ವಾರ್ಷಿಕ ಅನುದಾನ ಹೆಚ್ಚಿಸಲು ಆಗ್ರಹ
ಧರ್ಮಪುರ: ಪ್ರಾಥಮಿಕ ಶಾಲೆಯ ಪರಿಕರಗಳ ಖರೀದಿಗೆ ಹಾಗೂ ವಿವಿಧ ರೀತಿಯ ಸಮಾರಂಭಗಳಿಗೆ ವ್ಯಯ ಮಾಡಲು ಸರ್ಕಾರ ನೀಡುತ್ತಿರುವ ವಾರ್ಷಿಕ ಅನುದಾನವನ್ನು ಹೆಚ್ಚಿಸಬೇಕೆಂದು ಹೋಬಳಿಯ ಎಲ್ಲಾ ಕಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರು ಇಲಾಖೆಗೆ ಆಗ್ರಹಿಸಿದ್ದಾರೆ.
ಸರ್ಕಾರ 2007-08ರಲ್ಲಿ ರು.5 ಸಾವಿರ ನಿಗದಿಗೊಳಿಸಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ಶಾಲೆಗೆ ಬೇಕಾಗುವ ವಿವಿಧ ರೀತಿಯ ಪರಿಕರಗಳ ದರಗಳು ದ್ವಿಗುಣಗೊಂಡಿವೆ. ಉದಾಹರಣೆಗೆ ಹಿಂದೆ ಸೀಮೆಸುಣ್ಣದ ಬೆಲೆ ರು.10 ಇದ್ದದ್ದು ಈಗ ರು.30 ಆಗಿದೆ. ಮಾರ್ಕರ್ ಬೆಲೆ ರು.5 ಇದ್ದದ್ದು ರು.10 ಆಗಿದೆ. ಹಾಜರಾತಿ ಪುಸ್ತಕದ ಬೆಲೆ ರು.15 ಇದ್ದದ್ದು ರು.30 ಆಗಿದೆ. ದಿನಪತ್ರಿಕೆ ರು.2 ಇದ್ದದ್ದು ರು.4 ಆಗಿದೆ. ಫ್ಲೆಕ್ಸ್ ಮಾಡಿಸಲು ರು.150 ಇದ್ದದ್ದು 300 ಆಗಿದೆ. ಕಸಪರಕೆ ರು.5 ಇದ್ದದ್ದು 20 ಆಗಿದೆ. ಶಾಲೆಯ ಮೊಹರು ಮತ್ತು ಪ್ಯಾಡ್ ರು.45 ಇದ್ದದ್ದು ರು.100 ಆಗಿದೆ. ಸಮಾರಂಭಗಳ ಪೋಟೋ ದರ 10 ಇದ್ದದ್ದು 20 ಆಗಿದೆ. ಈ ಬಗ್ಗೆ ಗಮನ ನೀಡಬೇಕು ಎಂದು ಆಗ್ರಹಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.