ಇಂದು ಪಂಚಕಂತಿಮಠ ಪುಣ್ಯ ಸ್ಮರಣೋತ್ಸವ
ಯಾದಗಿರಿ: ಲಿಂ. ವೇದಮೂರ್ತಿ ಸೊಲಬಯ್ಯ ಸ್ವಾಮಿ ಪಂಚಕಂತಿಮಠ ಸೈದಾಪುರ ಅವರ 5ನೇ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಏ.3ರಂದು ಬೆಳಗ್ಗೆ 7 ಗಂಟೆಗೆ ತಾಲೂಕಿನ ಲಿಂಗೇರಿ ಗ್ರಾಮದ ಭೀಮಾನದಿ ದಂಡೆಯಲ್ಲಿರುವ ಅವರ ಕರ್ತೃ ಗದ್ದುಗೆ ಸ್ಥಳದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ತೃ ಗದ್ದುಗೆಗೆ ಮಹೇಶ ಪಂಚಕಂತಿಮಠ ಅವರಿಂದ ಮಹಾರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಪೂಜೆ ನಡೆಯುವುದು. ಕಾರ್ಯಕ್ರಮಕ್ಕೆ ತಾಲೂಕಿನ ವಿವಿಧ ಮಠಾಧೀಶರು, ರಾಜಕೀಯ ಮುಖಂಡರು ಹಾಗೂ ಸಹಸ್ರಾರು ಭಕ್ತರು ಪಾಲ್ಗೊಳ್ಳುವರು ಎಂದು ಡಾ. ಅಂಬರೀಶ್ ಗೌಡರ್ ಸೈದಾಪುರ ತಿಳಿಸಿದ್ದಾರೆ.
ಲಾರಿ ಡಿಕ್ಕಿ: ಬೈಕ್ ಸವಾರ ಸಾವು
ರಾಯಚೂರು: ಸಿಂಧನೂರು ತಾಲೂಕಿನ ರಂಗಾಪುರ ಕ್ಯಾಂಪಿನ ಬಳಿ ಬೈಕ್ಗೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದಾನೆ. ಅಮರೇಶ್ ಮೃತನು. ಈತ ಬೈಕ್ ಮೇಲೆ ತೆರಳುತ್ತಿದ್ದಾಗ ವೇಗವಾಗಿ ಬಂದ ಲಾರಿಯು ಡಿಕ್ಕಿ ಹೊಡೆದಿದ್ದರಿಂದ ಈತ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.