ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿತ್ರದುರ್ಗ

ಪಾಲಿಕೆಯಿಂದ ರು. 75 ಲಕ್ಷ ಉಳಿತಾಯ ಬಜೆಟ್

Parashurama
Updated On : 12 Feb 2013, 10:49 am

ದಾವಣಗೆರೆ: ಮೇಯರ್ ಮುಕ್ತ ನಿಧಿಗೆ ರು. 1 ಕೋಟಿ, ಮಹಿಳಾ ಜಿಮ್ ಸ್ಥಾಪನೆ, ಸೇನೆಗೆ ಸೇರುವ ಅಭ್ಯರ್ಥಿಗೆ ಪ್ರೋತ್ಸಾಹ ಸೇರಿದಂತೆ ಹೊಸ ಚಿಂತನೆಗಳೊಂದಿಗೆ ದಾವಣಗೆರೆ ನಗರ ಪಾಲಿಕೆಯ 201ರು.- 14ನೇ ಸಾಲಿನ ಆಯ- ವ್ಯಯದಲ್ಲಿ ಯೋಜನೆ ಮತ್ತು ಯೋಜನೇತರ ಚಟುವಟಿಕೆಗೆ ಒಟ್ಟಾರೆ ರು. 259.11 ಕೋಟಿ ಗಾತ್ರದ ರು. 75.21 ಲಕ್ಷ ಉಳಿತಾಯ ಬಜೆಟನ್ನು ಆರ್ಥಿಕ ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎಸ್. ಜಯಣ್ಣ ಮಂಡಿಸಿದರು.
  ನಗರದ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಮೇಯರ್ ಸುಧಾ ಜಯರುದ್ರೇಶ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಸಭೆಯಲ್ಲಿ, 201ರು.- 14ನೇ ಸಾಲಿನ 259.11 ಕೋಟಿ ಗಾತ್ರದ ರು. 258.ರು.6 ಕೋಟಿ ವೆಚ್ಚದ ಯೋಜನೆ ರೂಪಿಸುವ ಜೊತೆಗೆ ರು. 75.21 ಲಕ್ಷ ಉಳಿತಾಯದ ಬಜೆಟ್ ಮಂಡಿಸಿದರು. ಆಡಳಿತ ಮತ್ತು ವಿಪಕ್ಷಗಳು ಬಜೆಟ್‌ಗೆ ಬೆಂಬಲಿಸಿದರೂ, ವಿಪಕ್ಷದ ಕೆಲ ಸದಸ್ಯರು ಬಜೆಟ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
 ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಮೇಯರ್ ಮುಕ್ತನಿಧಿಗೆ 1 ಕೋಟಿ ರೂಪಾಯಿ ನಿಧಿ ಮೀಸಲಿಟ್ಟಿದೆ. ಸೇನೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರಯಾಣ ವೆಚ್ಚ ಭರಿಸುವುದು, ನಗರದ 2 ವಾರ್ಡ್‌ಗಳಲ್ಲಿ ಮಹಿಳಾ ಜಿಮ್ ಸ್ಥಾಪನೆಗೆ ಹಣ ಮೀಸಲಿಡಲಾಗಿದೆ ಎಂದು ಅವರು ತಿಳಿಸಿದರು.
ನೀರು ಪೂರೈಕೆಗೆ ವಿಶೇಷ ಒತ್ತು: ನೀರು ಪೂರೈಸುವ ಕಾಮಗಾರಿಗೆ ಸರ್ಕಾರದ ಅನುದಾನ ನೀಡಿದ್ದು, ಎಡಿಬಿ ನೆರವಿನಲ್ಲಿ ರು. ರು.6.12 ಕೋಟಿ ಕಾಯ್ದಿರಿಸಿದೆ. ತುಂಗಭದ್ರಾ ನದಿಯಿಂದ ನೀರು ಪೂರೈಸುವ ರಾಜನಹಳ್ಳಿ ಬಳಿ ಪಂಪ್ ಹೌಸ್‌ಗೆ ಎಕ್ಸ್‌ಪ್ರೆಸ್ ಫೀಡರ್ ಲೈನ್‌ಗಾಗಿ ರು. 12 ಕೋಟಿ, ಬಾತಿ ಘಟಕದವರೆಗೆ 1ರು. ಕಿ.ಮೀ. ಉದ್ದದ 700 ಮಿ.ಮೀ. ವ್ಯಾಸದ ಕೊಳವೆ ಮಾರ್ಗ, 1 ಸಾವಿರ ಅಶ್ವಶಕ್ತಿಯ 2 ಪಂಪ್ ಸೆಟ್, ಬಾತಿ ಸಮೀಪದ 20 ದಶಲಕ್ಷ ಲೀಟರ್ ನೀರು ಸಂಸ್ಕರಣ ಘಟಕ, 15 ದಶಲಕ್ಷ ಲೀಟರ್ ಶುದ್ಧ ನೀರಿನ ಸಂಗ್ರಹಣಾ ಜಲಾಗಾರ ಅಭಿವೃದ್ಧಿಗೆ ರು. 26 ಕೋಟಿ ಮೀಸಲಿಟ್ಟಿದ್ದಾಗಿ ಅವರು ಹೇಳಿದರು.
    ಬೀದಿ ದೀಪ ಸುಧಾರಣೆಗೆ 15.75 ಕೋಟಿ ಇಟ್ಟಿದ್ದು, ಹೈಮಾಸ್ಟ್ ದೀಪ ಬಳಸಲಾಗುವುದು. ನಿರ್ವಹಣಾ ಲೋಪ ತಡೆಗೆ ಕಾರ್ಯ ಪಾಲಕ ಸಮಿತಿ ರಚಿಸುವುದಾಗಿ ಅವರು ವಿವರಿಸಿದರು.
 ಜನರಿಗೆ ಬೆಳಕು ಸಿಕ್ಕರೆ, ವಿದ್ಯುತ್ ಉಳಿತಾಯವಾಗಲಿದೆ. ಪ್ರಾಯೋಗಿಕವಾಗಿ 2 ವಾರ್ಡ್‌ಗಳಲ್ಲಿ ಬೀದಿ ದೀಪ ಬದಲಿಸಿ, ಎಲ್‌ಇಡಿ ಬಲ್ಬ್ ಅಳವಡಿಸಲಾಗುವುದು. ಈ ಮೂಲಕ ವಿದ್ಯುತ್ ಉಳಿತಾಯದ ಜೊತೆಗೆ ಆರ್ಥಿಕ ಮಿತವ್ಯಯ ಸಾಧಿಸುವುದು ಪಾಲಿಕೆಯ ಮುಂದಿರುವ ಗುರಿ ಎಂದು ಅವರು ತಿಳಿಸಿದರು.
  ಎಲ್ಲಾ ಚರಂಡಿ ಸ್ವಚ್ಛಗೊಳಿಸಿ, ಹರಿವಿಗೆ ಅನುಕೂಲ ಮಾಡಲಾಗುವುದು ಎಂದು ಅವರು ಹೇಳಿದರು.
 ಮನೆ ಮನೆಯಿಂದ ಕಸ ಸಂಗ್ರಹಣೆಗೆ ರು.00 ತಳ್ಳುಗಾಡಿ, 20 ಸಣ್ಣ ಟಿಪ್ಪರ್, 2 ಡಂಪರ್ ಫ್ಲೇಸರ್, ಒಳ ಚರಂಡಿ ಸ್ವಚ್ಛತೆಗೆ 2 ಸಕ್ಕಿಂಗ್ ಯಂತ್ರ, 11 ಹೊಸ ಟ್ರ್ಯಾಕ್ಟರ್ ಖರೀದಿಸಲಿದ್ದು, ಮನೆ ಮನೆ ಕಸ ಸಂಗ್ರಹ ವ್ಯವಸ್ಥೆ ಚುರುಕುಗೊಳಿಸಲಾಗುವುದು.
  ಉಪಮೇಯರ್ ಮಹೇಶ ರಾಯಚೂರು, ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಲೋಕೇಶ, ಆವರೆಗೆರೆ ಜಿ. ಸುರೇಶ, ನಾಗರತ್ನಮ್ಮ, ಮಾಜಿ ಮೇಯರ್ ಮಾದಮ್ಮ ಮುನಿಸ್ವಾಮಿ, ಉಮಾ ಪ್ರಕಾಶ,  ಕೆ.ಆರ್. ವಸಂತಕುಮಾರ, ಎಚ್.ಎನ್. ಗುರುನಾಥ, ವಿಪಕ್ಷ ನಾಯಕ ಡಿ.ಎನ್. ಜಗದೀಶ,  ಆಯುಕ್ತ ಬಿ. ಭೀಮಪ್ಪ, ಸದಸ್ಯ ಸಂಕೋಳ ಚಂದ್ರಶೇಖರ, ಎಚ್.ಎನ್. ಶಿವಕುಮಾರ, ಎಂ.ಪಿ. ಕೃಷ್ಣಮೂರ್ತಿ ಪವಾರ್, ಎಚ್.ಎಂ. ರುದ್ರಮುನಿಸ್ವಾಮಿ, ಶಿವನಹಳ್ಳಿ ರಮೇಶ, ಮುನ್ನಾ ಪೈಲ್ವಾನ್, ದಿನೇಶ ಕೆ. ಶೆಟ್ಟಿ, ಗಿರೀಶ ಕಾರ್ನಾಡ್, ರೇಖಾ ನಾಗರಾಜ, ಸೌಭಾಗ್ಯಮ್ಮ ಮುಕುಂದ, ಕೋಳಿ ಇಬ್ರಾಹಿಂ, ಎನ್.ಕೆ. ಇಸ್ಮಾಯಿಲ್ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments