ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜೆಸ್ಕಾಂ (ಅವ) ಕೃಪೆ: ನಗರದ ಜನತೆಗೆ ಬಿಸಿಲ ಝಳ ದ್ವಿಗುಣ ಶಾಕ್

Lingaraj Badiger
Updated On : 4 Apr 2013, 11:11 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.3
ಮೊದಲೇ ಉರಿ ಬಿಸಿಲು, ಮೇಲೆ ಕರೆಂಟ್ ಬೇರೆ ಇಲ್ಲ. ಅಂದ್ರೆ ಬೇಸಿಗೆ ಧಗೆ- ಬೇಗೆ ದ್ದಿಗುಣಗೊಳ್ಳದೆ ಇನ್ನೇನಾಗುತ್ತದೆ ಹೇಳಿ?
ಅದ್ಯಾಕೋ ಏನೇ ಗುಲ್ಬರ್ಗ ಮಂದಿ ಪಾಲಿಗೆ ಈ ಬೇಸಿಗೆ ಇನ್ನೂ ಬಿಸಿಯಾಗುತ್ತಲೇ ಸಾಗಿದೆ. ನಿತ್ಯ ಬೇಕಾಬಿಟ್ಟಿ ಲೋಡ್ ಶೆಟ್ಟಿಂಗ್‌ನಿಂದಾಗಿ ಈಗಾಗಲೇ ಕಳೆದ ಒಂದೂವರೆ ತಿಂಗಳಿಂದಲೇ ತೀವ್ರ ತೊಂದರೆಯಲ್ಲಿರುವ ಗುಲ್ಬರ್ಗ ಮಂದಿಗೆ ಇದೀಗ ಜೆಸ್ಕಾಂ ಕಂಪನಿ ಫೀಡರ್ ದುರಸ್ತಿ, ನಿರ್ವಹಣೆ ಎಂದು ಹೆಚ್ಚಿನ ಬರೆ ನೀಡಲು ಮುಂದಾಗಿದೆ. ಬಿಸಿಲು ಹಾಗೂ ಪಾದರಸ ಎರಡೂ ಹೈಜಂಪ್ ಮಾಡಿರುವ ಗುಲ್ಬರ್ಗದಲ್ಲಿ ಫ್ಯಾನ್, ಹವಾ ನಿಯಂತ್ರಕ ಇಲ್ಲದೆ ಬದುಕೇ ದುರ್ಬರ ಎಂಬಂತಾಗಿದೆ. ಈಗಲೇ ಇಲ್ಲಿನ  ವಿದ್ಯುತ್ ಸರಬರಾಜು ಕಂಪನಿ ಫೀಡರ್‌ಗಳ ದುರಸ್ತಿ, ನಿರ್ವಹಣೆ ಎಂದು ನಗರದ ಹತ್ತಾರು ಬಡಾವಣೆಗಳಲ್ಲಿ ಏ. 4 ಮತ್ತು 5ರ ಗುರುವಾರ ಹಾಗೂ ಶುಕ್ರವಾರ ವಿದ್ಯುತ್ ವ್ಯತ್ಯಯ ಮಾಡುವುದಾಗಿ ಹೇಳಿದೆ.
ಫೀಡರ್ ನಿರ್ವರ್ಹಣೆ, ಪರಿವರ್ತಕ ರಿಪೇರಿ, ದುರಸ್ತಿ ಕೆಲಸಗಳನ್ನು ಚಳಿಗಾಲದಲ್ಲೋ, ಮಳೆಗಾಲ ಪೂರ್ವದ ಜೂನ್‌ನಲ್ಲಿ ಇಟ್ಟುಕೊಳ್ಳಬಹುದು. ಅದೆಲ್ಲ ಬಿಟ್ಟು ಉರಿ ಬಿಸಿಲಿನ ಏಪ್ರಿಲ್ ಮತ್ತು ಮೇ ತಿಂಗಳಲ್ಲೇ ಯಾಕೆ? ಎಂದು ಗುಲ್ಬರ್ಗ ಜನತೆ ಕಂಪನಿಯ ರಿಪೇರಿ, ನಿರ್ವಹಣೆಯ ನೀತಿಗಳನ್ನೇ ಟೀಕಿಸುತ್ತಿದ್ದಾರೆ.
ಇಂದು ಇಲ್ಲೆಲ್ಲಾ ಕರೆಂಟ್ ಇರಲ್ಲ: ಕೆಲವೊಂದು ಫೀಡರಿನ ತುರ್ತು ಕೆಲಸ ಕೈಗೆತ್ತಿಕೊಂಡ ಪ್ರಯುಕ್ತ ಈ ಮುಂದೆ ತಿಳಿಸಿದ ಬಡಾವಣೆಗಳಲ್ಲಿ 4ರ ಗುರುವಾರ ಬೆಳಗಿನ 9ರಿಂದ ಸಾಯಂಕಾಲ 5ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ.
11 ಕೆ.ವಿ. ಶಾಂತಿನಗರ ಫೀಡರ್:  ಶಾಂತಿನಗರ, ಎಂ.ಎಸ್.ಕೆ. ಮಿಲ್, ಜಿಡಿಎ, ಎಂ.ಎಸ್.ಕೆ. ಮಿಲ್ ಗೇಟ್, ಕದೀರ ಚೌಕ, ಮೊಹ್ಮದಿ ಚೌಕ, ಗಾಲಿಬ ಕಾಲೋನಿ, ವೆಂಕಟೇಶ್ವರ ಟೆಂಪಲ್, ಅಫಜಲ್ಪುರ ಕ್ರಾಸ್, ವಿದ್ಯಾನಗರ, ವಡ್ಡರಗಲ್ಲಿ, ಬೋರಬಾಯಿನಗರ, ಬಸವನಗರ.
11 ಕೆ.ವಿ. ಐವಾನ್-ಇ-ಶಾಹಿ ಫೀಡರ್: ಜಾಜೀ ಬ್ಲಾಕ್, ಪಿಡಿಎ ಕಾಲೇಜ್, ಐವಾನ್-ಇ-ಶಾಹಿ ಗೆಸ್ಟ್‌ಹೌಸ್ ಎದುರು, ಪಿಡಬ್ಲ್ಯೂಡಿ ಕ್ವಾರ್ಟಸ್, ಯತೀಮ ಖಾನಾ, ಲಾಹೋಟಿ ಲೇಔಟ್, ವಿಧಾನಸೌಧ ಎದುರು, ಸ್ಟೇಷನ್ ಬಜಾರ ಮತ್ತು ತಿಮ್ಮಾಪುರ ಸರ್ಕಲ್
11 ಕೆ.ವಿ. ಜೇವರ್ಗಿ ಕಾಲೋನಿ ಫೀಡರ್: ಗುಡಲಕ್ ಹೊಟೇಲ್, ಮಲ್ಲಿಕಾರ್ಜುನ ರೆಡ್ಡಿ ಟಿ.ಸಿ, ರೂಬಿ ಟಿ.ಸಿ, ಸರಸ್ವತಿ ಉದ್ಯಾನ, ಆನಂದನಗರ, ಆನಂದ ಹೊಟೇಲ್, ಟಿ.ಸಿ. ಕಾಲೋನಿ, ಸಂಗಮೇಶ್ವರ ಗುಡಿ ಟಿ.ಸಿ. ಜಾಜೀ ಟಿ.ಸಿ. ಪಟೇಲ್ ಬುಕ್, ರಾಮನಗರ, ಎಸ್.ಬಿ. ಕಾಲೇಜು ಟಿ.ಸಿ. ಏರಿಯಾ, ಶ್ಯಾಮಬಾರ ರಾಮನಗರ, ಫಾರೆಸ್ಟ್ ಟಿ.ಸಿ., ಮಿನಿ ವಿಧಾನಸೌಧ, ಮೆಹತಾ ಕಾಂಪ್ಲೆಕ್ಸ್, ಹಿಂದೂಸ್ತಾನ್ ಚರ್ಚ್, ದೀದಿ ಹಾಸ್ಪಿಟಲ್, ಬಸ್ ಮಂಟಪ, ಟಿ.ಎ. ಪಾಟೀಲ್ ಟಿ.ಸಿ., ಇಂದಿರಾನಗರ, ಕೃಷ್ಣಾ ಟೆಂಪಲ್ ಏರಿಯಾ, ಡಿಪೋ ನಂ.-3 ವಿದ್ಯಾನಗರ, ಮಲಕರೆಡ್ಡಿ ದವಾಖಾನೆ, ಸಿವಿಲ್ ಕೋರ್ಟ್ ಏರಿಯಾ, ಆನಂದನಗರ ಮತ್ತು ವಿವೇಕಾನಂದ ನಗರ.
ನಾಳೆ ಶುಕ್ರವಾರದಂದು ಹಲವೆಡೆ ವ್ಯತ್ಯಯ: ಅದರಂತೆ ಏ. 5ರ ಶುಕ್ರವಾರ 11 ಕೆವಿಎಂಎಸ್‌ಕೆ ಮಿಲ್ ಫೀಡರ್- ಮದೀನಾ ಕಾಲೋನಿ, ಟ್ಯಾಂಕ್ ಬಂಡ್, ಇಕ್ಬಾಲ್ ಕಾಲೋನಿ, ಹುಸೇನ್ ಗಾರ್ಡನ್, ಕೃಷ್ಣಾ ಮಿನರಲ್ ವಾಟರ್, ವಿರೂಪಾಕ್ಷೇಶ್ವರ ಟಿ.ಸಿ., ಮಿಸ್ಬಾನಗರ, ಹೀರಾಪುರ, ಭೀಮನಗರ, ಹೀರಾನಗರ ಮತ್ತು ಕೆಎಸ್‌ಆರ್‌ಟಿಸಿ ಕ್ವಾರ್ಟರ್ಸ್.
11 ಕೆ.ವಿ. ಮಹಾವೀರ ನಗರ ಫೀಡರ್: ರೈಲ್ವೆ ಟ್ರ್ಯಾಕ್, ಹನುಮಾನ ನಗರ, ಶಾಸ್ತ್ರೀನಗರ, ಸ್ಟೇಷನ್ ಬಜಾರ್, ಅಪ್ಪರಲೈನ್, ತಾರ್ಫ್ಯಲ್ ಏರಿಯಾ 1ರಿಂದ 14 ಕ್ರಾಸ್‌ವರೆಗೆ, ಬುದ್ಧನಗರ, ಸೋನುಬಾಯಿ ನಗರ, ವಿಶಾಲನಗರ, ಪಂಚಶೀಲ ನಗರ, ಕೆಇಬಿ ಕ್ವಾರ್ಟರ್ಸ್, ವೆಂಕಟೇಶನಗರ, ಹಳೇ ಜೇವರ್ಗಿ ರಸ್ತೆ, ಹಮಾಲವಾಡಿ ಮತ್ತು ನಾಗಾರ್ಜುನ ಹೋಟೇಲ್ ಏರಿಯಾ.
11 ಕೆ.ವಿ. ರಾಮಮಂದಿರ ಫೀಡರ್: ಕರುಣೇಶ್ವರನಗರ, ಸಿದ್ದೇಶ್ವರ ಕಲ್ಯಾಣ ಮಂಟಪ, ಪಿ ಮತ್ತು ಟಿ ಕಾಲೋನಿ, ಎಸ್.ಬಿ.ಐ. ಕಾಲೋನಿ, ಸಾಯಿ ಮಂದಿರ, ರಾಮಮಂದಿರ, ಓಝಾ ಲೇಔಟ್, ಧನ್ವಂತರಿ, ತಿಮ್ಮಾಪೂರ ಲೇಔಟ್ ಮತ್ತು ನವಣಿ ಲೇಔಟ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement