ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿತ್ರದುರ್ಗ

'ಮಾದಿಗ ಸಮುದಾಯವನ್ನು ರಾಜಕೀಯದಿಂದ ದೂರವಿಡುವ ಯತ್ನ'

Parashurama
Updated On : 15 Feb 2013, 11:52 am

ಚಳ್ಳಕೆರೆ: ಮಾದಿಗ ಸಮುದಾಯವನ್ನು ರಾಜಕೀಯ ಕ್ಷೇತ್ರದಿಂದ ದೂರವಿಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಬಂದಿದೆ. ಶತ ಶತಮಾನಗಳಿಂದ ಅವಮಾನ, ಶೋಷಣೆ ಹಾಗೂ ದೌರ್ಜನ್ಯಕ್ಕೆ ತುತ್ತಾಗಿರುವ ಈ ಸಮಾಜವನ್ನು ರಾಜಕೀಯವಾಗಿ ಬೆಳೆಸುವ ಯತ್ನವನ್ನು ಯಾವುದೇ ರಾಜಕೀಯ ಪಕ್ಷಗಳು ಮಾಡುತ್ತಿಲ್ಲ.  ಮುಂಬರುವ ದಿನಗಳಲ್ಲಾದರೂ ಮಾದಿಗ ಸಮುದಾಯಕ್ಕೆ ಸೂಕ್ತ ರಾಜಕೀಯ ಅವಕಾಶಗಳನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಮುಂದಾಗಬೇಕೆಂದು ದಲಿತರ ಪರಚಿಂತಕ ಮಾದಿಗ ಸಮುದಾಯದ ಪ್ರಮುಖ ಮುಖಂಡರಾದ ಎಂ. ಶಿವಮೂರ್ತಿ ಮನವಿ ಮಾಡಿದ್ದಾರೆ.  
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜನಾಂಗದ ಮುಖಂಡರಾದ ಆರ್.ಡಿ. ಮಂಜುನಾಥ, ಚನ್ನಿಗ ರಾಮಯ್ಯ, ಸಿದ್ದಾಪುರದ  ರುದ್ರಮುನಿ, ಕರೀಕೆರೆ ರಾಜಣ್ಣ, ರಾಮಾಂಜಿನೇಯ, ಮೀರಾಸಾಬಿಹಳ್ಳಿ ರಂಗಪ್ಪ ಇನ್ನಿತರೆ ಮುಖಂಡರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement