25 ಮುಖಂಡರು ಬಿಜೆಪಿಗೆ ರಾಜಿನಾಮೆ
ಕನ್ನಡಪ್ರಭ ವಾರ್ತೆ, ಜೇವರ್ಗಿ, ಏ.1
ಕಳೆದ 9 ತಿಂಗಳ ಬೇಗುದಿಯನ್ನು ತಣ್ಣಗಾಗಿಸಿಕೊಂಡ ಅತೃಪ್ತ 25 ಬಿಜೆಪಿ ನಾಯಕರು ಕೊನೆಗೂ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.
ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಬಿ.ಜಿ. ಪಾಟೀಲ್, ತಾಲೂಕು ಉಪಾಧ್ಯಕ್ಷ ಸಂಗಣ್ಣಗೌಡ ಪಾಟೀಲ್, ಬಸವರಾಜ ತಾಳಿಕೋಟಿ, ಪ್ರಧಾನ ಕಾರ್ಯದರ್ಶಿ ಸಿದ್ದಣ್ಣ ಹಾಲಗಡ್ಲಾ, ಈಶಣ್ಣಗೌಡ ಪಾಟೀಲ್, ಬಿರಾಳ ಗ್ರಾಪಂ ಅಧ್ಯಕ್ಷ ಮಲ್ಲಾರೆಡ್ಡಿ ಪಾಟೀಲ್, ಪಪಂ ಮಾಜಿ ಸದಸ್ಯ ಜಾಹೀದ್ ಸೇಠ ಚರಮ್, ಸಿದ್ದಣ್ಣಗೌಡ ಪಾಟೀಲ್, ಬಸಣ್ಣಗೌಡ ಆಂದೋಲಾ, ಗೊಲ್ಲಾಳಪ್ಪ ಸುಂಟ್ಯಾಣ, ಸೋಮು ಬಂಡಿ, ಬಿ.ಎಚ್. ಕಲಶೆಟ್ಟಿ, ಅಮೃತಗೌಡ ಪಾಟೀಲ್ ಗುಡೂರ, ಶಂಕರಗೌಡ ಪಾಟೀಲ್, ಅಪ್ಪುಗೌಡ ಪಾಟೀಲ್, ದೇವೆಗೌಡ ಕರಕಿಹಳ್ಳಿ, ಹಾಬು ನಾಯಕ, ಮಡಿವಾಳಪ್ಪ ಯಾಳಗಿ, ಸಿದ್ದಣ್ಣ ಸುಂಟ್ಯಾಣ, ನಗರ ಪ್ರಧಾನ ಕಾರ್ಯದರ್ಶಿ ಶಿವುಕುಮಾರ ಬಿದರಿ, ಅಪ್ಪಣಗೌಡ ಗುಡೂರ, ಗುಂಡೇರಾವ ಬೈರಾಮಡಗಿ, ನೀಲಕಂಠೆಪ್ಪಗೌಡ ಪಾಟೀಲ್, ಅಮೃತಗೌಡ ಪಾಟೀಲ್, ಗುರುನಾಥ ಸಂಕಾ, ಅವ್ವಣ್ಣಗೌಡ ಪಾಟೀಲ್ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ್ ಅವರಿಗೆ ರಾಜಿನಾಮೆ ಸಲ್ಲಿಸಿದ್ದಾರೆ.