ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿತ್ರದುರ್ಗ

ಮೂಲ ಸೌಕರ್ಯ ನೀಡಲು ವಿಶೇಷ ಯೋಜನೆ

Parashurama
Updated On : 17 Mar 2013, 10:53 am

ಕ.ಪ್ರ.ವಾರ್ತೆ, ಚಳ್ಳಕೆರೆ, ಮಾ. 16
ಪುರಸಭೆ ವಿಶೇಷ ಸಭೆಯನ್ನು ಉಪ ವಿಭಾಗಾಧಿಕಾರಿ ಎನ್.ಎಂ. ನಾಗರಾಜ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. ಸಭೆಯಲ್ಲಿ ನೂತನ ಸದಸ್ಯರನ್ನು ಸ್ವಾಗತಿಸಲಾಯಿತು.
  ಪುರಸಭೆಯ ಮಳಿಗೆಗಳಿಂದ ಒಂದೂವರೆ ಕೋಟಿ ಆದಾಯವಿದೆ. ಸರ್ಕಾರದ ವತಿಯಿಂದ ವಿವಿಧ ಯೋಜನೆಗಳಿಗಾಗಿ ಹಣ ಬರಲಿದ್ದು, ಅದನ್ನೂ ಸಹ ಸದಸ್ಯರ ಒಪ್ಪಿಗೆ ಮೇರೆಗೆ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಲಾಗುವುದು. ಪಟ್ಟಣದ ನಾಗರಿಕರಿಗೆ ಮೂಲ ಸೌಲಭ್ಯ ನೀಡುವ ಸಲುವಾಗಿ ಯೋಜನೆ  ರೂಪಿಸಸಲಾಗುವುದು ಎಂದು ನಾಗರಾಜ್ ತಿಳಿಸಿದರು.
ಆದ್ಯತೆ ಮೇಲೆ ಕಾರ್ಯ: ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ, ಉದ್ಯಾನವನ ಅಭಿವೃದ್ಧಿ, ಶೌಲಯ ನಿರ್ಮಾಣ, ಪ.ಜಾತಿ ಹಾಗೂ ಇನ್ನಿತರ ಹಿಂದುಳಿದ ವರ್ಗಗಳ ಅಂಗವಿಕಲರ ಕಲ್ಯಾಣಕ್ಕಾಗಿ ಹಣವಿನಿಯೋಗ ಮತ್ತು ಪ್ರಕೃತಿ ವಿಕೋಪದಲ್ಲಿ ಸಿಲುಕಿದವರಿಗೆ ಆರ್ಥಿಕ ನೆರವನ್ನು ನೀಡಲಾಗುವುದು. ಪುರಸಭೆಯ ನೂತನ ಸದಸ್ಯರಾದ ಜಿ.ಟಿ. ಗೋವಿಂದರಾಜು, ರಾಮು, ದಳವಾಯಿ ಮೂರ್ತಿ, ಎಸ್.ಟಿ. ವಿಜಯ್, ಶ್ರೀನಿವಾಸ, ಲಕ್ಷ್ಮಿದೇವಿ, ನಾಗರಾಜ, ಮಂಜುನಾಥ, ಜಿ.ಕೆ. ರವಿ, ಸಲೀಂ, ವಿಜಯ ಕುಮಾರ್, ಪ್ರಮೋದ್ ಮೊದಲಾದವರು ಇದ್ದರು.  
   ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ. ಕರಿಯಪ್ಪ, ಡಾ.ಕೆ.ಎಂ. ವಿಜಯಕುಮಾರ್, ಮಾಜಿ ಸದಸ್ಯ ಎಸ್.ಎಚ್. ಸೈಯದ್, ಮಾಜಿ ಅಧ್ಯಕ್ಷ ಸುಧಾಕರ ಮೊಲಾದವರು  ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments