ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿತ್ರದುರ್ಗ

ಸಮಾಜಕ್ಕಾಗಿ ದುಡಿಯಲು ಕರೆ

Parashurama
Updated On : 14 Feb 2013, 11:15 am

ಹೊಸದುರ್ಗ: ಕನಕದಾಸರ ಆದರ್ಶಗಳನ್ನು ಜನ ಸಾಮಾನ್ಯರಿಗೆ ತಿಳಿಸುವುದು ಸೇರಿದಂತೆ ಸಾಮಾಜಿಕ ನ್ಯಾಯಕ್ಕಾಗಿ ನೊಂದವರ ಧ್ವನಿಯಾಗಿ  ಸಮಾಜ ಮಿಡಿಯಲಿದೆ ಎಂದು ಕಾಗಿನೆಲೆ ಮಹಾ ಸಂಸ್ಥಾನದ ಬೆಂಗಳೂರು ವಿಭಾಗದ ಕೆಲ್ಲೋಡು ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.
 ಅವರು ತಾಲೂಕಿನ ಕೆಲ್ಲೋಡು ಸಮೀಪದ ವೇದಾವತಿ ನದಿ ತಟದಲ್ಲಿರುವ ಬೆಂಗಳೂರು ವಿಭಾಗದ ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಹೊಸದುರ್ಗ ಪೀಠದ ದಶಮಾನೋತ್ಸವ ಸಮಾರಂಭದ ಧರ್ಮ ಸಭೆಯಲ್ಲಿ ಮಾತನಾಡಿದರು.
ಮಠ ಗಟ್ಟಿಗೊಳಿಸಿ: ಸಂಸ್ಕೃತಿ, ಸಂಪ್ರದಾಯದಲ್ಲಿ ಉತ್ತಮ ವಿಚಾರಧಾರೆಗಳನ್ನು ಪಡೆದುಕೊಂಡು ಬಂದಿರುವ ಸಮಾಜಗಳು ಮಠವನ್ನು ಗಟ್ಟಿಗೊಳಿಸುವ ಮೂಲಕ ಸಮಾಜದ ಬಡ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ, ಪ್ರತಿಭಾವಂತರ ಪುರಸ್ಕಾರಕ್ಕೆ ವೇದಿಕೆಯಾಗಬೇಕು. ಯಾರೂ ಒಂದೆರಡು ದಿನಗಳಲ್ಲಿ ನಾಯಕನಾಗಲು ಸಾಧ್ಯವಿಲ್ಲ. ಸಮಾಜಕ್ಕೆ ಹಗಲಿರುಳು ಶ್ರಮಿಸಿ ಸಮಾಜದ ಮುನ್ನಡೆಗೆ ಕಾರಣಕರ್ತರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಮಾತ್ರ ನಾಯಕರಾಗಲು ಸಾಧ್ಯ ಎಂದರು.
 ರಾಜ್ಯದಲ್ಲಿ ಹಿಂದುಳಿದ ಸಮಾಜಗಳ ಸಂಖ್ಯೆ ಸಾಕಷ್ಟು ಇದ್ದರೂ ಸಂಘಟನೆಯ ಕೊರತೆಯಿಂದ ಅಭಿವಣದ್ಧಿಯಲ್ಲಿ ಹಿಂದುಳಿದಿವೆ. ಹಿಂದುಳಿದ ಸಮಾಜಗಳ ಮಠಗಳು ಇತ್ತೀಚಿಗಷ್ಟೆ ಬೆಳಕಿಗೆ ಬರುತ್ತಿದ್ದು,  ಎಲ್ಲರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ನೀಡುವ ಮೂಲಕ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments