12 ವಾರ್ಡ್ ಠೇವಣಿ ಕಳೆದುಕೊಂಡ ಬಿಜೆಪಿ
ಚನ್ನಗಿರಿ: ಕೆಲವೇ ದಿನಗಳ ಹಿಂದೆ ಪಪಂನಲ್ಲಿ ಅಧಿಕಾರ ನಡೆಸಿದ ಬಿಜೆಪಿ ಪಪಂ ಚುನಾವಣೆಯಲ್ಲಿ 12 ವಾರ್ಡ್ಗಳಲ್ಲಿ ಸ್ಪರ್ಧಿಸಿದ್ದು ಎಲ್ಲಿಯೂ ಖಾತೆ ತೆರೆಯದೆ ಆ ಪಕ್ಷದ ಅಭ್ಯರ್ಥಿಗಳೆಲ್ಲರು ಕೇವಲ 2 ಅಂಕೆಗಳ ಮತಗಳನ್ನು ಪಡೆದು ಎಲ್ಲರೂ ಠೇವಣಿ ಕಳೆದುಕೊಂಡಿದ್ದಾರೆ. ಪ್ರಥಮ ಬಾರಿಗೆ ಸ್ಪರ್ಧಿಸಿದ್ದ ಬಿಎಸ್ಆರ್ ಬಿಜೆಪಿ ಪಕ್ಷಕ್ಕಿಂತ ಭಿನ್ನತೆ ಇಲ್ಲದೆ ಆ ಪಕ್ಷದಿಂದ ಸ್ಪರ್ಧಿಸಿದ್ದ 8 ಜನರೂ ಠೇವಣಿ ಕಳೆದುಕೊಂಡವರು.
2008ರಲ್ಲಿ ನಡೆದ ಪಪಂ ಚುನಾವಣೆಯಲ್ಲಿ ಜೆಡಿಎಸ್ 12 ಸ್ಥಾನಗಳನ್ನು ಪಡೆದುಕೊಂಡು ಕೆಲ ತಿಂಗಳು ಮಾತ್ರ ಅಧಿಕಾರ ನಡೆಸಿತ್ತು. ಬದಲಾದ ರಾಜಕಾರಣದಿಂದ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಕೆಜೆಪಿ ಪಕ್ಷ 3 ವಾರ್ಡ್ಗಳಲ್ಲಿ ತನ್ನ ವಿಜಯ ಪತಾಕೆ ಹಾರಿಸಿದ್ದು ಕೆಲವು ಕಡೆ ಪ್ರಬಲ ಸ್ಪರ್ಧೆಯನ್ನು ಒಡ್ಡಿದರೆ ಇನ್ನು ಕೆಲವು ಕಡೆ ಠೇವಣಿ ಕಳೆದುಕೊಂಡಿದೆ.
ಪಪಂ ಚುನಾವಣೆ ವಿಶೇಷತೆಗಳೆಂದರೆ ಕೇವಲ ಒಂದೆರಡು, ಮೂರ್ನಾಲ್ಕು ಮತಗಳಿಂದ, ಕೆಲ ವಾರ್ಡ್ನಲ್ಲಿ 1 ಮತದಿಂದ ಪರಾಭವಗೊಂಡವರಿದ್ದಾರೆ.
4ನೇ ವಾರ್ಡ್ನಲ್ಲಿ ಜೆಡಿಎಸ್ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿ ಪಡೆದ ಮತಗಳಿಗಿಂತ 4 ಮತಗಳಿಂದ ಜೆಡಿಎಸ್ ಅಭ್ಯರ್ಥಿ ಜಯಗಳಿಸಿದ್ದಾರೆ.
6ನೇ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಡೆದ ಮತಗಳಿಗಿಂತ 6 ಮತಗಳನ್ನು ಹೆಚ್ಚಿಗೆ ಪಡೆದು ಕೆಜೆಪಿ ಅಭ್ಯರ್ಥಿ ವಿಜಯ ಸಾಧಿಸಿದ್ದಾರೆ.
11ನೇ ವಾರ್ಡ್ನಲ್ಲಿ ಜೆಡಿಎಸ್ ಅಭ್ಯರ್ಥಿ ಪಡೆದ ಮತಗಳಿಗಿಂತ 1 ಮತ ಹೆಚ್ಚಿಗೆ ಪಡೆದ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಿದ್ದಾರೆ.
1ನೇ ವಾರ್ಡ್ನ ಕಾಂಗ್ರೇಸ್ ಅಭ್ಯರ್ಥಿ ಎಂ. ಯೋಗೀಶ್ ಪಟ್ಟಣದ 19 ವಾರ್ಡ್ಗಳಲ್ಲಿಯೇ 321 ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರೆ, 19ನೇ ವಾರ್ಡ್ನ ಕೆಜೆಪಿ ಅಭ್ಯರ್ಥಿ ಸುನಿತಾ ಗಣೇಶ್ ಪಟ್ಟಣದಲ್ಲಿ ಅತಿ ಹೆಚ್ಚಿನ 465 ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ.
ಪಟ್ಟಣ ಪಂಚಾಯಿತಿ ಚುನಾವಣೆ ಬಗ್ಗೆ ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಮಹಿಮಾ ಜೆ. ಪಟೇಲ್ ಪ್ರತಿಕ್ರಿಯೆ ನೀಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.