ನುಂಕೆಮಲೆ ಸಿದ್ದೇಶ್ವರ ಸ್ವಾಮಿಯ ಕಳಸಾರೋಹಣ
ಮೊಳಕಾಲ್ಮುರು: ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಿರ್ಮಿಸಲಾಗಿರುವ ಇತಿಹಾಸ ಪ್ರಸಿದ್ಧ ನುಂಕೆಮಲೇ ಕಾಲಭೈರವ ಸಿದ್ದೇಶ್ವರಸ್ವಾಮಿ ನೂತನ ದೇವಸ್ಥಾನದ ಕಳಸಾರೋಹಣ ಹಾಗೂ ಸ್ವಾಮಿಯ ಶಿಲಾ ವಿಗ್ರಹ ಸ್ಥಾಪನೆಯನ್ನು ಡಾ. ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನೆರೆವೇರಿಸಿದರು.
ಈ ಭಾಗದ ಪ್ರಮುಖ ಆರಾಧ್ಯ ದೈವವಾದ ನುಂಕೆಮಲೆ ಸಿದ್ದೇಶ್ವರ ಕಾಲಭೈರವನ ದೇವಸ್ಥಾನದಲ್ಲಿ ಕಳೆದ ಮೂರು ದಿನಗಳಿಂದ ಧಾರ್ಮಿಕ ಪೂಜೆ ವಿಧಾನಗಳಿಂದ ಪ್ರಾರಂಭವಾದ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮಗಳು ಮಹಾ ರುದ್ರಹೋಮ, ಪೂರ್ಣಾಹುತಿ, ಕುಂಭಾಭಿಷೇಕ ಪೂಜೆ ಮೂಲಕ ಧಾರ್ಮಿಕ ವಿಧಿವಿಧಾನಗಳಿಂದ ವೈಭವೋಪೇತವಾಗಿ ಶ್ರೀಸ್ವಾಮಿಯ ಶಿಲಾವಿಗ್ರಹ ಸ್ಥಾಪನೆ ಮಾಡಲಾಯಿತು.
ಶ್ರೀವಿಘ್ನೇಶ್ವರ, ಜೋಡಿನಾಗ, ಅದಿತ್ಯಾದಿ, ನವಗ್ರಹ ದೇವರುಗಳ ಪ್ರತಿಸ್ಥಾಪನೆ ಮತ್ತು ವಿಮಾನ ಗೋಪುರ ಕಳಸ ಸ್ಥಾಪನೆಯನ್ನು ನಡೆಸಲಾಯಿತು.
ಗಂಗಾವತಿ ತಾಲೂಕಿನ ಸೊಳೆಕಲ್ ಭುವನೇಶ್ವೇರ ತಾತನವರು, ಕೂಡ್ಲಿಗಿ ತಾಲೂಕಿನ ಕೆ. ರಾಯಾಪುರದ ಶ್ರೀ ಶಿವಪಂಚಾಕ್ಷರಪ್ಪ ತಾತನವರು ಅಶೋಕ ಸಿದ್ದಾಪುರ ಬ್ರಹ್ಮಗಿರಿ ಬೆಟ್ಟದ ಮಹದೇವಪ್ಪ ತಾತನವರು ದೇವಸ್ಥಾನದಲ್ಲಿ ಸಾನ್ನಿಧ್ಯ ವಹಿಸಿದ್ದರು.
ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಅರ್ಚಕರು, ಶ್ರೀರಾಘವೇಂದ್ರ ಶರ್ಮ ಪಟ್ಟಣದ ಪ್ರಮುಖರು ದೇವಸ್ಥಾನದ ಭಕ್ತ ಸಮೂಹ ಭಾಗಿಯಾಗಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.