ಕಾಂಗ್ರೆಸ್ಗೆ ಸ್ಪಷ್ಟ ಬಹುಮತ
ಕ.ಪ್ರ.ವಾರ್ತೆ, ಹೊಸದುರ್ಗ, ಮಾ.11
ಹೊಸದುರ್ಗ ಪುರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ 12 ಸ್ಥಾನ ಗಳಿಸುವ ಮೂಲಕ ಸ್ಪಷ್ಟ ಬಹುಮತ ಗಳಿಸಿದ್ದು, ಶಾಸಕ ಗೂಳಿಹಟ್ಟಿ ಬಣದ ಅಭ್ಯರ್ಥಿಗಳು 6 ಸ್ಥಾನ ಗಳಿಸಿದ್ದಾರೆ. ಪುರಸಭೆಯ 23 ವಾರ್ಡುಗಳಲ್ಲಿ 12 ಸ್ಥಾನ ಕಾಂಗ್ರೆಸ್, 6 ಸ್ಥಾನ ಗೂಳಿಹಟ್ಟಿ ಬೆಂಬಲಿತ ಪಕ್ಷೇತರರು, 3 ಬಂಡಾಯ ಪಕ್ಷೇತರರು, 1 ಬಿಎಸ್ಆರ್ ಕಾಂಗ್ರೆಸ್, 1 ಕೆಜೆಪಿ ಸ್ಥಾನ ಗಳಿಸಿದೆ. ಆಡಳಿತ ಪಕ್ಷ ಬಿಜೆಪಿ, ಜೆಡಿಎಸ್ ಯಾವುದೆ ಸ್ಥಾನಗಳಿಸಿಲ್ಲ.
ಈ ಬಾರಿ ಪುರಸಭಾ ಚುನಾವಣೆಯಲ್ಲಿ ಗೆದ್ದ ಪ್ರಮುಖರೆಂದರೆ ಈ ಹಿಂದೆ ಅಧ್ಯಕ್ಷರಾಗಿದ್ದ ಗೋ.ತಿಪ್ಪೇಶ್ ನಾಲ್ಕನೇ ಬಾರಿಗೆ ಕಾಂಗ್ರೆಸ್ನಿಂದ ಪುನರಾಯ್ಕೆಯಾಗಿ ದಾಖಲೆ ಸ್ಥಾಪಿಸಿದ್ದಾರೆ. ಇದೇ ತೆರನಾಗಿ ಅಧ್ಯಕ್ಷರಾಗಿದ್ದ ಡಿ.ವಿ. ಅಂಜನ್ ಕುಮಾರ್ ಗೂಳಿ ಬಣದ ಪಕ್ಷೇತರರಾಗಿ ಪುನರಾಯ್ಕೆಯಾಗಿದ್ದಾರೆ. 14ನೇ ವಾರ್ಡ್ನ ವಜೀರ್, 16ನೇ ವಾರ್ಡ್ನ ಯಶೋಧಮ್ಮ ಕಾಂಗ್ರೆಸ್ನಿಂದ ಪುನರಾಯ್ಕೆಯಾಗಿದ್ದಾರೆ. ಸೋತ ಪ್ರಮುಖರಲ್ಲಿ ಹಾಲಿ ಪುರಸಭಾ ಅಧ್ಯಕ್ಷರಾಗಿದ್ದ ಜಬೀವುಲ್ಲಾ ಕೆಜೆಪಿಯಿಂದ ಸ್ಪರ್ಧಿಸಿ ಸೋತರೆ, ಉಪಾಧ್ಯಕ್ಷೆಯಾಗಿದ್ದ ವಿಜಯ ಶಿವಲಿಂಗಪ್ಪ 1ನೇ ವಾರ್ಡ್ನಿಂದ ಸೋಲು ಅನುಭವಿಸಿದ್ದಾರೆ. ತಾ.ಕೆಜೆಪಿ ಅಧ್ಯಕ್ಷ ಎ.ಎಚ್. ಮಂಜುನಾಥ್, ಶೀತಲ್ ಕುಮಾರ್, ರಂಗನಾಥ್, ಕಾಂಚನ್ ಕುಮಾರ್, ಅಲೀಂ, ಕೆಂಚಪ್ಪ, ಖುತೇಜಾಬಿ ಸೋಲು ಅನುಭವಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.