ಉಚಿತ ನೇತ್ರ ತಪಾಸಣಾ ಶಿಬಿರ
ಕಪ್ರ ವಾರ್ತೆ, ಹಿರಿಯೂರು, ಮಾ.9
ಆರ್ಥಿಕವಾಗಿ ಹಿಂದುಳಿದಿರುವ ಬಡ ಜನರಿಗೆ ನೆರವಾಗುವ ಸಲುವಾಗಿ ನಿರಂತರವಾಗಿ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗುತ್ತಿರುವುದು ಶ್ಲಾಘನೀಯ ಎಂದು ಆಲೂರು ಇಂದ್ರಕುಮಾರ್ ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಘಟಕ ಮತ್ತು ವಿಜಯ ಕಣ್ಣಿನ ಆಸ್ಪತ್ರೆ ಸಂಯೋಗದಲ್ಲಿ ಪಟ್ಟಣದ ಶ್ರೀ ರಾಮ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ರೆಡ್‌ಕ್ರಾಸ್ ಮತ್ತು ವಿಜಯ ಕ್ಲಿನಿಕ್‌ನ ಸಹಯೋಗದೊಂದಿಗೆ ನಡೆಯುತ್ತಿರುವ ಶಿಬಿರಗಳಿಂದಾಗಿ ಸಾವಿರಾರು ಬಡ ಜನರು ಪ್ರಯೋಜನ ಪಡೆದಿದ್ದಾರೆಂದು ಹೇಳಿದರು.
ಸಮಸ್ಯೆ ಬಗೆಹರಿಸಿಕೊಳ್ಳಿ: ಶಿಬಿರದಲ್ಲಿ ಕಣ್ಣಿನ ದೋಷವುಳ್ಳವರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಡಾ.ಎಂ.ಎನ್. ಶ್ರೀಪತಿ ಮಾತನಾಡಿ, ವಯಸ್ಸಾಗುತ್ತಾ ಸಹಜವಾಗಿ ಕಣ್ಣಿನ ಕ್ಷಮತೆ ಕ್ಷೀಣಿಸುವುದರಿಂದ ಎಲ್ಲರೂ ನೇತ್ರ ತಪಾಸಣೆಗೆ ಒಳಗಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆಯೆಂದು ಹೇಳಿದರು.
ಕಣ್ಣು ಅತ್ಯಂತ ಸೂಕ್ಷ್ಮ ಅಂಗವಾಗಿದೆ. ಅದರ ಪೋಷಣೆಯ ಮಹತ್ವ ತಿಳಿದು ಆರೈಕೆ ಮಾಡದಿದ್ದಲ್ಲಿ ಅಂಧತ್ವಕ್ಕೆ ಗುರಿಯಾಗಬೇಕಾಗುತ್ತದೆಯೆಂದು ಹೇಳಿದರು. ಈ ಕಾರಣಕ್ಕೆ ಕಣ್ಣಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದಕ್ಕೆ ಇಂತಹ ಶಿಬಿರಗಳು ಪ್ರಯೋಜನಕಾರಿಯಾಗಿವೆ ಎಂದು ಹೇಳಿದರು.
ವೈ.ಎಸ್. ಅಶ್ವತ್ಥ್ ಕುಮಾರ್, ಎಂ.ಎಸ್. ರಾಘವೇಂದ್ರ, ಪರಮೇಶ್ವರ್ ಭಟ್, ಗಜೇಂದ್ರಶರ್ಮ, ಸತೀಶ್ ಬಾಬು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.