ಚಿತ್ರದುರ್ಗ ಸಿರಿ ನಾಟಕಕ್ಕೆ ಬಹುಮಾನ
ಚಿತ್ರದುರ್ಗ: ಶಿವಮೊಗ್ಗ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಬಾಲಭವನ ಸೊಸೈಟಿಯಿಂದ ಹಮ್ಮಿಕೊಂಡಿದ್ದ ಅಂತರ ಜಿಲ್ಲಾ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ಬಾಲಭವನದಿಂದ ಡಿ. ಶ್ರೀಕುಮಾರ್ ರಚಿಸಿ, ನಿರ್ದೇಶಿಸಿ, ರಂಗ ವಿನ್ಯಾಸಗೊಳಿದ ಚಿನ್ಮೂಲಾದ್ರಿ ಚಿತ್ರದುರ್ಗ ಸಿರಿ ನಾಟಕವು ತೃತೀಯ ಬಹುಮಾನ ಪಡೆದಿದೆ.
ಈ ನಾಟಕವು ಚಿತ್ರದುರ್ಗ ಗತ ವೈಭವ ಹಾಗೂ ಅಕ್ಕ- ತಂಗಿ ಉತ್ಸವದಿಂದ ಇಂದಿನವರೆಗೆ ನಡೆದ ವಿಶೇಷ ಘಟನಾವಳಿಗಳು ಹಾಗೂ ಸಂಸ್ಕೃತಿ ಬಿಂಬಿಸುವಂತಿದೆ ಎಂದು ಉತ್ತಮ ಪ್ರತಿಕ್ರಿಯೆ ಶಿವಮೊಗ್ಗದಲ್ಲಿ ವ್ಯಕ್ತವಾಗಿದೆ. ಈ ಬಹುಮಾನ ಪಡೆದ ಜಿಲ್ಲಾ ಬಾಲಭವನದ ಎಲ್ಲಾ ಮಕ್ಕಳಿಗೆ ಹಾಗೂ ಮಕ್ಕಳೊಂದಿಗೆ ತೆರಳಿದ್ದ ಡಿ. ಪುಷ್ಪ ಹಾಗೂ ಸಂಯೋಜಕ ಡಿ. ಶ್ರೀಕುಮಾರ್ ಅವರಿಗೆ ಜಿಪಂ ಸಿಇಓ ಹಾಗೂ ಜಿಲ್ಲಾ ಬಾಲಭವನ ಸಮಿತಿ ಅಧ್ಯಕ್ಷ ಕೆ.ಎಂ. ನಾರಾಯಣಸ್ವಾಮಿ, ಕಾರ್ಯದರ್ಶಿ ನಂಜೇಗೌಡ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.