ಡಾ. ಜಿಎಸ್ಸೆಸ್‌ಗೆ ಜಯದೇವ ಪುರಸ್ಕಾರ
ಚಿತ್ರದುರ್ಗ: ದಾವಣಗೆರೆಯ ಎಸ್‌ಜೆಎಂ ಶಿವಯೋಗಾಶ್ರವು ಟ್ರಸ್ಟ್ ವತಿಯಿಂದ ಇದೇ ಮೊದಲ ಬಾರಿಗೆ ಲಿಂಗೈಕ್ಯ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯವರ 56ನೇ ಪುಣ್ಯ ಸ್ಮರಣೋತ್ಸವ- 2013ರ ಅಂಗವಾಗಿ ಪ್ರತಿಷ್ಠಿತ ಜಯದೇವ ಪುರಸ್ಕಾರವನ್ನು ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರಿಗೆ ಫೆ.24ರಂದು ನೀಡಿ ಗೌರವಿಸಲಾಗುವುದು. ಪ್ರಶಸ್ತಿ 50 ಸಾವಿರ ನಗದು ಹಾಗೂ ಸ್ಮರಣಿಕೆಯನ್ನೊಳಗೊಂಡಿದೆ. ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿರುವ ಕವಿಯ ನಿವಾಸಕ್ಕೆ ಸಂಜೆ 4.30ಕ್ಕೆ ತೆರಳಿ ಡಾ. ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.