ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿತ್ರದುರ್ಗ

ಗುರು ಮತ್ತು ಗುರಿಯನ್ನು ತೊರೆಯಬಾರದು

Parashurama
Updated On : 9 Mar 2013, 11:22 am

ಕ.ಪ್ರ.ವಾರ್ತೆ, ಚಿತ್ರದುರ್ಗ, ಮಾ.8
ಮನುಷ್ಯನ ಬದುಕಿನಲ್ಲಿ ಯಾರನ್ನಾದರೂ ತೊರೆಯಬಹುದು. ಆದರೆ, ಗುರು ಮತ್ತು ಗುರಿಯನ್ನು ತೊರೆಯಬಾರದು ಎಂದು ಗೋಕಾಕ್‌ನ ಹುಣಸೇಹಾಳ್ ಸಿದ್ದಲಿಂಗೇಶ್ವರ ಕೈವಲ್ಯಾಶ್ರಮದ ಶ್ರೀ ನಿಜಗುಣದೇವರು ಹೇಳಿದರು.
 ನಗರದ ಕಬೀರಾನಂದಾಶ್ರಮದಲ್ಲಿ ನಡೆಯುತ್ತಿರುವ ಶಿವರಾತ್ರಿ ಮಹೋತ್ಸವದ ಮೂರನೆ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಪೊನ್ನಪ್ಪ ಮಾತನಾಡಿ, ಕಬೀರಾನಂದಾಶ್ರಮ ಯಾವುದೇ ಜಾತಿಗೆ ಸೀಮಿತವಾಗದೇ ಎಲ್ಲಾ ಜನಾಂಗದಲ್ಲೂ ಭಕ್ತರನ್ನು ಹೊಂದಿದ್ದು, ಅವರಿಂದ ನಿರಂತರವಾಗಿ ಶಿವರಾತ್ರಿ ಮಹೋತ್ಸವ ಕಳೆದ 82 ವರ್ಷಗಳಿಂದ ನಡೆಯುತ್ತಿದೆ ಎಂದರು.
 ಸಿದ್ದಾರೂಢ ಆಶ್ರಮದ ಕೃಷ್ಣಾನಂದಾ ಶ್ರೀಗಳು ಮಾತನಾಡಿ, ಸಮಾಜದಲ್ಲಿ ಎಲ್ಲಾ ಸೇವೆಗಳಿಗಿಂತ ಗುರುವಿನ ಸೇವೆ ಅತಿ ಮುಖ್ಯವಾಗಿದು ಎಂದು ಹೇಳಿದರು.
 ಕಾರ್ಯಕ್ರಮದಲ್ಲಿ ಶ್ವಾಸಗುರು ವಚನಾನಂದ ಶ್ರೀಗಳು,  ಕಟ್ನೂರು ವಿರಕ್ತ ಮಠ ತೀರ್ಥದ ಶ್ರೀ ಚನ್ನಬಸವ ದೇಶಿಕೇಂದ್ರ ಶ್ರೀಗಳು, ಹಾಸನದ ಆದಿಚುಂಚನಗಿರಿ ಮಹಾ ಸಂಸ್ಥಾನದ ಶಾಖಾ ಮಠದ ಶ್ರೀ ಶಂಭೂನಾಥ ಶ್ರೀಗಳು, ಬೀದರ್ ಗುರುದೇವಾಶ್ರಮದ ಶ್ರೀ ಗಣೇಶಾನಂದ ಮಹಾರಾಜರು ಹಾಗೂ ಶಿವಲಿಂಗಾನಂದ ಶ್ರೀಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments