ಮತಗಟ್ಟೆ ಏಜೆಂಟರ ನೇಮಕಕ್ಕೆ ಆಹ್ವಾನ
ಚಿತ್ರದುರ್ಗ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿದ್ದು, ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಜಿಲ್ಲೆಯ ಪ್ರತಿಯೊಂದು ಮತಗಟ್ಟೆ ಮಟ್ಟದ ಏಜೆಂಟರನ್ನು ಎಲ್ಲಾ ನೋಂದಾಯಿತ ರಾಜಕೀಯ ಪಕ್ಷದವರಿಂದ ನೇಮಕ ಮಾಡಲು ಕೋರಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕೆಜೆಪಿ ಕಾರ್ಯಾಲಯ ಉದ್ಘಾಟನೆ
ಚಳ್ಳಕೆರೆ: ಕೆಜೆಪಿ ಪಕ್ಷದ ತಾಲೂಕು ಕಾರ್ಯಾಲಯ ಇಲ್ಲಿನ ವಾಲ್ಮೀಕಿ ಕಲ್ಯಾಣ ಮಂಟಪದ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಪಕ್ಷದ ನೂತನ ಕಾರ್ಯಾಲಯವನ್ನು ಜಿಲ್ಲಾ ಸಂಚಾಲಕ ರೇವಣ್ಣಸಿದ್ದಪ್ಪ ಕಾರ್ಯಾಲಯವನ್ನು ಉದ್ಘಾಟಿಸಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕರಾದ ತಿಪ್ಪೇಸ್ವಾಮಿ ವಹಿಸುವರು. ಜಿಲ್ಲಾಧ್ಯಕ್ಷ ಎಸ್. ರಮೇಶ್, ಜಿಲ್ಲಾ ಸಂಚಾಲಕ ಬಿ.ಎಸ್. ಶಿವಪುತ್ರಪ್ಪ, ಕೆ.ಟಿ. ಕುಮಾರಸ್ವಾಮಿ ಹಾಗೂ ಇನ್ನಿತರ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.