ಹಿರಿಯೂರು: ಪಕ್ಷೇತರರ ದರ್ಬಾರ್
ಕ.ಪ್ರ ವಾರ್ತೆ, ಹಿರಿಯೂರು, ಮಾ.11
ಪಟ್ಟಣದ ಪುರಸಭೆಗೆ ನಡೆದಿದ್ದ ಚುನಾವಣಾ ಫಲಿತಾಂಶ ಸೋಮವಾರ ಹೊರಬಿದ್ದಿದ್ದು ಯಾವ ಪಕ್ಷಕ್ಕೂ ಬಹುಮತವಿಲ್ಲದ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ.
ಹಿರಿಯೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ 11 ಸ್ಥಾನಗಳಲ್ಲಿ ಗೆಲುವು ಪಡೆದಿರುವ ಪಕ್ಷೇತರ ಸದಸ್ಯರುಗಳು ಪುರಸಭೆ ಪ್ರವೇಶಿಸಿ ಪಾರಮ್ಯ ಮೆರೆದಿದ್ದಾರೆ.
ಮಾ.7ರಂದು ಪಟ್ಟಣದ ಒಟ್ಟು 27 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 8, ಜೆಡಿಎಸ್ 5, ಬಿಎಸ್ಆರ್ ಕಾಂಗ್ರೆಸ್ 3 ಸ್ಥಾನಗಳಲ್ಲಿ ಜಯಗಳಿಸಿದೆ. ಬಿಜೆಪಿ ಒಂದೂ ಸ್ಥಾನ ಪಡೆಯಲಾಗದೆ ದಯನೀಯ ಸೋಲು ಅನುಭವಿಸಿದೆ.
ಹಿಂದಿನ ಪುರಸಭೆಯಲ್ಲಿ ಕಾಂಗ್ರೇಸ್ 13, ಜೆಡಿಎಸ್ 11, ಪಕ್ಷೇತರರು 3 ಸ್ಥಾನ ಅಲಂಕರಿಸಿದ್ದರು.
ಸುಧಾಕರ್ ಬೆಂಬಲಿಗರು: ಕಾಂಗ್ರೆಸ್ ಟಿಕೆಟ್ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಶಾಸಕ ಸುಧಾಕರ್ ಒಟ್ಟು 13 ವಾರ್ಡ್ಗಳಲ್ಲಿ ತಮ್ಮ ಬೆಂಬಲಿಗರನ್ನು ಪಕ್ಷೇತರರನ್ನಾಗಿ ಕಣಕ್ಕಿಳಿಸುವ ಮೂಲಕ ಎಲ್ಲ ಪಕ್ಷಗಳಿಗೂ ಸೆಡ್ಡು ಹೊಡೆದಿದ್ದರು. ಇವರಲ್ಲಿ 11 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಅಲ್ಲದೆ ಕಾಂಗ್ರೆಸ್ನಿಂದ ಜಯಗಳಿಸಿರುವ 8 ಸದಸ್ಯರಲ್ಲಿ 6 ಮಂದಿ ಕೂಡ ಸುಧಾಕರ್ ಬೆಂಬಲಿತ ಅಭ್ಯರ್ಥಿಗಳೆಂದೇ ಹೇಳಲಾಗುತ್ತಿದೆ. ಇವರಲ್ಲಿ ಕೆಲವರು ಫಲಿತಾಂಶ ಬಂದ ಕೆಲವೇ ಕ್ಷಣಗಳಲ್ಲಿ ಶಾಸಕರನ್ನು ಭೇಟಿಮಾಡಿ ಬಿರುಸಿನ ಚಟುವಟಿಕೆ ನಡೆಸುತ್ತಿರುವುದು ಕೂಡ ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.