ತರಬೇತಿ
ಚಿತ್ರದುರ್ಗ: ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪಾಸಾದ ನಿರುದ್ಯೋಗಿ ಯುವಕ-ಯುವತಿಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಿಲಿಕಾನ್ ಕಂಪ್ಯೂಟರ್ ಸೆಂಟರ್ ವತಿಯಿಂದ ಉಚಿತ ಕಂಪ್ಯೂಟರ್ ಬೇಸಿಕ್, ಟ್ಯಾಲಿ, ಡಿ.ಟಿ.ಪಿ ಮತ್ತು ಕಂಪ್ಯೂಟರ್ ಹಾರ್ಡ್‌ವೇರ್ ತರಬೇತಿ ನೀಡಲಾಗುವುದು. ಆಸಕ್ತ ಯುವಕ - ಯುವತಿಯರು ಮತ್ತು ನಿರುದ್ಯೋಗಿಗಳು ಸಿಲಿಕಾನ್ ಕಂಪ್ಯೂಟರ್, ಲಕ್ಷ್ಮಿಮ್ಯಾನ್ಷನ್, ಹೊಳಲ್ಕೆರೆ ರಸ್ತೆ, ಚಿತ್ರದುರ್ಗ ಇಲ್ಲಿ ಸಂಪರ್ಕಿಸಬಹುದಾಗಿದೆ. ದೂರವಾಣಿ 08194-224813, ಮೊ 9035152171, 81977 52696.
ನೇಮಕ
ಚಿತ್ರದುರ್ಗ: ಛಲವಾದಿ ಮಹಾಸಭಾ ರಾಜ್ಯ ಸಮಿತಿ ಸಂಸ್ಥಾಪಕ, ಐಎಎಸ್ ಅಧಿಕಾರಿ ಕೆ. ಶಿವರಾಂ ಅವರು ಛಲವಾದಿ ಮಹಾಸಭಾ ಜಿಲ್ಲಾ ಸಮಿತಿಗೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಅಧ್ಯಕ್ಷರಾಗಿ ಎಚ್. ಅಣ್ಣಪ್ಪ ಸ್ವಾಮಿ, ಗೌರವಾಧ್ಯಕ್ಷರಾಗಿ ಸಜ್ಜನಕೆರೆ ಸಿದ್ದಲಿಂಗಪ್ಪ, ಉಪಾಧ್ಯಕ್ಷರಾಗಿ ಸಿ. ಚನ್ನಬಸಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಬಿ. ತಿರುಮಲೇಶ್, ಸಂಘಟನಾ ಕಾರ್ಯದರ್ಶಿಯಾಗಿ ಟಿ. ರಂಗನಾಥ್, ಖಜಾಂಚಿಯಾಗಿ ಕೆ. ದಾನಪ್ಪ ಇವರುಗಳನ್ನು ನೇಮಿಸಿದ್ದಾರೆ. ನಿರ್ದೇಶಕರುಗಳಾಗಿ ಟಿ. ನರಸಿಂಹಮೂರ್ತಿ, ಜೆ.ಕೆ. ಮಹಂತೇಶ್, ಬಿ. ರಾಘವೇಂದ್ರಸ್ವಾಮಿ, ಎಲ್. ಶ್ರೀಧರ್, ಮಂಜುನಾಥ್, ರಘು, ಉಮೇಶಪ್ಪ, ಡಿ.ಎಸ್. ಶಿವರಾಜ್, ಕೆ.ಆರ್. ನಾರಾಯಣಸ್ವಾಮಿ, ರಂಗಸ್ವಾಮಿ, ಎನ್. ತಿಪ್ಪೇಸ್ವಾಮಿ, ಎ.ಡಿ. ತಿಪ್ಪಯ್ಯ, ಮುರಿಗೇಂದ್ರಪ್ಪ, ಪಂಪಾಪತಿ, ಎಲ್. ನಾಗರಾಜ್, ಎಚ್. ಈಶ್ವರ್, ಎ.ಎಸ್. ರವಿಕುಮಾರ್, ಮುರುಳಿನಾಥ್, ಶಂಕರಪ್ಪ, ಬಿ. ಮಂಜಪ್ಪ, ಎನ್. ಜಯಶೀಲಮ್ಮ, ಚಿಕ್ಕೀರಪ್ಪ, ರಾಜಣ್ಣ, ಗಂಗಾಧರಪ್ಪ, ಪುಟ್ಟಸ್ವಾಮಿ ಇವರುಗಳನ್ನು ಸಮಿತಿಗೆ ನೇಮಕ ಮಾಡಲಾಗಿದೆ.
ನಾಳೆ ಯೋಗ ಶಿಬಿರ
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಯೋಗ ಸಂಸ್ಥೆ ವತಿಯಿಂದ 13ನೇ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಕೊಡಲಿ ಶೃಂಗೇರಿ ಮಠದಲ್ಲಿ ಆಯೋಜಿಸಿರುವ ಉಚಿತ ಯೋಗ, ಪ್ರಾಣಾಯಾಮ ಮತ್ತು ಔಷಧಿ ರಹಿತ ಚಿಕಿತ್ಸಾ ಶಿಬಿರವನ್ನು ಬೆಂಗಳೂರಿನ ಯೋಗ ಚಿಕಿತ್ಸಕ ಶ್ರೀ ಕೃಷ್ಣ ಗುರೂಜಿ ಉದ್ಘಾಟಿಸುವರು. ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಎಲ್.ಎಸ್. ಚಿನ್ಮಯಾನಂದ, ಗಿರೀಶ್, ಮಹಡಿ ಶಿವಮೂರ್ತಿ, ಎಸ್.ಜಿ. ರಂಗನಾಥ ಮತ್ತಿತರರು ಭಾಗವಹಿಸುವರು ಎಂದು ಸಂಸ್ಥೆಯ ಕಾರ್ಯದರ್ಶಿ ಓಂ ಪಾವನಪ್ರಿಯ ತಿಳಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.