'ಸಾಕ್ಷರತಾ ತೇರು ಎಳೆಯೋಣ, ಮೌಢ್ಯತೆ ಆಳಿಸೋಣ'
ಹೊಳಲ್ಕೆರೆ: ಲೋಕ ಶಿಕ್ಷಣ ಸಮಿತಿಯಿಂದ ತಾಲೂಕಿನ ತಣಿಗೆಹಳ್ಳಿ ಗ್ರಾಮದಲ್ಲಿ ಅನಕ್ಷರಸ್ಥರಿಗಾಗಿ “ÑÛOÚÐÁÚ}Û ತೇರು ಎಳೆಯೋಣ, ಮೌಢ್ಯತೆ AØÑæàÞy’ ಎಂಬ ವಿನೂತನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಇಕ್ಕೇರಿ ಉದ್ಘಾಟಿಸಲಿದ್ದಾರೆ ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ಮೋಹನ್ ನಾಗರಾಜ್ ಹೇಳಿದರು.
ಇಲ್ಲಿಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ಗಡಿ ಭಾಗದಲ್ಲಿರುವ ತಣಿಗೆಹಳ್ಳಿಯಲ್ಲಿ 160 ಅನಕ್ಷರಸ್ಥರನ್ನು ಗುರುತಿಸಿದ್ದು ಅವರಿಗೆ ಅಕ್ಷರ ಕಲಿಸಲು ಸ್ವಯಂ ಸೇವಕರನ್ನು ನೇಮಿಸಲಾಗಿದೆ ಎಂದರು.
ಈ ಉದ್ಘಾಟನೆ ಸಮಾರಂಭದಲ್ಲಿ ಪಶು ಸಂಗೋಪನೆ ಇಲಾಖೆ, ತೋಟಗಾರಿಕೆ ಇಲಾಖೆ ಸಸಿ ನೆಡುವ ಕಾರ್ಯಕ್ರಮ, ಕೃಷಿ ಇಲಾಖೆಯಿಂದ ಸಾಯಯವ ತೊಟ್ಟಿ ನಿರ್ಮಿಸಿ ಅಜೋಲದ ಪ್ರಾತ್ಯಕ್ಷಿತೆ ನೀಡಲಾಗುವುದು. ಶಿಕ್ಷಣ ಇಲಾಖೆ ಇಂಗ್ಲಿಷ್ ಕಾರ್ನರ್ ಆರಂಭಿಸಬೇಕು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಕ್ಷರತಾ ಕಾರ್ಯಕರ್ತರೊಂದಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಸ್ತ್ರೀಶಕ್ತಿ ಸಂಘ, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಬೇಕೆಂದರು.
ತಾಪಂ ಇಓ ಎಚ್. ರಾಮಕುಮಾರ್ ಮಾತನಾಡಿ, ಸಾಕ್ಷರತೆ ಎಂದರೆ ಅಕ್ಷರ ಜ್ಞಾನವಲ್ಲ. ಅದರ ಜೊತೆ ಮೂಢನಂಬಿಕೆ ತೊರೆದು ವೈಜ್ಞಾನಿಕ ಮನೋಭಾವನೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಬಿಇಒ ಎಸ್.ಆರ್. ಮಂಜುನಾಥ್, ತೋಟಗಾರಿಕೆ ಅಧಿಕಾರಿ ದೇವರಾಜ್, ಬಿ.ಆರ್.ಸಿ ಎಚ್. ಲೇಪಾಕ್ಷಪ್ಪ, ಜಿಪಂ ಎಂಜಿನಿಯರ್ ರೇಣುಕಾಚಾರ್ಯ, ಜಿ. ಪ್ರಭಾಕರ್, ತಿಪ್ಪೇಸ್ವಾಮಿ, ಕೆ.ಎನ್. ರಂಗಸ್ವಾಮಿ ಇತರರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.