ಹೆಣ್ಣು ಮಗು ಅಪಹರಣ: ಆತಂಕದಲ್ಲಿ ಜನ
ಚಳ್ಳಕೆರೆ: ಪ್ರತಿವರ್ಷದ ಚಿತ್ತಾ ಅಮಾವಾಸ್ಯೆ ಕಂದಾಚಾರಿಗಳಿಗೆ ವಿಶೇಷ ದಿನವಾಗಿದ್ದು ಈ ಸಂದರ್ಭದಲ್ಲಿ ಮಕ್ಕಳನ್ನು ಬಲಿಗಾಗಿ ಅಪಹರಣವಾಗುವುದು ಸಾಮಾನ್ಯ.
ಪಟ್ಟಣದಲ್ಲೂ ಹೆಣ್ಣು ಮಗುವೊಂದನ್ನು ಅಪಹರಿಸಿರುವ ಘಟನೆ ವರದಿಯಾಗಿದ್ದು, ಅದೃಷ್ಟವಶಾತ್ ಮಗುವನ್ನು ರಕ್ಷಿಸಲಾಗಿದೆ.
ಪಟ್ಟಣದ ಅಂಬೇಡ್ಕರ್ ನಗರದ ನಾಗರಾಜ್ ಮತ್ತು ಪಾಲಮ್ಮ ದಂಪತಿಗಳ ಮೂರನೇ ಮಗಳಾದ ಲಕ್ಷ್ಮಿಯನ್ನು (3) ಬಲಿಕೊಡುವ ನಿಟ್ಟಿನಲ್ಲಿ ಅಪಹರಿಸಿದ್ದರು ಎನ್ನಲಾಗಿದೆ. ಶನಿವಾರ ಬೆಳಗ್ಗೆ ಮಗಳು ಕಾಣದಾಗ ನೆರೆಹೊರೆಯವರೊಂದಿಗೆ ಗಾಂಧಿನಗರ, ಅಂಬೇಡ್ಕರ್ ನಗರ ಹಾಗೂ ಜನತಾ ಕಾಲೋನಿಗಳಲ್ಲಿ ಹುಡುಕಾಟ ನಡೆಸಿ ನಂತರ ಧ್ವನಿವರ್ದಕಗಳ ಮೂಲಕ ಪ್ರಚಾರ ಮಾಡಿದ ನಂತರ ಪೊಲೀಸ್ ಠಾಣೆಯಲ್ಲಿ ಮಗುವಿನ ಪತ್ತೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಸಂಜೆ 5.30 ರ ಸಮಯದಲ್ಲಿ ಗಾಂಧಿನಗರದ ಮಹಾತ್ಮ ಗಾಂಧಿ ಶಾಲೆಯ ಬಳಿ ಆಟೋರಿಕ್ಷಾದಲ್ಲಿ ಇಬ್ಬರು ಹೆಣ್ಣು ಮಕ್ಕಳು ಈ ಮಗುವಿಗೆ ಹೊಸ ಬಟ್ಟೆ ಹಾಕಿ ಅಲಂಕಾರ ಮಾಡಿ ಕರೆದುಕೊಂಡು ಹೋಗುವ ಸಮಯದಲ್ಲಿ ಅಲ್ಲಿಯೆ ಆಟವಾಡುತ್ತಿದ್ದ ಕಂಡಿದ್ದು, ಅವರನ್ನು ಮಕ್ಕಳು ಬೆನ್ನು ಹತ್ತಿದಾಗ ಆಟೋದಲ್ಲಿದ್ದ ಇಬ್ಬರು ಲಕ್ಷ್ಮಿಯನ್ನು ಬಿಟ್ಟು ನಾಪತ್ತೆಯಾಗಿದ್ದಾರೆ. ನಂತರ ಠಾಣೆಗೆ ಸುದ್ದಿ ಮುಟ್ಟಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಉಪನಿರೀಕ್ಷಕ ಡಿ.ಜಿ. ಶ್ರೀನಿವಾಸ ಮಗುವಿನ ಅಪಹರಣದ ಹಿನ್ನೆಲೆಯ ಬಗ್ಗೆ ಡಿವೈಎಸ್ಪಿ ಎಂ. ಶೇಖರಪ್ಪ ವೃತ್ತ ನಿರೀಕ್ಷಕ ಟಿ. ಮಂಜುನಾಥ ಮಾರ್ಗದರ್ಶನದಲ್ಲಿ ತನಿಖೆ ನಡೆಸಲಾಗುತ್ತಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.