ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿತ್ರದುರ್ಗ

'ಸಂಸ್ಕಾರ ಬೆಳೆಯಲು ನಾಟಕ ಉತ್ತಮ ಮಾಧ್ಯಮ'

Parashurama
Updated On : 10 Mar 2013, 11:49 am

ಕ.ಪ್ರ.ವಾರ್ತೆ ಹೊಸದುರ್ಗ  ಮಾ.9
ಸಮಾಜದಲ್ಲಿ ಒಳ್ಳೆಯ ಸಂಸ್ಕಾರ ಬೆಳೆಸಲು ನಾಟಕ ಒಂದು ಉತ್ತಮ ಮಾಧ್ಯಮವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ನಾಗರಾಜ ಗುಪ್ತ ತಿಳಿಸಿದರು.  
ಅವರು ಪಟ್ಟಣದ ಅಶೋಕ ರಂಗ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಎಸ್. ನಿಜಲಿಂಗಪ್ಪ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ನಡೆದ ದತ್ತಿ ಉಪನ್ಯಾಸ ಹಾಗೂ ಶಿವಸಂಚಾರ ನಾಟಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.  
ಶಿವಸಂಚಾರದ ನಾಟಕಗಳು ಜನಸಾಮಾನ್ಯರ ಮೇಲೆ ಪ್ರಭಾವ ಬೀರುವ ಒಳ್ಳೆಯ ಮಾಧ್ಯಮವಾಗಿದೆ ಎಂದರು.  ದತ್ತಿ ಉಪನ್ಯಾಸದಲ್ಲಿ ಲಿಂಗೈಕ್ಯ ಶಿವಕುಮಾರ ಸ್ವಾಮಿಗಳ ಕುರಿತು ಮಾತನಾಡಿದ ನಿವೃತ್ತ ಶಿಕ್ಷಕ ಮಹೇಂದ್ರಪ್ಪ,  ಒಳ್ಳೆಯ ಸಮಾಜ ಮತ್ತು ವ್ಯಕ್ತಿಯನ್ನು ರೂಪಿಸುವ ನಿಟ್ಟಿನಲ್ಲಿ ಸ್ವಾಮೀಜಿಗಳ ಮಾರ್ಗದರ್ಶನ ಅಗಾಧವಾಗಿದೆ. ಸಂಸ್ಕೃತಿ, ಸಾಹಿತ್ಯ ಪರಂಪರೆ ಉಳಿವಿಗೆ ಹೆಚ್ಚಿನ ಸಹಕಾರ ನೀಡುತ್ತಿದ್ದ ದಾರ್ಶನಿಕರು ಎಂದು ಬಣ್ಣಿಸಿದರು.  
ಹೆಸರು ಮಾಡಿದ ನಾಟಕೋತ್ಸವ: ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಬಿ. ತಿಪ್ಪೇಸ್ವಾಮಿ ಮಾತನಾಡಿದರು.
 ನಾಡಿನಲ್ಲಿ ಶಿವಸಂಚಾರ ಕಲಾ ತಂಡದ ನಾಟಕಗಳು ಹೆಚ್ಚು ಪ್ರಭಾವಿತವಾಗಿದೆ. ಹಲವು ದಶಕಗಳಿಂದ ಸಾಣೇಹಳ್ಳಿ ಶ್ರೀಗಳ ಮಾರ್ಗದರ್ಶನದಲ್ಲಿ ನಡೆದು ಬರುತ್ತಿರುವ ನಾಟಕೋತ್ಸವಗಳು ಜಗತ್ತಿನಲ್ಲಿ ಹೆಸರು ಮಾಡಿವೆ ಎಂದರು.
ಸಮಾರಂಭದಲ್ಲಿ ನಿಜಲಿಂಗಪ್ಪ ಸಂಸ್ಥೆ ಅಧ್ಯಕ್ಷ ಶಿವಲಿಂಗಪ್ಪ, ರಂಗ ಕಲಾವಿದ ವೆಂಕಟೇಶಮೂರ್ತಿ, ಚುಟುಕು  ಸಾಹಿತ್ಯ ಜಿಲ್ಲಾ ಅಧ್ಯಕ್ಷ ಮೈಲಾರಪ್ಪ, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನಾರಾಧ್ಯ, ಕಸಾಪ ಮಾಜಿ ಅಧ್ಯಕ್ಷ ಪಿ.ಎಲ್. ಲೋಕೇಶ್ವರ್, ಸಮಾಜ ಸೇವಕ ಕಲ್ಮಠ್, ಸಾಹಿತಿ ನವೀನ್ ಕುಮಾರ್, ತಾಲೂಕು  ಚುಟುಕು ಪರಿಷತ್ತಿನ ಉದಯಕುಮಾರ್ ಮತ್ತಿತರರು ಹಾಜರಿದ್ದರು.
ಶಿವಸಂಚಾರ ಕಲಾ ತಂಡದವರು ಕೆ.ವಿ. ಸುಬ್ಬಣ್ಣ ರೂಪಾಂತರದ, ನಾಗರಾಜ್ ಸಂಗೀತದ , ಇಕ್ಬಾಲ್ ನಿರ್ದೇಶನದ ಸೂಳೆ ಸನ್ಯಾಸಿ ನಾಟಕ ಪ್ರದರ್ಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments