ಗ್ರಾಮದಲ್ಲಿ ಮಟ್ಟದಲ್ಲಿ ಕಂಪ್ಯೂಟರ್ ಶಿಕ್ಷಣ ಅವಶ್ಯಕ
ಕ.ಪ್ರ.ವಾರ್ತೆ, ಚಳ್ಳಕೆರೆ, ಮಾ.11
ಇಂದು ಎಲ್ಲಾ ರಂಗದಲ್ಲಿ ತಂತ್ರಜ್ಞಾನ ಬಳಕೆಯ ಅವಶ್ಯತೆಯಿಂದಾಗಿ ಪ್ರಸುತ್ತ ಕಂಪ್ಯೂಟರ್ ತರಬೇತಿಯ ಅವಶ್ಯಕತೆ ಹೆಚ್ಚಿದೆ ಎಂದು ಚೈಲ್ಡ್ ಟ್ರಸ್ಟ್ ಯೋಜನ ಸಹಾಯಕ ಅಧಿಕಾರಿ ಎಸ್. ಸತ್ಯನಾರಾಯಣ ಹೇಳಿದರು.
ಅವರು ತಾಲೂಕಿನ ನಾಯಕನಹಟ್ಟಿಯಲ್ಲಿ ಸೋಮವಾರ ಭಗೀರಥ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಚಿತ ತರಬೇತಿ: ಗ್ರಾಮೀಣ ಮಟ್ಟದಲ್ಲಿ ಕಂಪ್ಯೂಟರ್ ಜ್ಞಾನದ ಬಗ್ಗೆ ಅರಿವು ಇಲ್ಲದ ಸಾರ್ವಜನಿಕರಿಗೆ ಅರಿವು ಬಹು ಮುಖ್ಯವಾಗಿ ಬೇಕು ಆದರಿಂದ ಗ್ರಾಮೀಣ ಭಾಗದಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ಎಲ್ಲರೂ ಕಲಿಯುವ ಉದೇಶದಿಂದ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಉಚಿತವಾಗಿ ತರಬೇತಿ ನೀಡುವ ಮೂಲಕ ಎಲ್ಲರಲ್ಲಿ ಕಂಪ್ಯೂಟರ್ ಜ್ಞಾನ ಇರಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು.
ಸೃಜನ ಸೇವಾ ಸಂಸ್ಧೆಯ ಸದಸ್ಯ ಈ. ಬಾಲರಾಜು ಮಾತನಾಡಿ, ಇಂದಿನ ಮಕ್ಕಳು ಹಾಗೂ ವೃದ್ಧರಲ್ಲಿಯೂ ಕಂಪ್ಯೂಟರ್ ಶಿಕ್ಷಣದ ಅಗತ್ಯತೆ ಇದೆ. ಇಂತಹ ಕಾರ್ಯಗಳನ್ನು ಮಾಡುವ ಸಂಸ್ಧೆಗಳಿಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳ ಸಹಕಾರ ಅವಶ್ಯಕತೆ ಇದೆ ಎಂದು ತಿಳಿಸಿದರು.
ಸೃಜನ ಸೇವಾ ಸಂಸ್ಧೆಯ ಕಾರ್ಯದರ್ಶಿ ಈ. ತಮ್ಮಣ್ಣ ಮಾತನಾಡಿದರು, ಭಗೀರಥ ಕಂಪ್ಯೂಟರ್ ತರಬೇತಿಯ ಸಂಯೋಜಕ ಮಾಹಂತೇಶ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.