ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿತ್ರದುರ್ಗ

ಹೆಣ್ಣಿನ ಶೋಷಣೆ ನಿಲ್ಲಲಿ

Parashurama
Updated On : 9 Mar 2013, 11:21 am

ಕಪ್ರ ವಾರ್ತೆ, ಹಿರಿಯೂರು, ಮಾ.8
ಅಸಹಾಯಕತೆಯನ್ನು ಮುಂದುಮಾಡಿಕೊಂಡೇ ಕಾಲಾಂತರದಿಂದಲೂ ನಡೆಯುತ್ತಿರುವ ಹೆಣ್ಣಿನ ಶೋಷಣೆ ನಿಂತಾಗ ಮಾತ್ರ ಅರ್ಥಪೂರ್ಣ ಸಮಾಜ ಕಟ್ಟಲು ಸಾಧ್ಯವಿದೆ ಎಂದು ಸಾಹಿತಿ ಡಾ. ಶಿವಲಿಂಗಪ್ಪ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೆಡ್‌ಕ್ರಾಸ್ ಯುವ ಘಟಕ, ಮಹಿಳಾ ಸಬಲೀಕರಣ ಘಟಕದ  ಸಂಯೋಗದಲ್ಲಿ ಪಟ್ಟಣದ ವಾಣಿ ಸಹಕಾರಿ ಸಕ್ಕರೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ  ಮಹಿಳಾ ಅಂತರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪುರುಷರಿಗೆ ಸಮಾನವಾದ ಹಕ್ಕುಗಳು ಮಹಿಳೆಯರಿಗೆ ದೊರೆತಾಗ ತಾರತಮ್ಯರಹಿತ ಸಮಾಜ ನಿರ್ಮಿಸಲು ಸಾಧ್ಯವಿದೆಯೆಂದು ಹೇಳಿದರು.
ಲಿಂಗ ಅಸಮಾನತೆ, ತಾರತಮ್ಯ ನೀತಿಗಳಿಂದಲೇ ಬಹುತೇಕ ಸಮಾಜಗಳು ನರಳುತ್ತಿದ್ದು ಮನುಷ್ಯ ನಿರ್ಮಿತ ಈ ವ್ಯವಸ್ಥೆಯಲ್ಲಿ ಎಲ್ಲ ಬಗೆಯ ಹಕ್ಕು ಮತ್ತು ಭಾಧ್ಯತೆಗಳನ್ನು ನೀಡುವುದು ನಾಗರಿಕ ಸಮಾಜದ ನೈತಿಕ ಕರ್ತವ್ಯವಾಗಿದೆಯೆಂದು ಹೇಳಿದರು.
ಮುಕ್ತ ಅವಕಾಶವಿರಲಿ: ಕನ್ನಡ ವಿಭಾಗದ ಮುಖ್ಯಸ್ಥೆ ಎಚ್.ಆರ್. ರಂಗಲಕ್ಷ್ಮಮ್ಮ ಮಾತನಾಡಿ, ಶೋಷಣೆಯ ಸಂಕೋಲೆಯಿಂದ ಮುಕ್ತವಾಗಿ ಪುರಷರಿಗೆ ಸಮಾನವಾಗಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಮಹಿಳೆಯರಿಗೆ ಕಾನೂನುಬದ್ಧ ಹಕ್ಕುಗಳನ್ನು ಚಲಾಯಿಸಲು ಮುಕ್ತ ಅವಕಾಶವಿದ್ದಾಗ ಲಿಂಗ ತಾರತಮ್ಯ ನೀತಿಗೆ ಕೊನೆ ಹಾಡಲು ಸಾಧ್ಯವಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಕೇವಲ ಶಿಕ್ಷಣವನ್ನು ನೀಡಿದರೆ ಮಹಿಳೆಯರಿಗೆ ಎಲ್ಲ ಬಗೆಯ ಸಾಮರ್ಥ್ಯ ಮೈಗೂಡಿಕೊಳ್ಳುತ್ತದೆ ಎನ್ನುವ ಕಲ್ಪನೆ ಸುಳ್ಳಾಗಿದೆ. ಇಂದು ಶೋಷಣೆಗೆ ತುತ್ತಾಗುತ್ತಿರುವವರಲ್ಲಿ ಶಿಕ್ಷಿತರೇ ಹೆಚ್ಚಾಗಿದ್ದಾರೆಂದು ಹೇಳಿದರು.  
ಹಕ್ಕು ಸಿಕ್ಕಿಲ್ಲ: ಹಿರಿಯ ವಕೀಲೆ ಅಸ್ಗರ್ ಉನ್ನೀಸಾ ಮಾತನಾಡಿ, ಭಾರತದಂತಹ ದೇಶದಲ್ಲಿ ಮಹಿಳೆಯರನ್ನು  ಪೂಜ್ಯನೀಯವಾಗಿ ಕಂಡರೂ ಕೂಡ ಅವರಿಗೆ ಸಿಗಬೇಕಾದ ಹಕ್ಕು ಅಧಿಕಾರಗಳು ಲಭ್ಯವಾಗಿಲ್ಲವೆಂದರು.
ಹೆಣ್ಣನ್ನು ಗೌರವಿಸುವ, ಅಧಿಕಾರ ಮತ್ತು ಆದ್ಯತೆಗಳನ್ನು ಮುಕ್ತವಾಗಿಡುವ ಮೂಲಕ ಮಹಿಳಾ ಸಬಲೀಕರಣ  ಸಾಧ್ಯವಿದ್ದು ಯಾವುದೇ ನಿರ್ದಿಷ್ಟ ನಿಯಮಗಳನ್ನು ಸಡಿಲಗೊಳಿಸುವುದರಿಂದ ಅದು ಸಾಧ್ಯವಿಲ್ಲವೆಂದು ಹೇಳಿದರು.
ಪ್ರೊ.ಜಿ. ಧರಣೇಂದ್ರಯ್ಯ, ಜಿ. ರಾಜಶೇಖರ್, ವೈ. ತಿಪ್ಪೇಸ್ವಾಮಿ, ಆರ್.ಟಿ. ಕೀರ್ತಿಕುಮಾರ್, ಜಿ. ತಿಮ್ಮೇಗೌಡ,  ಜಿ. ದೊಡ್ಡಬಸಪ್ಪ, ಎಚ್.ಟಿ. ತಿಪ್ಪೇಸ್ವಾಮಿ, ಬಿ.ಎಸ್. ರಾಘವೇಂದ್ರ, ಉಪನ್ಯಾಸಕ ರಂಗಸ್ವಾಮಿ ಸಕ್ಕರ, ಹೊನ್ನೇಶ್ವರಪ್ಪ, ದಯಾನಂದ, ಮಹಂತೇಶ್, ಸಿ. ರಂಗಸ್ವಾಮಿ, ರಾಘವೇಂದ್ರ, ಬಿಂದಿಯಾ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments