ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿತ್ರದುರ್ಗ

'ಕನ್ನಡಪ್ರಭ'ದ ಪ್ರಭಾಕರ್‌ಗೆ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರದಾನ

Parashurama
Updated On : 18 Feb 2013, 12:50 pm

ಚಿತ್ರದುರ್ಗ: 'ಕನ್ನಡಪ್ರಭ' ಪತ್ರಿಕೆಯ ಎರಡು ಪ್ರತಿಭೆಗಳಿಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಭಾನುವಾರ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿತು. 'ಕನ್ನಡಪ್ರಭ'ದ ಮುಖ್ಯ ವರದಿಗಾರ ಕೆ.ವಿ. ಪ್ರಭಾಕರ್ ಮತ್ತು ಪತ್ರಿಕೆಯ ನಿವೃತ್ತ ಹಿರಿಯ ಉಪ ಸಂಪಾದಕ ಕಾಸರವಳ್ಳಿ ಸುಬ್ಬಣ್ಣ ಅವರಿಗೆ 'ವಿಡಂಬನಾತ್ಮಕ ಹಾಗೂ ಹಾಸ್ಯ ಚಕ್ರವರ್ತಿ ನಾಡಿಗೇರ ಕೃಷ್ಣರಾಯ ಸ್ಮಾರಕ' ಪ್ರಶಸ್ತಿ ನೀಡಲಾಯಿತು.  2009ರ ಸಾಲಿನ ಪ್ರಶಸ್ತಿ ಪ್ರಭಾಕರ್ ಅವರಿಗೆ, 2010 ಸಾಲಿನ ಪ್ರಶಸ್ತಿ ಸುಬ್ಬಣ್ಣ ಅವರಿಗೆ ನೀಡಲಾಗಿದೆ. ಸಂಘದ ವಿಶೇಷ ಪ್ರಶಸ್ತಿಗಳನ್ನು ಆರು ಮಂದಿಗೆ, ಉದಯೋನ್ಮುಖ ಪತ್ರಕರ್ತ ಪ್ರಶಸ್ತಿಯನ್ನು 15 ಜನರಿಗೆ ನೀಡಲಾಯಿತು. ಚಿತ್ರದುರ್ಗದ ಮುರುಗೇಶ್ ಅವರಿಗೆ 2009ರ ಸಾಲಿನ 'ಪಿ. ರಾಮಯ್ಯ' ಪ್ರಶಸ್ತಿ, 2009ರ ಸಾಲಿನ 'ಡಿವಿಜಿ' ಪ್ರಶಸ್ತಿಗೆ ಮೇಘಾ ಗಂಗಾಧರನಾಯಕ್, 2009ಕ 'ಬದರಿನಾಥ ಹೊಂಬಾಳೆ' ಪ್ರಶಸ್ತಿಯನ್ನು 'ಲಕ್ಷ್ಮಣ ವಾಯ್ಸ್‌' ಸಂಪಾದಕ ಲಕ್ಷ್ಮಣ್ ಅವರಿಗೆ ನೀಡಿ ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement