ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿತ್ರದುರ್ಗ

ಹೊಸ ಸಂಸ್ಕೃತಿಯಿಂದ ಸಾಂಸ್ಕೃತಿಕ ಪಲ್ಲಟ

Parashurama
Updated On : 15 Feb 2013, 11:44 am

ಚಿತ್ರದುರ್ಗ: ಹೊಸ ಸಂಸ್ಕೃತಿಯ ಉದಯದಿಂದಾಗಿ ಭಾರತ ಸಾಂಸ್ಕತಿಕ ಪಲ್ಲಟದ ಅವಸ್ಥೆಯಲ್ಲಿದೆ ಎಂದು ಮದಕರಿ ನಾಯಕ ವಿದ್ಯಾಸಂಸ್ಥೆಯ ತತ್ವಶಾಸ್ತ್ರ ಉಪನ್ಯಾಸಕ ರಾಜೀವಲೋಚನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಹೊರವಲಯದ ಬಾಪೂಜಿ ಸಮೂಹ ಸಂಸ್ಥೆ ಹಾಗೂ ಬಾಪೂ ಸೇವಾ ಸಮಿತಿ ಸಹಯೋಗದಲ್ಲಿ ಗುರುವಾರ ನಡೆದ ಮಾತಾ-ಪಿತೃ ಪೂಜಾ ದಿನ ಹಾಗೂ ವ್ಯಸನ ಮುಕ್ತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವ ಜನತೆ ಮರೆಯಬಾರದು: ನಮ್ಮ ಯುವಜನತೆ ಹಳೆಯ ಮೌಲ್ಯ ಕಿತ್ತು ಹಾಕಿ ಹೊಸ ಮೌಲ್ಯದತ್ತ ಸಾಗುತ್ತಿರುವುದು ನೋವಿನ ಸಂಗತಿ. ವಿಶ್ವದ ನಾನಾ ದಾರ್ಶನಿಕರಿಗೆ ಮಾರ್ಗದರ್ಶನ ನೀಡಿದ ಭಾರತೀಯ ಸಂಸ್ಕೃತಿಯನ್ನು ಯುವ ಜನತೆ ಮರೆಯಬಾರದು ಎಂದು ಸಲಹೆ ನೀಡಿದರು.
ನಮ್ಮ ಸಂಸ್ಕೃತಿಯಲ್ಲಿ ಯಾವುದನ್ನೂ ಕಡ್ಡಾಯ ಮಾಡಿಲ್ಲ. ಹಾಗಾಗಿ ಒಳ್ಳೆಯದನ್ನು ಕಲಿತು ಬೇಡವಾದದ್ದನ್ನು ಕೈಬಿಡಬೇಕು. ಮಕ್ಕಳನ್ನು ಕಷ್ಟಪಟ್ಟು ಬೆಳೆಸುವ ತಂದೆ-ತಾಯಿಯರನ್ನು ಪೂಜಿಸುವ, ಗೌರವಿಸುವ ಕೆಲಸ ಆಗುವ ಮೂಲಕ ನಮ್ಮ ಎಲ್ಲಾ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಕೆಲಸ ಆಗಬೇಕು ಎಂದರು.
ಸ್ವಾಗತಾರ್ಹ: ಬಾಪೂ ಸೇವಾ ಸಮಿತಿ ಅಧ್ಯಕ್ಷೆ ಡಾ. ಜಯಮ್ಮ ಮಾತನಾಡಿ, ಫೆ.14ರಂದು ಸದ್ಭಾವನಾ ದಿನವನ್ನಾಗಿ ಆಚರಿಸುವಂತೆ ಸರಕಾರ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಯಾವ ಜಾತಿಯ ತಂದೆ-ತಾಯಂದಿರೂ ಮಕ್ಕಳಿಗೆ ಕೆಟ್ಟದ್ದನ್ನು ಬಯಸುವುದಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮ ಹಾಗೂ ಅನಾಥಾಲಯ ಸಾಕಷ್ಟು ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂಸ್ಕೃತಿ ಗಟ್ಟಿ ಮಾಡಿ: ಮಾತಾ-ಪಿತೃಗಳನ್ನು ಗೌರವಿಸುವುದರಿಂದ ಆಯಸ್ಸು, ವಿದ್ಯೆ, ಬಲ ಸಿಗುತ್ತದೆ. ಅಂತಹ ಸೂಕ್ಷ್ಮ ಸಂವೇದನೆ ಅರಿತು ಇಂದಿನ ಯುವ ಜನತೆ ನಮ್ಮ ಸಂಸ್ಕೃತಿ ಗಟ್ಟಿಗೊಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ರಂಗ ನಿರ್ದೇಶಕ ಅಶೋಕ್ ಬಾದರದಿನ್ನಿ ಮಾತನಾಡಿ, ತಂದೆ ಎಂದರೆ ತ್ಯಾಗ, ತಾಯಿ ಎಂದರೆ ನಿಷ್ಕಲ್ಮಶವಾದ ಹರಿಯುವ ನೀರು. ಅಂತಹವರನ್ನು ಕೇವಲ ಫೆ.14ರಂದು ಮಾತ್ರ ಪೂಜಿಸದೇ ನಿತ್ಯ ಗೌರವಿಸುವಂತಾಗಬೇಕು ಎಂದರು.
ಇಟಲಿಯ ಒಬ್ಬ ಪಾದ್ರಿಯನ್ನು ಗಲ್ಲಿಗೇರಿಸಿದ ದಿನ ಇದಾಗಿದ್ದು, ಪವಿತ್ರ ದಿನವನ್ನಾಗಿ ಆಚರಿಸಬೇಕೇ ವಿನ- ಪ್ರೇಮಿಗಳ ದಿನವನ್ನಾಗಿ ಆಚರಿಸಬಾರದು ಎಂದು ಹೇಳಿದರು.
ಬಾಪೂ ಸೇವಾ ಸಮಿತಿ ಕಾರ್ಯದರ್ಶಿ ಎಸ್.ಜಿ. ಸುರೇಶ್‌ಬಾಬು ಮಾತನಾಡಿ, ಇಂದಿನ ಯುವ ಜನತೆ ಯಾವ ದುಶ್ಚಟಗಳಿಗೂ ಬಲಿಯಾಗದೇ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.
ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಎಂ. ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತಾಕಾರಿ ಗುರುಮೂರ್ತಿ, ಜಿ.ಟಿ. ವಿರೂಪಾಕ್ಷಪ್ಪ, ರುದ್ರಪ್ಪ, ಪ್ರಾಚಾರ್ಯ ಶಿವಕುಮಾರ್ ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments