ನಾಳೆಯಿಂದ ವಚನಕಾರರ ಜಯಂತಿ
ಸಾಣೇಹಳ್ಳಿ: ಶಿವಕುಮಾರ ಕಲಾಸಂಘ, ಚಿತ್ರದುರ್ಗ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಾರ್ಚ್ 9 ಮತ್ತು 10 ರಂದು ಸಾಣೇಹಳ್ಳಿಯಲ್ಲಿ ವಚನಕಾರರ ಜಯಂತಿ ನಡೆಯಲಿದೆ.
9ರ ಸಂಜೆ ನಡೆಯುವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ವಹಿಸುವರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶ್ರೀ ಕಾರ್ಯಕ್ರಮ ಉದ್ಘಾಟಿಸುವರು. ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಆಶಯ ನುಡಿಗಳನ್ನಾಡುವರು.
ನೃತ್ಯ ರೂಪಕ: ಅತಿಥಿಗಳಾಗಿ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ಜಿಲ್ಲಾ ಪೊಲೀಸ್ ವರಿಷ್ಠ ಎಂ.ಎನ್. ನಾಗರಾಜ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ. ನಾರಾಯಣಸ್ವಾಮಿ ಭಾಗವಹಿಸುವರು. ನೃತ್ಯಪಟು, ನಟಿ ವೈಜಯಂತಿ ಕಾಶಿ ಮತ್ತು ಅವರ ತಂಡ ವಚನ ತರಂಗ ಎನ್ನುವ ನೃತ್ಯ ರೂಪಕ ಪ್ರದರ್ಶಿಸುವರು.
ಮಾರ್ಚ್ 10 ರ ಬೆಳಗ್ಗೆ 10 ಗಂಟೆಯಿಂದ ನಡೆಯುವ ವಚನಗಳಲ್ಲಿ ಸಾಮಾಜಿಕ ಆಯಾಮ ಗೋಷ್ಠಿಯ ಅಧ್ಯಕ್ಷತೆಯನ್ನು ಕವಿ ಎಸ್.ಜಿ. ಸಿದ್ಧರಾಮಯ್ಯ ವಹಿಸುವರು. ಡಾ. ಲೋಕೇಶ ಅಗಸನಕಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡುವರು. ಡಾ. ಅಮರೇಶ ನುಗಡೋಣಿ ಸಿದ್ಧರಾಮನನ್ನು ಕುರಿತಂತೆ ಹಾಗೂ ಡಾ. ಉಷಾಕಿರಣ್ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಮುಂತಾದ ವಚನಕಾರರು ಕುರಿಂತಂತೆ ಮಾತನಾಡುವರು.
ವಿವಿಧ ಗೋಷ್ಠಿ: ಮಧ್ಯಾಹ್ನದ ಗೋಷ್ಠಿ ವಚನಗಳಲ್ಲಿ ಆನುಭಾವಿಕ ನೆಲೆಗಳ ಸ್ವರೂಪದ ಅಧ್ಯಕ್ಷತೆಯನ್ನು ಪ್ರೊ. ಬಿ.ಪಿ. ವೀರೇಂದ್ರಕುಮಾರ್ ವಹಿಸುವರು. ಅಲ್ಲಮ ಕುರಿತಂತೆ ಪ್ರೊ. ನಟರಾಜ್ ಬೂದಾಳ್, ಅಕ್ಕಮಹಾದೇವಿ ಕುರಿತಂತೆ ಡಾ. ವೀಣಾ ಬನ್ನಂಜೆ ಮಾತನಾಡುವರು.
ಸಂಜೆ ನಡೆಯುವ ಸಮಾರೋಪದ ಸಾನ್ನಿಧ್ಯವನ್ನು ವಚನಾನಂದ ಸ್ವಾಮಿ ವಹಿಸುವರು. ಅತಿಥಿಗಳಾಗಿ ಚಿತ್ರದುರ್ಗ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇರ್ಶಕ ಎಚ್. ಮಂಜುನಾಥ್ ಭಾಗವಹಿಸುವರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ರಾಘವೇಂದ್ರ ಪಾಟೀಲರು ಸಮಾರೋಪ ನುಡಿಗಳನ್ನಾಡುವರು.
ಚಿತ್ರದುರ್ಗದ ಅಂಜನಾ ನೃತ್ಯ ಕಲಾಕೇಂದ್ರದಿಂದ ವಚನ ನೃತ್ಯ ರೂಪಕ, ಶಿವಸಂಚಾರ ತಂಡ, ಸವಿತಾ ನುಗಡೋಣಿ, ವಿರುಪಾಕ್ಷಪ್ಪ, ಮೀನಾಕ್ಷಿ ಭಟ್, ತ್ರಿವೇಣಿ, ಮುರಾರ್ಜಿ ಹಾಗೂ ಸಂಗಡಿಗರಿಂದ ವಚನ ಗಾಯನ ನಡೆಯಲಿದೆ.
ನಂತರ ಡಾ. ಮಹದೇವ ಬಣಕಾರ ರಚಿತ, ವೈ.ಡಿ. ಬದಾಮಿ ನಿರ್ದೇಶನದ ಉರಿಲಿಂಗಪೆದ್ದಿ ನಾಟಕವನ್ನು ಶಿವಕುಮಾರ ಕಲಾಸಂಘದವರು ಅಭಿನಯಿಸುವರು. ಆಸಕ್ತ ಸಾರ್ವಜನಿಕರು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಠದ ಪ್ರಕಟಣೆ ತಿಳಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.