ಜಾತಿ ಕಾರಣಕ್ಕೆ ಅವಕಾಶ ಸಿಗಲಿಲ್ಲ
ಹಿರಿಯೂರು: ಪ್ರಧಾನಿ ಆಗುವ ಎಲ್ಲ ಅರ್ಹತೆಗಳನ್ನು ಹೊಂದಿದ್ದ ಬಾಬು ಜಗಜೀವನರಾಂ ಅವರಿಗೆ ಜಾತಿ ಕಾರಣಕ್ಕೆ ಅವಕಾಶ ಸಿಗಲಿಲ್ಲವೆಂದು ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದ ಹರಿಶ್ಟಂದ್ರ ಘಾಟ್ ಪ್ರದೇಶದ ಆದಿಜಾಂಬವ ವಿದ್ಯಾರ್ಥಿ ನಿಲಯದ ನೂತನ ಕಟ್ಟಡದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರ್ಯೂತ್ತರ ಭಾರತದ ರಾಜಕೀಯ ರಂಗದಲ್ಲಿ ಉತ್ತಮ ಆಡಳಿತ, ಚಿಂತನೆಯಿಂದ ಹೆಸರಾಗಿದ್ದ ಮಾಜಿ ಉಪಪ್ರಧಾನಿ ಜಗಜೀವನ್‌ರಾಂರವರು ರಾಜಕೀಯ ಸ್ಥಿತ್ಯಂತರ ಮತ್ತು ಜಾತಿ ಕಾರಣಗಳಿಗಾಗಿ ಪ್ರಧಾನಿ ಪಟ್ಟಕ್ಕೇರಲು ಸಾಧ್ಯವಾಗಲಿಲ್ಲವೆಂದು ಹೇಳಿದರು.
ಜಾಮೀನು ರಹಿತ ಸಾಲ: ಶಿಕ್ಷಣ ಪಡೆಯುವ ಹಾದಿಯಲ್ಲಿ ನಿಮಗೆ ಎದುರಾಗುವ ಯಾವ ಸಮಸ್ಯೆಗಳಿಗೂ ಎದೆಗುಂದದೇ ಮುನ್ನಡೆದಾಗ ಯಶಸ್ಸು ಸಾಧ್ಯವೆಂದು ಸಲಹೆ ಮಾಡಿದರು. ರಿಜರ್ವ್ ಬ್ಯಾಂಕ್ ತನ್ನ ನೀತಿ ನಿರೂಪಣೆಯಲ್ಲಿ ಮಹತ್ತರ ಬದಲಾವಣೆ ಮಾಡಿಕೊಂಡು ವಿದ್ಯಾಬ್ಯಾಸಕ್ಕೆ ಜಾಮೀನು ರಹಿತ ಸಾಲವನ್ನು ನೀಡಬೇಕೆಂದು ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ. ಆದ್ದರಿಂದ ಯಾವುದೇ ಬ್ಯಾಂಕ್ ಶೈಕ್ಷಣಿಕ ಸಾಲದ ಸಂಬಂದ ಯಾರನ್ನೂ ಶೂರಿಟಿಗಾಗಿ , ಸ್ಥಿರಾಸ್ಥಿ ಅಡಮಾನಕ್ಕಾಗಿ ಒತ್ತಾಯಿಸುವಂತಿಲ್ಲವೆಂದು ಹೇಳಿದರು.
10 ಲಕ್ಷ ಅನುದಾನ: ಡಾ.ಬಿ. ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ನಾಲ್ಕುವರೆ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಆದಿಜಾಂಬವ ಸಮುದಾಯದ ಮತದಾರರಿದ್ದರೂ ಯಾವುದೇ ವಿಧಾನ ಸಭಾ ಕ್ಷೇತ್ರ ಅಥವಾ ಲೋಕಸಭೆ ಚುನಾವಣೆಯನ್ನು ಗೆಲ್ಲಲು ಸಾಧ್ಯವಾಗಿಲ್ಲವೆಂದು ಹೇಳಿದರು. ತಾಪಂ ಸದಸ್ಯೆ ಡಾ.ಜೆ.ಆರ್. ಸುಜಾತ ಮಾತನಾಡಿ, ಆದಿ ಜಾಂಬವ ಜನಾಂಗದ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ 10 ಲಕ್ಷ ಅನುದಾನವನ್ನು ನೀಡಿರುವ ವಿಪ ಸದಸ್ಯ ತಿಪ್ಪಾರೆಡ್ಡಿಯವರನ್ನು ಸಮುದಾಯದ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.
ಜಿ. ಧನಂಜಯ ಕುಮಾರ್, ಸುಮೇರ್, ಮಾಜಿ ಶಾಸಕ ರಾಮಯ್ಯ, ಪುರಸಭಾಧ್ಯಕ್ಷೆ ಮಂಜುಳಾ, ಜ್ಯೋತಿಲಕ್ಷ್ಮೀ ಯಾದವ್, ಕೆ.ಎಲ್. ರಾಮಸ್ವಾಮಿ, ಗುರುಶಾಮಯ್ಯ, ರವಿಕುಮಾರ್, ಕಾಂತರಾಜ್ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.