ಆಧ್ಯಕ್ಷ ಗಿರಿಧರ್, ಹೋಬಳಿ ಘಟಕದ ಅಧ್ಯಕ್ಷ ಮಂಜು, ಗೌರವಾಧ್ಯಕ್ಷ ಮಹೇಶ್, ಅರ್ಜುನ್, ನಾಗರಾಜ್, ತಿಪ್ಪೇಶ್, ಜೆಸಿಬಿ ಈರಣ್ಣ ಡಾ.ಎಂ.ಜಿ. ಗೋವಿಂದಯ್ಯ, ಮದ್ದಿಹಳ್ಳಿ ಬಸೇಗೌಡ, ಹನುಮಂತಪ್ಪ, ಸೈಯದ್ ಬಾಷ, ಷಹಜಹಾನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments