ಹಾಲುರಾಮೇಶ್ವರ ಉತ್ಸವದಲ್ಲಿಂದು
ಹೊಸದುರ್ಗ: ಮಹಾಶಿವರಾತ್ರಿ ಅಂಗವಾಗಿ ಜರುಗುವ ಶ್ರೀ ಹಾಲುರಾಮೇಶ್ವರ ಉತ್ಸವದಲ್ಲಿ ಶನಿವಾರ ಸಂಜೆ ಅರುಣ್ ಎಂ.ಡಿ. ಪಲ್ಲವಿ ತಂಡದವರಿಂದ ವಾದ್ಯಗೋಷ್ಠಿ, ಗರ್ಣೇಶ ಶಂಕರಿ ತಂಡದವರಿಂದ ಚಲನಚಿತ್ರ ನೃತ್ಯ ನಡೆಯಲಿದೆ. ಕೈಲಾಸ ಪರ್ವತದಲ್ಲಿ ಪರಶಿವನ ಮೂರ್ತಿಯನ್ನು ಸ್ಥಾಪಿಸಿ ಸುಂದರ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಸುವರ್ಣ 24 ್ಢ7 ವಾಹಿನಿಯ ಸಂಯೋಜನೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
10 ರಂದು ಇಡೀ ರಾತ್ರಿ ಭಾನುಪ್ರಕಾಶ್ ಶರ್ಮಾ ಅವರಿಂದ ಗಿರಿಜಾ ಕಲ್ಯಾಣ ಮಹೋತ್ಸವ ನಡೆಯಲಿದೆ. ಅದೇ ರಾತ್ರಿ 9 ಗಂಟೆಗೆ ರಿದಮ್ಸ್ ಆಫ್ ಇಂಡಿಯಾ ವಾದ್ಯ ಗೋಷ್ಠಿ, 11 ಗಂಟೆಗೆ ಸಂಗೀತ ಮತ್ತು ತಂಡದವರಿಂದ ಜಾನಪದ ರಾಕ್, ರಾತ್ರಿ 1 ಗಂಟೆಗೆ ಪ್ರವೀಣ್ ಡಿ. ರಾವ್ ತಂಡದವರಿಂದ ವಾದ್ಯ ಗೋಷ್ಠಿ, ಮಾ.11 ರ ಬೆಳಗಿನ ಜಾವ ಜಾನಪದ ಜಾತ್ರೆ ನಡೆಯಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.