ದಾಳಿಂಬೆ ಬೆಳೆದು ಆರ್ಥಿಕವಾಗಿ ಸದೃಢರಾಗಿ
ಕ.ಪ್ರ.ವಾರ್ತೆ ಹೊಳಲ್ಕೆರೆ ಮಾ.9
ದಾಳಿಂಬೆ ಬೆಳೆ ಬೆಳೆಯುವುದರಿಂದ ರೈತರು ಆರ್ಥಿಕವಾಗಿ ಸದೃಢರಾಗಬಹುದು ಎಂದು ಜಿಲ್ಲಾ ದಾಳಿಂಬೆ ಕೃಷಿ ತಜ್ಞ ಪಾಂಡು ಹೇಳಿದರು.
ತಾಲೂಕಿನ ಶಿವಗಂಗಾ ಗ್ರಾಮದ ಎಸ್.ಆರ್. ಗಿರೀಶ್ ಇವರ ದಾಳಿಂಬೆ ತೋಟದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಮ್ಮಿಕೊಳ್ಳಲಾಗಿದ್ದ ರೈತ ಕ್ಷೇತ್ರ ಪಾಠಶಾಲೆಯಲ್ಲಿ ತರಬೇತಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ದಾಳಿಂಬೆ ಕೃಷಿಗೆ ಆಧಿಕ ಖರ್ಚು ಎಂಬ ಮನೋಬಾವನೆ ರೈತರಲ್ಲಿ ಇದೆ. ಇದರಿಂದ ಹೊರಬರುವ ಮೂಲಕ ದಾಳಿಂಬೆ ಕೃಷಿಗೆ ಮಂದಾಗಬೇಕೆಂದರು. ದಾಳಿಂಬೆಯಲ್ಲಿ 23 ಷೋಷಕಕಾಂಶಗಳಿದ್ದು ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಇದರಿಂದ ರೈತರಿಗೆ ಉತ್ತಮ ಲಾಭ ದೊರೆಯಲಿದೆ ಎಂದರು.
ರಾಜ್ಯ ಸಹಕಾರಿ ಮಾರಾಟ ಮಂಡಳಿ ನಿರ್ದೇಶಕ ಎಸ್.ಆರ್. ಗಿರೀಶ್ ಮಾತನಾಡಿ, ಮಣ್ಣಿನ ಗುಣಮಟ್ಟ, ನಿಗಧಿತ ಸಮಯಕ್ಕೆ ಔಷಧಿ ಸಿಂಪಡಣೆ ಕಾಯ್ದುಕೊಂಡಲ್ಲಿ ದಾಳಿಂಬೆ ಉತ್ತಮ ಇಳುವರಿ ಜೊತೆಗೆ ಲಾಭ ಸಹ ದೊರೆಯಲಿದೆ ಎಂದು ರೈತರಿಗೆ ಸಲಹೆ ನೀಡಿದರು.
ಮಾಜಿ ಶಾಸಕ ಪಿ. ರಮೇಶ್, ಯೋಜನಾಧಿಕಾರಿ ಎಸ್. ಜನಾರ್ಧನ್, ಮೇಲ್ವಿಚಾರಕ ಕೆಂಚಪ್ಪ, ಮಹಾಂತೇಶ್, ಉಷಾ, ಅನ್ನಪೂರ್ಣ ಮತ್ತಿತರರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.